Published on: September 2, 2021

ಡಿಜಿಟಲ್‌ ನಿಶ್ಚಿತ ಠೇವಣಿ ಸೇವೆ

ಡಿಜಿಟಲ್‌ ನಿಶ್ಚಿತ ಠೇವಣಿ ಸೇವೆ

ಸುದ್ಧಿಯಲ್ಲಿ ಏಕಿದೆ? ಗೂಗಲ್‌ ಪೇ ಮೂಲಕ ಡಿಜಿಟಲ್‌ ಆಗಿಯೇ ನಿಶ್ಚಿತ ಠೇವಣಿಗಳನ್ನು ಗ್ರಾಹಕರು ಇಡಬಹುದು ಎಂದು ಈಕ್ವಿಟಾಸ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (ಎಸ್‌ಎಫ್‌ಬಿ) ಪ್ರಕಟಿಸಿದೆ. ಸದ್ಯಕ್ಕೆ ಈ ಸೇವೆ ಆಂಡ್ರಾಯ್ಡ್‌ ಫೋನ್‌ ಮೂಲಕ ಆಪ್‌ ಬಳಸುತ್ತಿರುವ ಗ್ರಾಹಕರಿಗೆ ಮಾತ್ರ ಸಿಗಲಿದೆ.

  • “ಈಕ್ವಿಟಾಸ್ ಎಸ್‌ಎಫ್‌ಬಿ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಗೂಗಲ್ ಪೇ ಬಳಕೆದಾರರಿಗೆ ಬ್ಯಾಂಕ್ ಖಾತೆಯನ್ನು ತೆರೆಯದೆ 2 ನಿಮಿಷಗಳಲ್ಲಿ ಸ್ಥಿರ ಠೇವಣಿಗಳನ್ನು (ಎಫ್‌ಡಿ) ಬುಕ್ ಮಾಡಲು ಅನುವು ಮಾಡಿಕೊಡುತ್ತದೆ,” ಎಂದು ಬ್ಯಾಂಕ್‌ ಹೇಳಿದೆ.
  • ಈಕ್ವಿಟಾಸ್‌ನಲ್ಲಿ ಡೆಪಾಸಿಟ್‌ ಮಾಡುವವರಿಗೆ 5 ಲಕ್ಷ ರೂಪಾಯಿವರೆಗೆ ವಿಮೆಯೂ ಇದೆ ಎಂದು ಬ್ಯಾಂಕ್‌ ಹೇಳಿದ್ದು, 1 ವರ್ಷದ ನಿಶ್ಚಿತ ಠೇವಣಿಗೆ ಗ್ರಾಹಕರು ಶೇ. 6.35ರಷ್ಟು ಬಡ್ಡಿದರ ಪಡೆಯಲಿದ್ದಾರೆ ಎಂದು ತಿಳಿಸಿದೆ. ಹಲವು ಬ್ಯಾಂಕ್‌ಗಳಿಗೆ ಹೋಲಿಸಿದರೆ ಈಕ್ವಿಟಾಸ್‌ ಬಡ್ಡಿದರ ಹೆಚ್ಚಿದೆ.
  • ಮೆಚುರಿಟಿ ಅವಧಿ ತಲುಪುತ್ತಿದ್ದಂತೆ ಅಸಲು ಮತ್ತು ಬಡ್ಡಿ ಮೊತ್ತ ನೇರವಾಗಿ ಗೂಗಲ್‌ ಪೇ ಬಳಕೆದಾರರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಇದು ಭಾರತದಲ್ಲಿರುವ ಯಾವುದೇ ಬ್ಯಾಂಕ್‌ ಕೂಡ ಆಗಿರಬಹುದು ಎಂದು ಬ್ಯಾಂಕ್‌ ಹೇಳಿದೆ.

ಗೂಗಲ್‌ ಪೇ ಮೂಲಕ ಈಕ್ವಿಟಾಸ್‌ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡುವುದು ಹೇಗೆ?

  • ಮೊದಲಿಗೆ ಗೂಗಲ್‌ ಪೇ ಆಪ್‌ ಓಪನ್‌ ಮಾಡಿ, ‘ಬಿಸಿನೆಸ್‌ ಆಂಡ್‌ ಬಿಲ್ಸ್‌’ಗೆ ಹೋಗಿ
  • ಈಕ್ವಿಟಾಸ್‌ ಎಸ್‌ಎಫ್‌ಬಿ ಲೋಗೋ ಮೇಲೆ ಕ್ಲಿಕ್‌ ಮಾಡಿ (ಲೋಗೋ ಕಾಣಿಸದೇ ಇದ್ದಲ್ಲಿ ಈಕ್ವಿಟಾಸ್‌ ಬ್ಯಾಂಕ್‌ – Equitas Bank – ಎಂದು ಸರ್ಚ್‌ ಮಾಡಿ)
  • ಈಕ್ವಿಟಾಸ್‌ ಬ್ಯಾಂಕ್‌ನ ಪೇಜ್‌ ತೆರೆದ ನಂತರ ಹಣದ ಮೊತ್ತ ಮತ್ತು ಅವಧಿ ಆಯ್ಕೆ ಮಾಡಿ
  • ನಿಮ್ಮ ವೈಯಕ್ತಿಕ ಕೆವೈಸಿ ಮಾಹಿತಿಯನ್ನು (ಪ್ಯಾನ್‌ ಸಂಖ್ಯೆ & ಆಧಾರ್‌ ಸಂಖ್ಯೆ) ಈಕ್ವಿಟಾಸ್‌ ಬ್ಯಾಂಕ್‌ಗೆ ನೀಡಿ.
  • ಗೂಗಲ್‌ ಪೇ ಮೂಲಕ ಹಣ ಪಾವತಿಸಿ

ಎಫ್‌ಡಿ ಬುಕ್ಕಿಂಗ್‌ನ ನಂತರ

  • ನಿಶ್ಚಿತ ಠೇವಣಿ ಮೆಚುರಿಟಿ ಹಂತಕ್ಕೆ ಬರುತ್ತಿದ್ದಂತೆ ಹಣ ನೇರವಾಗಿ ಗೂಗಲ್‌ ಪೇ ಬಳಕೆದಾರರ ಹಾಲಿ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಗೂಗಲ್‌ ಪೇ ಮೂಲಕವೇ ಬಳಕೆದಾರರು ತಮ್ಮ ಹೂಡಿಕೆಯನ್ನು ಟ್ರ್ಯಾಕ್‌ ಮಾಡಬಹುದು, ಹೊಸ ಠೇವಣಿಯನ್ನು ಸೇರಿಸಬಹುದು ಮತ್ತು ಅವಧಿಗೂ ಮುನ್ನ ಹಣವನ್ನು ಹಿಂತೆಗೆದುಕೊಳ್ಳಲೂಬಹುದು. ಅವಧಿಗೂ ಮುನ್ನ ನಿಶ್ಚಿತ ಠೇವಣಿ ಹಿಂತೆಗೆದುಕೊಳ್ಳಲು ಬಯಸಿದರೆ ಅದೇ ದಿನ ಸಂದೇಶ ಬ್ಯಾಂಕ್‌ಗೆ ರವಾನೆಯಾಗಲಿದೆ.
  • ಇತ್ತೀಚೆಗೆ ಫಿನ್‌ಟೆಕ್‌ ಸ್ಟಾರ್ಟಪ್‌ ‘ಸೆತು’ ಜತೆ ಗೂಗಲ್‌ ಪೇ ಕೈಜೋಡಿಸಿತ್ತು. ಈ ಮೂಲಕ ಬಳಕೆದಾರರಿಗೆ ಗೂಗಲ್‌ ಪೇನಲ್ಲೇ ನಿಶ್ಚಿತ ಠೇವಣಿ ಖಾತೆಗಳನ್ನು ತೆರಯಲು ಅವಕಾಶ ಕಲ್ಪಿಸಿತ್ತು.

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD

  • ಈ ಸಣ್ಣ ಹಣಕಾಸು ಬ್ಯಾಂಕ್ ಅನ್ನು 2016 ರಲ್ಲಿ ಮೈಕ್ರೋ ಫೈನಾನ್ಸ್ ಸಾಲವಾಗಿ ಸ್ಥಾಪಿಸಲಾಯಿತು. ಇದು 2017 ರಲ್ಲಿ ನಿಗದಿತ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಇದು ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಇದು ಹಿಲ್ಡಿಂಗ್ ಕಂಪನಿಯಾದ ಇಕ್ವಿಟಾಸ್ ಹೋಲ್ಡಿಂಗ್ಸ್ ಲಿಮಿಟೆಡ್ ನ ಅಂಗಸಂಸ್ಥೆಯಾಗಿದೆ.