Published on: October 18, 2021

ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಜಿನ್ ಬಂದ್ ಅಭಿಯಾನ

ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಜಿನ್ ಬಂದ್ ಅಭಿಯಾನ

ಸುದ್ಧಿಯಲ್ಲಿ ಏಕಿದೆ?ದಿಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರಕಾರ ಸಾಕಷ್ಟು ಮುಂಚಿತವಾಗಿಯೇ ಕಾರ್ಯಪ್ರವೃತ್ತವಾಗಿದೆ. ಇದರ ಭಾಗವಾಗಿ ‘ಕೆಂಪು ದೀಪ ಹತ್ತಿದ ತಕ್ಷಣ ಎಂಜಿನ್‌ ಆಫ್‌ ಮಾಡಿ’ ಅಭಿಯಾನಕ್ಕೆ ಅ.18ರಂದು ಚಾಲನೆ ನೀಡಲಿದೆ.

  • ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಕೆಂಪು ದೀಪ ಕಂಡ ಕೂಡಲೇ ವಾಹನಗಳ ಎಂಜಿನ್‌ ಆಫ್‌ ಮಾಡುವ ಮೂಲಕ ಅನಗತ್ಯವಾಗಿ ವಾಹನದ ಹೊಗೆ ವಾತಾವರಣಕ್ಕೆ ಸೇರುವುದನ್ನು ತಡೆಯಬಹುದು. ದಿಲ್ಲಿ ನಗರದಲ್ಲಿ ವಾಹನಗಳು ಉಗುಳುವ ಹೊಗೆ ಕೂಡ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ಅಭಿಯಾನದ ಅವಶ್ಯಕತೆ

  • ತಜ್ಞರ ಪ್ರಕಾರ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಕೆಂಪು ದೀಪ ಉರಿಯುತ್ತಿದ್ದಾಗ ವಾಹನಗಳ ಎಂಜಿನ್‌ ಆಫ್‌ ಮಾಡಿದರೆ ಒಟ್ಟಾರೆಯಾಗಿ 250 ಕೋಟಿ ರೂ. ಇಂಧನ ದೇಶದಲ್ಲಿ ಉಳಿಕೆ ಆಗುತ್ತದೆ. ಜತೆಗೆ ವಾಯುಮಾಲಿನ್ಯ ಪ್ರಮಾಣ ಕೂಡ 13-20% ತಗ್ಗುತ್ತದೆ
  • ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚು: ಚಳಿಗಾಲ ಆರಂಭವಾಯಿತೆಂದರೆ ದಿಲ್ಲಿ ಹಾಗೂ ಸುತ್ತಲಿನ ನಗರಗಳಲ್ಲಿ ವಾಯುಮಾಲಿನ್ಯ ಸಮಸ್ಯೆ ಎದುರಾಗುತ್ತದೆ. ದಿಲ್ಲಿ ಸೇರಿದಂತೆ ದೇಶದ ಉತ್ತರ ಭಾಗದಲ್ಲಿನ ಅತ್ಯಂತ ಕೆಟ್ಟ ಗಾಳಿ ಸೇವನೆಯಿಂದ ಸಮಸ್ಯೆಗೆ ಗುರಿಯಾದವರು ಅಧಿಕ ಎಂದು ವರದಿ ಹೇಳಿದೆ.
  • ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್‌, ಬಿಹಾರ ಹಾಗೂ ಪಶ್ಚಿಮ ಬಂಗಾಳವನ್ನು ಗಂಗಾ ನದಿ ಯ ಕಿನಾರೆ ರಾಜ್ಯಗಳು ಎಂದು ಗುರಿತಿಸಲಾಗುತ್ತಿದ್ದು, ಈ ಎಲ್ಲ ರಾಜ್ಯಗಳಲ್ಲಿ ಜನರ ಜೀವಿತಾವಧಿ ವಾಯುಮಾಲಿನ್ಯದಿಂದಾಗಿ ನಶಿಸುತ್ತಿದೆ ಎಂದು ವಿಶ್ಲೇಶಿಸಲಾಗಿದೆ. ದಿಲ್ಲಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.