Published on: March 11, 2023

ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ

ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ


ಸುದ್ದಿಯಲ್ಲಿ ಏಕಿದೆ? ಬೆಂಗಳೂರಿನಲ್ಲಿ ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ. 


ಮುಖ್ಯಾಂಶಗಳು

  • ಬೆಂಗಳೂರಿನ ಹಿರೇಹಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾಯೋಗಿಕ ಕೇಂದ್ರದಲ್ಲಿ ಸ್ಥಾಪನೆಯಾಗಲಿದೆ.
  • ಕೇಂದ್ರ ಸರ್ಕಾರದ ಪ್ರಾಯೋಜಿತ ಇಂಟೆಗ್ರೇಟೆಡ್‌ ಡೆವಲಪ್‌ಮೆಂಟ್‌ ಆಫ್‌ ಹಾರ್ಟಿಕಲ್ಚರ್‌ ಯೋಜನೆಯಡಿ ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತದೆ.

ಉದ್ದೇಶ

  • ಡ್ರ್ಯಾಗನ್‌ ಫ್ರೂಟ್‌ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರೈತ ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಕೇಂದ್ರವು ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ.

ಡ್ರ್ಯಾಗನ್‌ ಫ್ರೂಟ್‌

  • ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಹೆಸರು ಹೈಲೋಸೆರೆಸುಂಡಾಟಸ್, ಇದನ್ನು ಮುಖ್ಯವಾಗಿ ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಬೆಳೆಯಲಾಗುತ್ತದೆ.
  • ಇದರಲ್ಲಿ ವಿಟಮಿನ್‌ ಸಿ, ಬಿ1, ಬಿ2, ಬಿ3 ಮತ್ತು ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಸಮೃದ್ಧವಾಗಿದೆ

ಇಂಟೆಗ್ರೇಟೆಡ್‌ ಡೆವಲಪ್‌ಮೆಂಟ್‌ ಆಫ್‌ ಹಾರ್ಟಿಕಲ್ಚರ್‌ ಯೋಜನೆ (MIDH)

  • 2014 -15 ರಲ್ಲಿ ಹಸಿರು ಕ್ರಾಂತಿ – ಕೃಷ್ಣೋನ್ನತಿ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗಿದೆ.
  • ಹಣ್ಣುಗಳು, ತರಕಾರಿಗಳು, ಬೇರು ಮತ್ತು ಗಡ್ಡೆ ಬೆಳೆಗಳು, ಅಣಬೆಗಳು, ಮಸಾಲೆಗಳು, ಹೂವುಗಳು, ಆರೊಮ್ಯಾಟಿಕ್ ಸಸ್ಯಗಳು, ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಬಿದಿರುಗಳನ್ನು ಒಳಗೊಂಡಿರುವ ತೋಟಗಾರಿಕೆ ವಲಯದ ಸಮಗ್ರ ಬೆಳವಣಿಗೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
  • ನಿಧಿಯ ಹಂಚಿಕೆ: MIDH ಅಡಿಯಲ್ಲಿ, ಭಾರತ ಸರ್ಕಾರ (GoI) ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು ವೆಚ್ಚದಲ್ಲಿ 60% ಮತ್ತು 40% ಪಾಲನ್ನು ರಾಜ್ಯ ಸರ್ಕಾರಗಳು ನೀಡುತ್ತವೆ.
  • ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಗಳಿಗೆ ಭಾರತ ಸರ್ಕಾರ 90% ನೀಡುತ್ತದೆ.