Published on: December 3, 2022

‘ಡಿಜಿ ಯಾತ್ರಾ’

‘ಡಿಜಿ ಯಾತ್ರಾ’

ಸುದ್ದಿಯಲ್ಲಿ ಏಕಿದೆ?

ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಹೆಚ್ಚು ಅಡೆತಡೆ ಇಲ್ಲದೆ ಪ್ರವೇಶ ಕಲ್ಪಿಸುವ ಹಾಗೂ ವಿಮಾನ ಹತ್ತುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಡಿಜಿ ಯಾತ್ರಾ’ ಸೇವೆಗೆ ಚಾಲನೆ ನೀಡಲಾಗಿದೆ. 

ಮುಖ್ಯಾಂಶಗಳು

  • ಮೊದಲ ಹಂತದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಾರಾಣಸಿಯ ವಿಮಾನ ನಿಲ್ದಾಣದಲ್ಲಿ ಈ ಸೇವೆ ಆರಂಭವಾಗಲಿದೆ.
  • ‘ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಈ ಸೇವೆಯನ್ನು ಹೈದರಾಬಾದ್‌, ಪುಣೆ, ವಿಜಯವಾಡ ಹಾಗೂ ಕೋಲ್ಕತ್ತದ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ’.
  • ಡಿಜಿ ಯಾತ್ರಾ ಆ್ಯಪ್ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿವಿಧ ಚೆಕ್‌ ಪಾಯಿಂಟ್‌ಗಳಲ್ಲಿ ಕಾಗದ ರಹಿತ ಹಾಗೂ ತಡೆರಹಿತವಾಗಿ ತೆರಳಬಹುದಾಗಿದೆ.
  • ಪ್ರಯಾಣ ಪೂರ್ಣಗೊಂಡ 24 ಗಂಟೆಗಳ ಬಳಿಕ ಅದನ್ನು ವಿಮಾನ ನಿಲ್ದಾಣದ ಸರ್ವರ್‌ನಿಂದ ಕಡ್ಡಾಯವಾಗಿ ಅಳಿಸಿಹಾಕಲಾಗುತ್ತದೆ’.

ಉದ್ದೇಶ

  • ‘ಆ್ಯಪ್‌ನಲ್ಲಿ ಪ್ರಯಾಣಿಕರು ದಾಖಲಿಸುವ ಮಾಹಿತಿಯನ್ನು ಗೂಢ ಲಿಪೀಕರಣ ಮಾದರಿಯಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಈ ಮಾಹಿತಿಯು ವಿಕೇಂದ್ರೀಕೃತ ಸ್ವರೂಪದಲ್ಲಿರುವುದರಿಂದ ಅದನ್ನು ಕದಿಯಲು ಅವಕಾಶ ಇರುವುದಿಲ್ಲ. ಪ್ರಯಾಣಿಕರ ಗೌಪ್ಯತೆಗೂ ಧಕ್ಕೆ ಉಂಟಾಗುವುದಿಲ್ಲ’.  ‘ಪ್ರಯಾಣಿಕರ ಮಾಹಿತಿಯು ಅವರ ಮೊಬೈಲ್‌ನಲ್ಲಿ ಮಾತ್ರ ಲಭ್ಯವಿರಲಿದೆ.

ಏನಿದು ಡಿಜಿ ಯಾತ್ರಾ?

  • ಇದು ಆ್ಯಪ್‌ ಆಧಾರಿತ ಸೇವೆಯಾಗಿದ್ದು, ಮುಖ ಗುರುತಿಸುವಿಕೆ ತಂತ್ರಜ್ಞಾನ (ಫೇಸಿಯಲ್‌ ರೆಕಗ್ನೈಸೇಷನ್‌) ಒಳಗೊಂಡಿರಲಿದೆ.
  • ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಪರ್ಕರಹಿತ, ತಡೆರಹಿತ ಸಂಸ್ಕರಣೆಯನ್ನು ಸಾಧಿಸಲು ಡಿಜಿ ಯಾತ್ರಾವನ್ನು ಕಲ್ಪಿಸಲಾಗಿದೆ.
  • ಡಿಜಿ ಯಾತ್ರಾದೊಂದಿಗೆ, ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಬಹುದು.