Published on: February 22, 2023

ತಲಾದಾಯ

ತಲಾದಾಯ


ಸುದ್ದಿಯಲ್ಲಿ ಏಕಿದೆ?  ಆರ್ಥಿಕ ಬೆಳವಣಿಗೆ ವಿಚಾರದಲ್ಲಿರಾಜಧಾನಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳ ನಡುವಿನ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅರ್ಧದಷ್ಟು ಜಿಲ್ಲೆಗಳು ಬೆಂಗಳೂರಿನ ತಲಾ ಆದಾಯದ ಶೇ.25ರಷ್ಟನ್ನೂ ಹೊಂದಿಲ್ಲ.


ಮುಖ್ಯಾಂಶಗಳು

  • 2021-22ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾದಾಯವು 2,65,623 ರೂಪಾಯಿಗಳಷ್ಟಿದ್ದು, ಇದು 2023-24ನೇ ಸಾಲಿಗೆ ಶೇ.13.6 ರಷ್ಟು ಹೆಚ್ಚಳದೊಂದಿಗೆ 3,01,673 ರೂಪಾಯಿಗಳಷ್ಟಾಗುವುದೆಂದು ಅಂದಾಜಿಸಲಾಗಿದೆ.
  • ಕಂದಾಯ ವಿಭಾಗಗಳಲ್ಲಿನ ಜಿಲ್ಲಾದಾಯ ಮತ್ತು ತಲಾದಾಯದಲ್ಲಿನ ವ್ಯತ್ಯಾಸ ಗಮನಿಸುವುದಾದರೆ ಬೆಂಗಳೂರು ವಿಭಾಗ ಉತ್ತಮ ಸ್ಥಿತಿಯಲ್ಲಿದೆ. ನಂತರದ ಸ್ಥಾನದಲ್ಲಿ ಮೈಸೂರು ವಿಭಾಗ, ಬೆಳಗಾವಿ ಹಾಗೂ ಕೊನೆಯದಾಗಿ ಕಲಬುರಗಿಯಿದೆ.
  • ಇಲ್ಲಿನ ಕಂದಾಯ ವಿಭಾಗದಲ್ಲಿ ಬರುವ ಜಿಲ್ಲೆಗಳ ತಲಾ ಆದಾಯ ಬಹಳ ಕಡಿಮೆ.
  • ತಲಾದಾಯದಲ್ಲಿಕಲಬುರಗಿ, ಬೀದರ್ ಕೊನೆಯ ಸ್ಥಾನದಲ್ಲಿವೆ.
  • ಬೆಂಗಳೂರು ತಲಾದಾಯ ಏರುಪೇರು: ಜಿಲ್ಲೆಗಳ ನಡುವಿನ ಆದಾಯದ ಅಂತರದಲ್ಲಿಪ್ರತಿ ವರ್ಷ ಏರಿಕೆ ಹೊರತುಪಡಿಸಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗಜಿಲ್ಲೆಗಳ ಸ್ಥಿತಿ ಇತರ ಜಿಲ್ಲೆಗೆ ಹೋಲಿಸಿದರೆ ಉತ್ತಮವಾಗಿದೆ.

ತಲಾದಾಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

  • ರಾಜ್ಯದ ನಿವ್ವಳ ಆಂತರಿಕ ಉತ್ಪನ್ನವನ್ನು (ಎಸ್ಜಿಡಿಪಿ) ವಿತ್ತೀಯ ವರ್ಷದ ನಡುವಿನ ಅಂದಾಜು ಜನಸಂಖ್ಯೆಯಿಂದ ಅಂದರೆ ಪ್ರತಿವರ್ಷದ ಅ. 1ರಂದು ಇರಬಹುದಾದ ಜನಸಂಖ್ಯೆಯಿಂದ ಭಾಗಿಸಿ ತಲಾದಾಯವನ್ನು ಲೆಕ್ಕ ಹಾಕಲಾಗುತ್ತದೆ. (ದೇಶದ ಒಟ್ಟು ಆದಾಯವನ್ನು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮೊತ್ತವೇ ತಲಾ ಆದಾಯವಾಗಿದೆ).

ವರದಿ ನೀಡುವವರು ಮತ್ತು ವಿವರ 

  • ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಪ್ರತಿವರ್ಷವೂ ರಾಜ್ಯದ ಅಂಕಿ-ಅಂಶಗಳ ನೋಟ ಮತ್ತು ಜಿಲ್ಲಾ ಅಂಕಿ-ಅಂಶಗಳ ನೋಟ ಎಂಬ ಪ್ರಮುಖ ಪ್ರಕಟಣೆಗಳನ್ನು ಹೊರತರುತ್ತದೆ.
  • ಈ ಪ್ರಕಟಣೆಯು ಜನಗಣತಿ, ಕೃಷಿ ಗಣತಿ ಮತ್ತು ಜಾನುವಾರು ಗಣತಿ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಮಾಹಿತಿಯೊಂದಿಗೆ ಜಿಲ್ಲಾ, ತಾಲೂಕುವಾರು ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳು ಸೇರಿ ಅಂದಾಜು 2000 ಅಂಶಗಳ ಮಾಹಿತಿಯನ್ನು ಒದಗಿಸುತ್ತದೆ
  • ಈ ಮಾಹಿತಿಯನ್ನು ಜಿಲ್ಲಾ ಮತ್ತು ತಾಲೂಕು ಆಂತರಿಕ ಉತ್ಪನ್ನದ ಅಂದಾಜುಗಳ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ರಾಜ್ಯದ ತಲಾದಾಯವು ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಳ:

  • ರಾಜ್ಯದ ತಲಾದಾಯವು ರಾಷ್ಟ್ರೀಯ ತಲಾದಾಯಕ್ಕಿಂತ ಹೆಚ್ಚಳವಾಗಿದೆ. ಹಿಂದಿನ ಸಾಲಿಗೆ ಹೋಲಿಸಿದಾಗ, 2021-22ರಿಂದ ತಲಾದಾಯದಲ್ಲಿ ಉತ್ತಮ ಬೆಳವಣಿಗೆಯಾಗಿರುವುದು ಗಮನಾರ್ಹವಾಗಿದ್ದು, ಇದು ಕೋವಿಡ್ ಸಾಂಕ್ರಾಮಿಕದಿಂದ ಹಿಂಜರಿತಕ್ಕೆ ಒಳಗಾಗಿದ್ದ ರಾಜ್ಯದ ಆರ್ಥಿಕತೆ ಕ್ರಮೇಣ ಚೇತರಿಕೆಯಾಗಿರುವುದನ್ನು ಸೂಚಿಸುತ್ತದೆ.

ವರದಿಯಿಂದಾಗುವ ಪ್ರಯೋಜನ:

  • ಜಿಲ್ಲಾದಾಯವು ಜಿಲ್ಲಾಮಟ್ಟದಲ್ಲಿನ ಆರ್ಥಿಕ ಬೆಳವಣಿಗೆಯ ಅಳತೆಗೋಲಾಗಿದೆ.
  • ರಾಜ್ಯಮಟ್ಟದ ಆರ್ಥಿಕ ಪ್ರಗತಿಯ ಪ್ರಕ್ರಿಯೆಯಲ್ಲಿ ಅಂತರಜಿಲ್ಲಾ ವ್ಯತ್ಯಾಸಗಳ ಹಾಗೂ ಅಸಮತೋಲನದ ಗುಣಲಕ್ಷಣಗಳ ಬಗ್ಗೆ ಗಮನ ಹರಿಸಲು ಇದೊಂದು ಉಪಯುಕ್ತನೀತಿ ಸೂಚಕವಾಗಿರುತ್ತದೆ.
  • ಕಲಬುರಗಿ ವಿಭಾಗದ (ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಂತೆ) ತಲಾ ಆದಾಯವು ಕಡೆಯ ಸ್ಥಾನದಲ್ಲಿ ಮತ್ತು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಬೆಳಗಾವಿ ಮತ್ತು ಮೈಸೂರು ವಿಭಾಗಗಳು ಇವೆ.
  • ಈ ವಿಭಾಗಗಳಲ್ಲಿ ಕೈಗಾರಿಕೆ ಮತ್ತು ಸೇವಾವಲಯದ ಉದ್ಯಮಗಳು ಕಡಿಮೆ ಇರುವುದು ಈ ಪ್ರವೃತ್ತಿಗೆ ಪ್ರಮುಖ ಕಾರಣವೆನ್ನಬಹುದು. ಆದ್ದರಿಂದ ಈ ಪ್ರದೇಶಗಳಲ್ಲಿ ಕೈಗಾರಿಕೆ ಮತ್ತು ಸೇವಾವಲಯದ ಉದ್ಯಮಗಳ ಸ್ಥಾಪನೆಯಲ್ಲಿ ಖಾಸಗಿ ವಲಯದವರನ್ನು ಪೊ›ತ್ಸಾಹಿಸಬೇಕಾಗಿದೆ ಎಂದು ಶಿಫಾರಸು ಮಾಡಲಾಗಿದೆ.

2018-19ರ ಸ್ಥಿತಿಗತಿ: ಬೆಂಗಳೂರು ತಲಾದಾಯ 4,96,208 ರೂ. ಇದ್ದರೆ, ದಕ್ಷಿಣ ಕನ್ನಡದ್ದು 3,51,271 ರೂ., ಉಡುಪಿ- 2,84,521, ಚಿಕ್ಕಮಗಳೂರು- 2,50,119, ಶಿವಮೊಗ್ಗ-2,05,368 ರೂ. ಇತ್ತು. 97,353 ರೂ.ನೊಂ ದಿಗೆ ಯಾದಗಿರಿ ಕೊನೆಯ ಸ್ಥಾನದಲ್ಲಿತ್ತು. ಉಳಿದಂತೆ ಕಲಬುರಗಿ- 99,322, ಬೀದರ್ 1,00,234, ಕೊಪ್ಪಳ-1,00,497 ರೂ. ಇತ್ತು.

ನಿಮಗಿದು ತಿಳಿದಿರಲಿ

ತಲಾದಾಯದ ಮೊದಲ ಐದು ರಾಜ್ಯಗಳು

 ದೆಹಲಿ         4,01,982

 ತೆಲಂಗಾಣ     2,75,443

ಹರಿಯಾಣ     2,74,635

ಕರ್ನಾಟಕ      2,65,623

ತಮಿಳುನಾಡು 2,41,131