Published on: August 2, 2021
ಡಿಜಿಟಲ್ ಪಾವತಿಗೆ ಹೊಸ ವ್ಯವಸ್ಥೆ ಇ–ರುಪೀ:
ಡಿಜಿಟಲ್ ಪಾವತಿಗೆ ಹೊಸ ವ್ಯವಸ್ಥೆ ಇ–ರುಪೀ:
ಸುದ್ಧಿಯಲ್ಲಿ ಏಕಿದೆ ? ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ವ್ಯವಸ್ಥೆ ‘ಇ–ರುಪೀ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
ಪ್ರಯೋಜನಗಳು
- ನಗದುರಹಿತ, ಸಂಪರ್ಕರಹಿತ ಡಿಜಿಟಲ್ ಪಾವತಿ, ಸೇವಾ ಪ್ರಾಯೋಜಕರು ಹಾಗೂ ಫಲಾನುಭವಿಗಳನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸುವುದು, ವಿವಿಧ ಕಲ್ಯಾಣ ಸೇವೆಗಳು ಸೋರಿಕೆರಹಿತವಾಗಿ ಫಲಾನುಭವಿಗಳನ್ನು ತಲುಪುವಂತೆ ಮಾಡುವುದು ಈ ವ್ಯವಸ್ಥೆಯ ಕೆಲವು ಪ್ರಯೋಜನಗಳು
- ಯಾವುದೇ ಕಾರ್ಡ್, ಡಿಜಿಟಲ್ ಪೇಮೆಂಟ್ ಆ್ಯಪ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದಿದ್ದರೂ, ಇದನ್ನು ನಗದೀಕರಿಸಿಕೊಳ್ಳಬಹುದು.
- ಯಾವುದೇ ಮೊಬೈಲ್ನಿಂದಲೂ ಇ-ರೂಪಾಯಿ ವೋಚರ್ ಅನ್ನು ಬಳಸಬಹುದು. ಇ-ರುಪಿ ಎಸ್ಸೆಮ್ಮೆಸ್ ಅಥವಾ ಕ್ಯೂ ಆರ್ ಕೋಡ್ ಇದ್ದರೆ ಅದನ್ನು ಬಳಸಬಹುದು.
- ಆರೋಗ್ಯ, ಮಕ್ಕಳ ಕಲ್ಯಾಣ, ಔಷಧ, ರಸಗೊಬ್ಬರ ಮತ್ತಿತರ ವಿಷಯಗಳಲ್ಲಿ ಸರಕಾರದ ಹಣಕಾಸು ನೆರವನ್ನು ಇದರ ಮೂಲಕ ಪಡೆಯಬಹುದು.
- ಸಾಮಾಜಿಕ ಯೋಜನೆಗಳ ಸೋರಿಕೆ ತಡೆ ವಿತರಣೆಗೆ ಉಪಯುಕ್ತ. ನೇರ ನಗದು ವರ್ಗಾವಣೆಗೆ (ಡಿಬಿಟಿ) ಇದು ಪರ್ಯಾಯ ಎನ್ನಲಾಗುತ್ತಿದೆ.
- ಪ್ರೀಪೇಯ್ಡ್ ವೋಚರ್ ಆದ್ದರಿಂದ ಫಲಾನುಭವಿಯು ಬೇಕಾದಾಗ ಬಳಸಿಕೊಳ್ಳಬಹುದು.
- ಖಾಸಗಿ ವಲಯವೂ ಉದ್ಯೋಗಿಗಳ ಕಲ್ಯಾಣ ಯೋಜನೆಗಳು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಗಳಲ್ಲಿ ಬಳಸಬಹುದು.
ಏನಿದು ಇ–ರುಪೀ?
- ‘ಇದು ನಗದುರಹಿತ, ಸಂಪರ್ಕರಹಿತ ಡಿಜಿಟಲ್ ಪಾವತಿ ವ್ಯವಸ್ಥೆ. ಕ್ಯುಆರ್ ಕೋಡ್ ಅಥವಾ ಎಸ್ಎಂಸ್ ಆಧಾರಿತ ಇ–ವೋಚರ್.
ಇ-ರೂಪಿನ ಕೆಲಸದ ಕಾರ್ಯವಿಧಾನ
- ಇದನ್ನು ಫಲಾನುಭವಿಯ ಮೊಬೈಲ್ಗೆ ಕಳುಹಿಸಲಾಗುತ್ತದೆ. ಈ ತಡೆರಹಿತ ಒನ್-ಟೈಮ್ ಪಾವತಿ ಕಾರ್ಯವಿಧಾನದ ಮೂಲಕ ಬಳಕೆದಾರರು ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸದೇ, ಸೇವಾ ಪೂರೈಕೆದಾರರಿಂದ ವೋಚರ್ ಅನ್ನು ರಿಡೀಮ್ ಮಾಡಬಹುದಾಗಿದೆ.
- ರಾಷ್ಟ್ರೀಯ ಪಾವತಿ ನಿಗಮವು ತನ್ನ ಯುಪಿಐ ವ್ಯವಸ್ಥೆಯಲ್ಲೇ ಇದನ್ನು ಅಭಿವೃದ್ಧಿಪಡಿಸಿದೆ.
- ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ’
ಬ್ಯಾಂಕ್ ಗಳ ಬೆಂಬಲ
- ಪ್ರಸ್ತುತ 11 ಬ್ಯಾಂಕ್ಗಳು ಇ-ರುಪಿಯನ್ನು ಬೆಂಬಲಿಸುತ್ತಿವೆ. ಕೆಲ ಬ್ಯಾಂಕ್ಗಳು ಇ-ರುಪಿಯನ್ನು ಬಿಡುಗಡೆ ಮಾಡುತ್ತವೆ. ಆದರೆ ಸ್ವೀಕರಿಸುವುದಿಲ್ಲ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತಿತರ ಬ್ಯಾಂಕ್ಗಳು ಬಿಡುಗಡೆ ಮತ್ತು ಸ್ವೀಕೃತಿ ಎರಡೂ ಸೇವೆಗಳನ್ನು ನೀಡುತ್ತವೆ.
ಈ ವೋಚರ್ಗಳನ್ನು ಹೇಗೆ ನೀಡಲಾಗುತ್ತದೆ?
- ಈ ವ್ಯವಸ್ಥೆಯನ್ನು ಎನ್ಪಿಸಿಐ ತನ್ನ ಯುಪಿಐ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಿದ್ದು, ಬ್ಯಾಂಕ್ಗಳು ಇವನ್ನು ನೀಡುವ ಸಂಸ್ಥೆಗಳಾಗಿವೆ. ಯಾವುದೇ ಕಾರ್ಪೊರೇಟ್ ಅಥವಾ ಸರ್ಕಾರಿ ಸಂಸ್ಥೆಯು ಪಾಲುದಾರ ಬ್ಯಾಂಕುಗಳನ್ನು ಸಂಪರ್ಕಿಸಬೇಕಾಗುತ್ತದೆ. ಬ್ಯಾಂಕುಗಳು ಖಾಸಗಿಯೂ ಆಗಿರಬಹುದು, ಸಾರ್ವಜನಿಕ ವಲಯದ ಬ್ಯಾಂಕುಗಳೂ ಆಗಿರಬಹುದು.
- ಈ ಬ್ಯಾಂಕ್ಗಳನ್ನು ಸಂಪರ್ಕಿಸಿ ನಿರ್ದಿಷ್ಟ ವ್ಯಕ್ತಿಗಳ ವಿವರಗಳು ಮತ್ತು ಪಾವತಿಗಳನ್ನು ಮಾಡಬೇಕಾದ ಉದ್ದೇಶವನ್ನು ತಿಳಿಸಬೇಕು. ಫಲಾನುಭವಿಗಳನ್ನು ಅವರ ಮೊಬೈಲ್ ಸಂಖ್ಯೆಯ ಮೂಲಕ ಗುರುತಿಸಲಾಗುತ್ತದೆ. ಸೇವಾದಾತರ ಪರವಾಗಿ ಬ್ಯಾಂಕ್ ನೀಡಿದ ವೋಚರ್ ಅನ್ನು ಆ ವ್ಯಕ್ತಿಗೆ ಮಾತ್ರ ನೀಡಲಾಗುತ್ತದೆ.
ಇ-ರುಪಿಯ ಮಹತ್ವವೇನು ಮತ್ತು ಇದು ಡಿಜಿಟಲ್ ಕರೆನ್ಸಿಗಿಂತ ಹೇಗೆ ಭಿನ್ನ?
- ಸರ್ಕಾರವು ಈಗಾಗಲೇ ರಿಸರ್ವ್ ಬ್ಯಾಂಕ್ ಮೂಲಕ ಡಿಜಿಟಲ್ ಕರೆನ್ಸಿಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಮತ್ತು ಇ-ರುಪಿ ಆರಂಭವು ಡಿಜಿಟಲ್ ಪಾವತಿ ಮೂಲಸೌಕರ್ಯದಲ್ಲಿನ ಅಂತರವನ್ನು ಸಮರ್ಥವಾಗಿ ತೋರಿಸಲಿದೆ ಎಂದುಕೊಳ್ಳಲಾಗಿದೆ. ಇದು ಭವಿಷ್ಯದ ಡಿಜಿಟಲ್ ಕರೆನ್ಸಿಯ ಯಶಸ್ಸಿಗೆ ಅಗತ್ಯವಾಗಿರುತ್ತದೆ.
- ಇ-ರುಪಿ ಈಗಿರುವ ಭಾರತೀಯ ರೂಪಾಯಿಯ ಸಂಪೂರ್ಣ ಬೆಂಬಲವನ್ನು ಪಡೆದಿದೆ. ಏಕೆಂದರೆ ಅದರ ಉದ್ದೇಶದ ಆಧಾರವಾಗಿರುವ ಸ್ವತ್ತು ಮತ್ತು ನಿರ್ದಿಷ್ಟತೆಯು ಅದನ್ನು ವರ್ಚುವಲ್ ಕರೆನ್ಸಿಯಿಂದ ಭಿನ್ನವಾಗಿಸುತ್ತದೆ; ಮತ್ತು ಅದನ್ನು ವೋಚರ್ ಆಧಾರಿತ ಪಾವತಿ ವ್ಯವಸ್ಥೆಗೆ ಹತ್ತಿರವಾಗಿಸುತ್ತದೆ.
- ಅಲ್ಲದೆ, ಭವಿಷ್ಯದಲ್ಲಿ ಇ-ರುಪಿಯ ಸರ್ವವ್ಯಾಪಿಯು ಅಂತಿಮ ಬಳಕೆಯ ಪ್ರಕರಣಗಳನ್ನಷ್ಟೆ ಅವಲಂಬಿಸಿರುತ್ತದೆ.
ಭಾರತಕ್ಕೆ ಡಿಜಿಟಲ್ ಕರೆನ್ಸಿಯ ಬಗ್ಗೆ ಒಲವಿದೆಯೇ?
- ಆರ್ಬಿಐ ಪ್ರಕಾರ, ಭಾರತದಲ್ಲಿ ಡಿಜಿಟಲ್ ಕರೆನ್ಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಕನಿಷ್ಠ ನಾಲ್ಕು ಕಾರಣಗಳಿವೆ: ಒಂದು, ದೇಶದಲ್ಲಿ ಡಿಜಿಟಲ್ ಪಾವತಿಗಳ ಸಂಖ್ಯೆ ಹೆಚ್ಚುತ್ತಿದೆ. ಇಂದು ನಗದು ಬಳಕೆಯ ಜತೆ ಜತೆಗೇ ಇದು ನಡೆಯುತ್ತಿದೆ.
- ಎರಡು, ಭಾರತದಲ್ಲಿ ಕರೆನ್ಸಿ ಮತ್ತು ಜಿಡಿಪಿ ನಡುವೆ ಹೆಚ್ಚಿನ ಅನುಪಾತ ಇರುವುದರಿಂದ ಆರ್ಬಿಐ ಪ್ರಕಾರ, ಸಿಬಿಡಿಸಿಗಳು ಇನ್ನೊಂದು ಪ್ರಯೋಜನವನ್ನು ಹೊಂದಿದೆ.
- ಮೂರು, ಬಿಟ್ ಕಾಯಿನ್ ಮತ್ತು ಎಥೆರಿಯಮ್ನಂತಹ ಖಾಸಗಿ ವರ್ಚುವಲ್ ಕರೆನ್ಸಿಗಳು ವೇಗವಾಗಿ ಹರಡುತ್ತಿರುವುದರಿಂದ ಸಿಬಿಡಿಸಿಗಳು ಕೇಂದ್ರೀಯ ಬ್ಯಾಂಕಿನ ದೃಷ್ಟಿಯಿಂದ ಮುಖ್ಯವಾಗಿದೆ.