Published on: July 2, 2023

‘ಥರ್ಮಲ್ ಡ್ರೋನ್’

‘ಥರ್ಮಲ್ ಡ್ರೋನ್’

ಸುದ್ದಿಯಲ್ಲಿ ಏಕಿದೆ? ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಂತ್ರಜ್ಞಾನ ಬಳಸುತ್ತಿದ್ದು, ಆನೆಗಳನ್ನು ಪತ್ತೆ ಹಚ್ಚಲು ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಥರ್ಮಲ್ ಡ್ರೋನ್’ ಬಳಕೆ ಮಾಡಲಾಗುತ್ತಿದೆ.

ಮುಖ್ಯಾಂಶಗಳು

  • ಹಗಲು ಮತ್ತು ರಾತ್ರಿ ಕಾಡಾನೆಗಳ ಚಲನವಲನ ಸೆರೆ ಹಿಡಿಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಥರ್ಮಲ್ ಡ್ರೋನ್ ಇದಾಗಿದ್ದು, ದಿಲ್ಲಿಯ ಪರಿಣಿತರ ತಂಡ ರಾಜ್ಯದ 8 ಮಂದಿಗೆ ಈ ಡ್ರೋನ್ ಆಪರೇಟ್ ಮಾಡುವ ತರಬೇತಿ ನೀಡಿದೆ.
  • ರಾಜ್ಯದಲ್ಲಿ ಜನವರಿಯಿಂದ ಥರ್ಮಲ್‌ ಡ್ರೋನ್‌ ಬಳಕೆ ನಡೆಯುತ್ತಿದ್ದು, ಆನೆಗಳನ್ನು ಗುರುತಿಸಲು ರಾಮನಗರ ಜಿಲ್ಲೆಯಲ್ಲಿ ಡ್ರೋನ್‌ ಹಾರಾಟ ನಡೆಯುತ್ತಿದೆ

ಉದ್ದೇಶ

  • ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಆನೆ ದಾಳಿಗಳ ಹಿನ್ನೆಲೆಯಲ್ಲಿ ಅವುಗಳನ್ನು ಹಿಮ್ಮೆಟ್ಟಿಸಲು ಉಪಯೋಗಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಥರ್ಮಲ್‌ ಡ್ರೋನ್‌ ಕ್ಯಾಮೆರಾ ಬಳಸಿ ಅವುಗಳ ಚಲನವಲನ ಪತ್ತೆ ಹಚ್ಚಲಾಗುತ್ತಿದೆ.

ಡ್ರೋನ್ ನ ವಿಶೇಷತೆ

  • ಎಲ್ಲಾ ರೀತಿಯ ವಾತಾವರಣದಲ್ಲೂ ಕಾರ್ಯನಿರ್ವಹಿಸಬಲ್ಲದು. ಗರಿಷ್ಠ 2 ಕಿ.ಮೀ. ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿರುವ ಆನೆಗಳ ಚಿತ್ರ ಸ್ಪಷ್ಟವಾಗಿ ಕ್ಲಿಕ್ಕಿಸಬಲ್ಲದು
  • ವಾತಾವರಣಕ್ಕೆ ಅನುಗುಣವಾಗಿ (ಗಾಳಿ ಬೀಸುವ ವೇಗ) ಹಾರಾಟ: ಹಗಲು ಹೊತ್ತು ಮಾಮೂಲಿ ಚಿತ್ರ ಹಾಗೂ ರಾತ್ರಿ ನೆಗೆಟೀವ್‌ ಮಾದರಿಯ ಚಿತ್ರಗಳನ್ನು ಸೆರೆ ಹಿಡಿಯುತ್ತದೆ
    ಸಾಧಾರಣ ಡ್ರೋನ್‌ಗಳು ಕಾಡಿನ ಚಿತ್ರಗಳನ್ನಷ್ಟೇ ಸೆರೆ ಹಿಡಿದರೆ ಥರ್ಮಲ್‌ ಡ್ರೋನ್‌ ಪ್ರಾಣಿಗಳನ್ನೂ ಗುರುತಿಸಿ ಚಿತ್ರ ಕ್ಲಿಕ್ಕಿಸುತ್ತದೆ.

ಉಪಯೋಗ

  • ಜಿಪಿಎಸ್‌ ಮೂಲಕ ಲೊಕೇಷನ್‌ ನಿಗದಿ ಮಾಡಿದರೆ ಥರ್ಮಲ್‌ ಡ್ರೋನ್‌ ಅಲ್ಲಿಯವರೆಗೂ ನಿರಾಯಾಸವಾಗಿ ಪ್ರಯಾಣಿಸಬಲ್ಲದು.
  • ಇದಲ್ಲದೇ, ಜೇನು ನೊಣದ ಮಾದರಿಯಲ್ಲಿಯೇ ಶಬ್ದ ಮಾಡುವುದರಿಂದ ಆನೆ, ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೂ ತೊಂದರೆಯಾಗುವುದಿಲ್ಲ.
  • ರಾತ್ರಿ ವೇಳೆ ರಾಡಾರ್‌ ಮೂಲಕ ಹಾರಾಟ ನಡೆಸಲಿರುವ ಥರ್ಮಲ್‌ ಡ್ರೋನ್‌ಗಳಿಂದ ಸ್ಥಳೀಯರಿಗೂ ಸಮಸ್ಯೆ ಉಂಟಾಗುವುದಿಲ್ಲ. ಆನೆಗಳ ನಿರ್ದಿಷ್ಟ ಜಾಗ ಸೆರೆಹಿಡಿದ ಕೂಡಲೇ ಟಾಸ್ಕ್‌ ಪೋರ್ಸ್‌ಗೆ ರವಾನೆಯಾಗುವ ಪೋಟೊಗಳ ಆಧಾರದ ಮೇಲೆ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಬಹುದಾಗಿದೆ.

ಹೇಗೆ ಕೆಲಸ ಮಾಡುತ್ತದೆ?

  • ಆನೆಗಳು ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿ ಮತ್ತು ಹಗಲು ಕ್ಯಾಮೆರಾ ಆಪರೇಟ್‌ ಮಾಡಲಾಗುತ್ತದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೊಕೇಷನ್‌ ಸಮೇತ ಚಿತ್ರ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಳಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಮರಳಿ ಕಾಡಿಗಟ್ಟಲಿದ್ದಾರೆ.