Published on: October 21, 2022

ಡಿಫೆನ್ಸ್ ಎಕ್ಸ್ಪೋ – 2022

ಡಿಫೆನ್ಸ್ ಎಕ್ಸ್ಪೋ – 2022

ಸುದ್ದಿಯಲ್ಲಿ ಏಕಿದೆ?

ಗುಜರಾತ್‌ನ ಗಾಂಧಿನಗರದಲ್ಲಿರುವ ಸಬರಮತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಅತಿದೊಡ್ಡ ಡಿಫೆನ್ಸ್ ಎಕ್ಸ್ಪೋ   (ರಕ್ಷಣಾ ಪ್ರದರ್ಶನ) 2022 ರ 12 ನೇ ಆವೃತ್ತಿಯ ಎಕ್ಸ್‌ಪೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಮುಖ್ಯಾಂಶಗಳು

  • ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ಸ್ವದೇಶಿ ನಿರ್ಮಿತ ವಿಮಾನಗಳು ಅತ್ಯಾಧುನಿಕ ಸಮಕಾಲೀನ ವ್ಯವಸ್ಥೆಗಳನ್ನು ಹೊಂದಿವೆ ಮತ್ತು ಪೈಲಟ್ ಸ್ನೇಹಿ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
  • ಇದೇ ವೇಳೆ ಭಾರತದ ರಕ್ಷಣಾ ಇಲಾಖೆಯು ತನ್ನ ಬಜೆಟ್‌ನ ಶೇ. 68ರಷ್ಟು ಹಣವನ್ನು ದೇಶೀಯ ನಿರ್ಮಿತ ರಕ್ಷಣಾ ಉತ್ಪನ್ನ ಖರೀದಿಗೆ ಮೀಸಲಿಡಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು
  • ಡಿಫೆನ್ಸ್ ಎಕ್ಸ್ಪೋ  2022 ಹಿಂದಿನ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್‌ನಿಂದ ಕೆತ್ತಲಾದ ಏಳು ಹೊಸ ರಕ್ಷಣಾ ಕಂಪನಿಗಳ ರಚನೆ ಆಗಿ ಒಂದು ವರ್ಷದ ಆಚರಣೆಯನ್ನು ಬಿಂಬಿಸುತ್ತದೆ.
  • ಮೊದಲ ಬಾರಿಗೆ, ಎಕ್ಸ್‌ಪೋದಲ್ಲಿ ಸ್ಟಾಲ್‌ ಸ್ಥಾಪಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು (UTs) ಆಹ್ವಾನಿಸಲಾಗಿದೆ.
  • ಈ ವರ್ಷದ ಡಿಫೆನ್ಸ್ ಎಕ್ಸ್ಪೋ  ಭಾರತೀಯ ಕಂಪನಿಗಳ ಪಾಲಿಗೆ ಪ್ರತ್ಯೇಕವಾಗಿ ಮೊದಲ ಆವೃತ್ತಿಯಾಗಿದೆ.
  • ಭಾರತೀಯ ಕಂಪನಿಗಳು, ವಿದೇಶಿ OEM ಗಳ ಭಾರತೀಯ ಅಂಗಸಂಸ್ಥೆಗಳು, ಭಾರತದಲ್ಲಿ ನೋಂದಾಯಿಸಲಾದ ಕಂಪನಿಯ ವಿಭಾಗ ಮತ್ತು ಭಾರತೀಯ ಕಂಪನಿಯೊಂದಿಗೆ ಜಂಟಿ ಉದ್ಯಮವನ್ನು ಹೊಂದಿರುವ ಪ್ರದರ್ಶಕರನ್ನು ಭಾರತೀಯ ಭಾಗವಹಿಸುವವರು ಎಂದು ಪರಿಗಣಿಸಲಾಗುತ್ತದೆ.
  • ಥೀಮ್: ಹೆಮ್ಮೆಯ ಹಾದಿ( ಪಾಥ್‌ ಟು ಪ್ರೈಡ್‌).

ಉದ್ದೇಶ:

  • ‘ಡಿಫೆನ್ಸ್​ ಎಕ್ಸ್​ಪೊ ಮೂಲಕ ಭಾರತದ ಯುವ ಶಕ್ತಿ, ಕನಸು ಮತ್ತು ಧೈರ್ಯವನ್ನು ಜಗತ್ತಿಗೆ ಸಾರಿ ಹೇಳಲಾಗುತ್ತಿದೆ. ಗುಜರಾತ್‌ನ ಗಾಂಧಿನಗರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದು.
  • ಈ ಹೊಸ ಉಪಕ್ರಮದೊಂದಿಗೆ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹೂಡಿಕೆಯನ್ನು ಆಕರ್ಷಿಸುವ ಮೂಲಕ ಮತ್ತು ಸ್ಥಳೀಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ಅವಕಾಶವನ್ನು ಪಡೆಯುತ್ತವೆ.

HAL HTT-40 ಅನಾವರಣ:

  • ಡಿಫೆಕ್ಸ್‌ಪೋ 22 ರ ಉದ್ಘಾಟನೆಯ ಸಂದರ್ಭದಲ್ಲಿ HAL HTT-40 (ಹಿಂದೂಸ್ತಾನ್ ಟರ್ಬೊ ಟ್ರೈನರ್-40) ಅನ್ನು ಅನಾವರಣಗೊಳಿಸಿದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ರೂಪಿಸಿರುವ ಈ ಯುದ್ಧವಿಮಾನವು ಪೈಲಟ್ ಸ್ನೇಹಿ ವ್ಯವಸ್ಥೆಗಳೊಂದಿಗೆ ಎಲ್ಲ ಬಗೆಯ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ನೀಡಲು ಸಹಕಾರಿಯಾಗಲಿದೆ.