Published on: January 21, 2023

‘ತಾಯಿ ಕಸ್ತೂರ್ ಗಾಂಧಿ’

‘ತಾಯಿ ಕಸ್ತೂರ್ ಗಾಂಧಿ’


ಸುದ್ದಿಯಲ್ಲಿ ಏಕಿದೆ? ಕಸ್ತೂರ್ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಹತ್ತನೇ ನೊಯಿಡಾ ಅಂತರರಾಷ್ಟ್ರೀ ಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.


ರಚನೆ : ಬರಗೂರು ಅವರೇ ಬರೆದ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದಾರೆ.

ಮುಖ್ಯಾಂಶಗಳು

  • ಐದಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಿತ್ರೋ ತ್ಸವಗಳಿಗೆ ಆಯ್ಕೆಯಾಗಿ ವಿದೇಶಗಳಲ್ಲಿ ಪ್ರದರ್ಶಿತವಾಗಿದೆ.
  • ದಾದಾ ಸಾಹೇಬ್ ಫಾಲ್ಕೆ ಚಿತ್ರೋ ತ್ಸವದಲ್ಲಿ ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದೆ.
  • ಅಮೆರಿಕದ ಡಲ್ಲಾಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರದ ಸಂಕಲನಕಾರ ಸುರೇಶ್ ಅರಸು ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿದೆ.

ಚಿತ್ರದ ವಿಶೇಷತೆಗಳು

  • ಕಸ್ತೂರ್ ಬಾ ಗಾಂಧಿಯವರನ್ನು ಪ್ರಧಾನ ಪಾತ್ರದಲ್ಲಿ ಚಿತ್ರಿಸಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ‘ಕಸ್ತೂರ್ ಬಾ ಗಾಂಧಿಯವರ ಮೂಲಕ ಗಾಂಧೀಜಿಯವರನ್ನು ಕಂಡುಕೊಳ್ಳುವ ಒಳನೋಟವನ್ನು ಈ ಚಿತ್ರವು ಕೊಡುವುದರ ಜೊತೆಗೆ ಇಬ್ಬರ ಮುಖಾಮುಖಿ ಮತ್ತು ಅನುಸಂಧಾನದ ನೆಲೆಗಳನ್ನು ಅನಾವರಣಗೊಳಿಸುತ್ತದೆ.
  • ಅಂಬೇಡ್ಕರ್–ಗಾಂಧಿ ಮತ್ತು ಕಸ್ತೂರ್ಬಾ– ಅಂಬೇಡ್ಕರ್ ಅವರ ಭೇಟಿಯ ಅಪೂರ್ವ ಸಂದರ್ಭಗಳನ್ನು ಇಲ್ಲಿ ನಿರೂಪಿಸಲಾಗಿದೆ.
  • ಬಾಲ್ಯದಿಂದ ಮುಪ್ಪಿನವರೆಗಿನ ಚಿತ್ರಣವನ್ನು ಚಿತ್ರದಲ್ಲಿ ಕೊಡಲಾಗಿದೆ’.