Published on: October 22, 2021
ತ್ರಿವರ್ಣದಲ್ಲಿ ಬೆಳಗಲಿವೆ 100 ಪಾರಂಪರಿಕ ತಾಣ
ತ್ರಿವರ್ಣದಲ್ಲಿ ಬೆಳಗಲಿವೆ 100 ಪಾರಂಪರಿಕ ತಾಣ
ಸುದ್ಧಿಯಲ್ಲಿ ಏಕಿದೆ? ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್–19 ಲಸಿಕೆ ವಿತರಣೆಯನ್ನು ಸಂಭ್ರಮಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ) ತನ್ನ 100 ಪಾರಂಪರಿಕ ಸ್ಮಾರಕಗಳನ್ನು ರಾಷ್ಟ್ರ ಧ್ವಜದ ಬಣ್ಣದಲ್ಲಿ ಬೆಳಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವೆಲ್ಲ ತಾಣಗಳು ಪಟ್ಟಿಯಲ್ಲಿವೆ ?
- ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ತುಘಲಕಾಬಾದ್ ಕೋಟೆ, ಪುರಾನಾ ಕಿಲಾ, ಫತೇಪುರ್ ಸಿಕ್ರಿ, ರಾಮಪ್ಪ ದೇವಸ್ಥಾನ, ಹಂಪಿ, ಧೋಲವಿರಾ (ಗುಜರಾತ್), ಪುರಾತನ ಲೆಹ್ ಅರಮನೆ, ಕೋಲ್ಕತ್ತಾದ ಕರೆನ್ಸಿ ಕಟ್ಟಡ ಮತ್ತು ಮೆಟ್ಕಾಲ್ಫ್ ಹಾಲ್; ಖಜುರಾಹೊ ದೇವಸ್ಥಾನಗಳು (ಎಂಪಿ), ಮತ್ತು ಹೈದರಾಬಾದ್ನ ಗೋಲ್ಕೊಂಡ ಕೋಟೆ ಸೇರಿದಂತೆ ಯುನೆಸ್ಕೊದ ಹದಿನೇಳು ಪಾರಂಪರಿಕ ತಾಣಗಳು ಸೇರಿ 100 ಸ್ಮಾರಕಗಳು ತ್ರಿವರ್ಣದಿಂದ ಪ್ರಕಾಶಿಸಲ್ಪಡುತ್ತವೆ.
ಏಕೆ ಈ ನಡೆ ?
- ಇದು ಆರೋಗ್ಯ ವೃತ್ತಿಪರರು, ಮುಂಚೂಣಿಯ ಕಾರ್ಯಕರ್ತರು, ವಿಜ್ಞಾನಿಗಳು, ಲಸಿಕೆ ತಯಾರಕರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡಿದ ದೇಶದ ನಾಗರಿಕರಿಗೆ ನೀಡುತ್ತಿರುವ ಗೌರವವಾಗಿದೆ.ಇದು ದೇಶದಾದ್ಯಂತ ಕೋವಿಡ್ ಲಸಿಕೆಯ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಆಯೋಜಿಸಿರುವ ಚಟುವಟಿಕೆಗಳ ಭಾಗವಾಗಿದೆ.