Published on: December 23, 2021

ಡೈನೋಸಾರ್ ಮೊಟ್ಟೆಯಲ್ಲಿ ಭ್ರೂಣ ಪತ್ತೆ

ಡೈನೋಸಾರ್ ಮೊಟ್ಟೆಯಲ್ಲಿ ಭ್ರೂಣ ಪತ್ತೆ

ಸುದ್ಧಿಯಲ್ಲಿ ಏಕಿದೆ ? ಚೀನಾದ ದಕ್ಷಿಣ ಭಾಗದಲ್ಲಿರುವ ಗಂಝೌ ಪ್ರಾಂತ್ಯದ ಕಲ್ಲುಬಂಡೆಗಳ ನಡುವೆ ದೊರೆತ ಡೈನೋಸಾರ್ ಮೊಟ್ಟೆಯ ಒಳಗೆ ಭ್ರೂಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಈ ಮೊಟ್ಟೆಯು 72 ರಿಂದ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
  • ಈ ಭ್ರೂಣಕ್ಕೆ ‘ಬೇಬಿ ಯಿಂಗ್ಲಿಯಾಂಗ್’ ಎಂದು ಹೆಸರಿಡಲಾಗಿದೆ. ಇದು ಒವಿರಾಪ್ಟೊರೊಸಾರ್ (Oviraptorosaur) ಎಂದು ಕರೆಯಲಾಗುವ ಹಲ್ಲುರಹಿತ ಥೆರೋಪಾಡ್ ಡೈನೋಸರ್ ಸಮೂಹಕ್ಕೆ ಸೇರಿದ್ದಾಗಿದೆ.
  • ಒವಿರಾಪ್ಟೊರೊಸಾರ್ ಪ್ರಾಣಿಗಳು ಏಷ್ಯಾ ಮತ್ತು ಉತ್ತರ ಅಮೆರಿಕಗಳಲ್ಲಿ ಕ್ರಿಟೇಷಿಯಸ್ ಯುಗದಲ್ಲಿ (145- 66 ಮಿಲಿಯನ್ ವರ್ಷಗಳ ಹಿಂದೆ) ಜೀವಿಸಿದ್ದವು.
  • ಈ ಭ್ರೂಣ ಇದ್ದ ಸ್ಥಿತಿ ವಿಜ್ಞಾನಿಗಳಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿದೆ. ಭ್ರೂಣದ ತಲೆಯು ಅದರ ದೇಹದ ಅಡಿಯಲ್ಲಿ ಇತ್ತು. ಅದರ ಕಾಲುಗಳು ಎರಡೂ ಬದಿಗೆ ಹಿಂದಕ್ಕೆ ಚಾಚಿಕೊಂಡಿದ್ದು, ಮೊಟ್ಟೆಯ ತುದಿಯವರೆಗೂ ಇವೆ
  • ಡೈನೋಸಾರ್ ಭ್ರೂಣದ ಈ ಸ್ಥಿತಿಯು ಆಧುನಿಕ ದಿನದ ಪಕ್ಷಿಗಳ ಭ್ರೂಣದಲ್ಲಿಯೂ ಇರುವಂತೆ ಇದೆ.
  • ಈ ಪುಟಾಣಿ ಪ್ರಸವಪೂರ್ವ ಡೈನೋಸಾರ್, ತನ್ನ ಮೊಟ್ಟೆಯೊಳಗೆ ಸುರುಳಿ ಸುತ್ತಿಕೊಂಡಿರುವ ಪಟ್ಟ ಹಕ್ಕಿಯಂತೆ ಇದೆ. ಇಂದಿನ ಹಕ್ಕಿಗಳು ಅವುಗಳ ಪೂರ್ವಜ ಡೈನೋಸಾರ್‌ಗಳ ಅನೇಕ ಗುಣಗಳನ್ನು ಹೊಂದಿರುವುದಕ್ಕೆ ಮತ್ತಷ್ಟು ಪುರಾವೆಗಳು ಸಿಕ್ಕಿದೆ
  • ಡೈನೋಸಾರ್ ಭ್ರೂಣವು 17 ಸೆಂಮೀ ಉದ್ದದ ಮೊಟ್ಟೆಯ ಒಳಗೆ ಸುರುಳಿ ಸುತ್ತಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ತಲೆಯಿಂದ ಬಾಲದವರೆಗೆ 27 ಸೆಂಮೀ ಉದ್ದ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಅಪರೂಪದ ಮೊಟ್ಟೆಯನ್ನು ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ.
  • ‘ಡೈನೋಸಾರ್ ಭ್ರೂಣಗಳು ಅತ್ಯಂತ ಅಪರೂಪದ ಪಳೆಯುಳಿಕೆಗಳಾಗಿವೆ ಮತ್ತು ಹೆಚ್ಚಿನವು ಮೂಳೆಗಳು ತಪ್ಪಿಹೋದ ಅಪೂರ್ಣ ಸ್ಥಿತಿಯಲ್ಲಿದ್ದವು.
  • ಅದು ಇಷ್ಟು ವರ್ಷಗಳ ಕಾಲ ಅತ್ಯದ್ಭುತ ಸ್ಥಿತಿಯಲ್ಲಿ ಸಂರಕ್ಷಿತವಾಗಿತ್ತು. ಡೈನೋಸಾರ್‌ಗಳ ಬೆಳವಣಿಗೆ ಮತ್ತು ಮರು ಸಂತಾನೋತ್ಪತ್ತಿಯ ಕುರಿತು ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯವಾಗಲಿದೆ. ಡೈನೋಸಾರ್ ಭ್ರೂಣ ಮತ್ತು ಕೋಳಿಯ ಭ್ರೂಣಗಳು ಮೊಟ್ಟೆಯ ಒಳಗೆ ಒಂದೇ ರೀತಿ ಇರುವುದು ಆಸಕ್ತಿಕರವಾಗಿದೆ.