Published on: April 15, 2023

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಏಪ್ರಿಲ್ 14ರಂದು ಭಾರತದ ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್  ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಇದು ಅವರ 132 ನೇ ಜನ್ಮದಿನವಾಗಿದೆ

ಅಂಬೇಡ್ಕರ್ ಜೀವನ

  • ಪೂರ್ಣ ಹೆಸರು : ಡಾಕ್ಟರ್. ಭೀಮರಾವ್ ಅಂಬೇಡ್ಕರ್
  • ಜನನ : ಡಾ. ಭೀಮರಾವ್ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್‌ನಲ್ಲಿ 1891 ರ ಏಪ್ರಿಲ್ 14 ರಂದು ಜನಿಸಿದರು. ಮಹಾರ‍ ಜಾತಿಯಲ್ಲಿ ಜನಿಸಿದ ಇವರು, ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು.
  • ಅಂಬೇಡ್ಕರ್ ಅವರ ನಿಜವಾದ ಉಪನಾಮ ಅಂಬಾವಾಡೇಕರ್
  • ತಂದೆ: ರಾಮ್‌ಜಿ ಮಾಲೋಜಿ ಸಕ್ಪಾಲ್‌ ತಾಯಿ: ಭೀಮಾಬಾಯಿ

ಶಿಕ್ಷಣ

  • ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್‌ (ಪಿಎಚ್‌ಡಿ) ಪದವಿ ಪಡೆದ ಮೊದಲ ಭಾರತೀಯ
  • ಇವರು ಸುಮಾರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು

ಅವರ ಜೀವನದ ಕೆಲವು ಸಂಗತಿಗಳು

  • ಅವರು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಬಗ್ಗೆ ಹೋರಾಟವನ್ನು ಪ್ರಬಲವಾಗಿ ಆರಂಭಿಸಿದರು.
  • 1920 ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು.
  • ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದರು.
  • ಅವರು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು.
  • ಅವರು 1956 ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
  • ಅವರು ದೆಹಲಿಯ ತಮ್ಮ ಮನೆಯಲ್ಲಿ 1956 ರಂದು ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು.
  • ಅವರಿಗೆ 1990 ರಲ್ಲಿ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
  • ಅವರು ಬರೆದ ʼವೈಟಿಂಗ್‌ ಫಾರ್‌ ವೀಸಾʼ ಪುಸ್ತಕವು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿದೆ.
  • 2004ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯವು ವಿಶ್ವದ ಅಗ್ರ 100 ಮಂದಿ ವಿದ್ವಾಂಸರ ಪಟ್ಟಿ ಮಾಡಿತ್ತು, ಆ ಪಟ್ಟಿಯಲ್ಲಿ ಅಂಬೇಡ್ಕರ್‌ ಹೆಸರು ಮೊದಲ ಸ್ಥಾನದಲ್ಲಿತ್ತು.
  • ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ʼಡಾಕ್ಟರ್ ಆಲ್ ಸೈನ್ಸ್ʼ ಎಂಬ ಮೌಲ್ಯಯುತ ಡಾಕ್ಟರೇಟ್ ಪದವಿಯನ್ನು ಪಡೆದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿ ಬಾಬಾಸಾಹೇಬ್