Published on: July 27, 2023
ಡಿಎನ್ಎ ತಂತ್ರಜ್ಞಾನ ನಿಯಂತ್ರಣ ಮಸೂದೆ
ಡಿಎನ್ಎ ತಂತ್ರಜ್ಞಾನ ನಿಯಂತ್ರಣ ಮಸೂದೆ
ಸುದ್ದಿಯಲ್ಲಿ ಏಕಿದೆ? ಡಿಯೋಕ್ಸಿರೈಬೋನ್ಯೂಕ್ಲಿಕ್ ಆಸಿಡ್ (ಡಿಎನ್ಎ) ತಂತ್ರಜ್ಞಾನ (ಬಳಕೆ ಮತ್ತು ಅಪ್ಲಿಕೇಶನ್) ನಿಯಂತ್ರಣ ಮಸೂದೆ- 2019 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಿಂದ ಹಿಂಪಡೆದಿದೆ.
ಹಿಂಪಡೆಯಲು ಕಾರಣ
- ಈ ಮಸೂದೆಯ ಹೆಚ್ಚಿನ ಷರತ್ತುಗಳನ್ನು ಇತ್ತೀಚೆಗೆ ಪರಿಚಯಿಸಲಾದ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) 2022 ರ ಕಾಯಿದೆ ಈಗಾಗಲೇ ಈ ಅಂಶಗಳನ್ನು ಒಳಗೊಂಡಿದೆ.ಅಪರಾಧ ಪ್ರಕರಣಗಳಲ್ಲಿ ಗುರುತಿಸುವಿಕೆ ಮತ್ತು ತನಿಖೆಯ ಉದ್ದೇಶಗಳಿಗಾಗಿ ಅಪರಾಧಿಗಳು ಮತ್ತು ಇತರ ವ್ಯಕ್ತಿಗಳ ಅಳತೆಗಳನ್ನು ತೆಗೆದುಕೊಳ್ಳಲು ಕಳೆದ ವರ್ಷ ಏಪ್ರಿಲ್ನಲ್ಲಿ ಸರ್ಕಾರವು ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯಿದೆ, 2022 ಅನ್ನು ಜಾರಿಗೊಳಿಸಿದೆ.
ಏನಿದು ಮಸೂದೆ?
- ಸಂತ್ರಸ್ತರು, ಅಪರಾಧಿಗಳು, ಶಂಕಿತರು, ವಿಚಾರಣಾಧೀನ ಕೈದಿಗಳು, ನಾಪತ್ತೆಯಾದವರು ಮತ್ತು ಅಪರಿಚಿತ ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್ಎ ತಂತ್ರಜ್ಞಾನದ ಬಳಕೆ ಮತ್ತು ಅನ್ವಯದ ನಿಯಂತ್ರಣದ ಅಗತ್ಯವನ್ನು ಗುರುತಿಸಿ ಮಸೂದೆಯನ್ನು ರೂಪಿಸಲಾಗಿದೆ. ಈ ಮಸೂದೆಯನ್ನು 2019 ಜುಲೈ 8ರಂದು ಪರಿಚಯಿಸಲಾಗಿತ್ತು
- ದೇಶದ ನ್ಯಾಯ ವಿತರಣಾ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಬಲಪಡಿಸಲು ಡಿಎನ್ಎ-ಆಧಾರಿತ ವಿಧಿವಿಜ್ಞಾನ ತಂತ್ರಜ್ಞಾನಗಳ ಅನ್ವಯವನ್ನು ವಿಸ್ತರಿಸುವುದು ಈ ಮಸೂದೆಯ ಉದ್ದೇಶವಾಗಿದೆ.