Published on: August 2, 2021
ತ್ರಿವಳಿ ಗ್ಯಾಲಕ್ಸಿ
ತ್ರಿವಳಿ ಗ್ಯಾಲಕ್ಸಿ
ಸುದ್ಧಿಯಲ್ಲಿ ಏಕಿದೆ ? ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ Arp 195 ಎಂಬ ತ್ರಿವಳಿ ಗ್ಯಾಲಕ್ಸಿಗಳ ಸಮೂಹವೊಂದನ್ನು ಪತ್ತೆ ಮಾಡಿದ್ದು, ಗುರುತ್ವಾಕರ್ಷಣೆ ಈ ಮೂರೂ ಗ್ತಾಲಕ್ಸಿಗಳ ನಡುವೆ ಕಲಹಕ್ಕೆ ಕಾರಣವಾಗಿದೆ.
- ಭೂಮಿಯಿಂದ ಬರೋಬ್ಬರಿ 763 ಮಿಲಿಯನ್ ಜ್ಯೋತಿರ್ವರ್ಷ ದೂರ ಇರುವ Arp 195(ಅಟ್ಲಾಸ್ ಆಫ್ ಪೆಕ್ಯೂಲಿಯರ್ ಗ್ಯಾಲಕ್ಸಿ) ಎಂಬ ಮೂರು ಗ್ಯಾಲಕ್ಸಿಗಳ ಸಮೂಹ ಹಬಲ್ ಕಣ್ಣಿಗೆ ಬಿದ್ದಿದೆ. ಗುರುತ್ವಾಕರ್ಷಣೆಯ ಪರಿಣಾಮವಾಗಿ ಈ ಮೂರೂ ಗ್ಯಾಲಕ್ಸಿಗಳು ನಿರಂತರವಾಗಿ ಸಹೋದರರ ಕಲಹದಲ್ಲಿ ನಿರತವಾಗಿವೆ.