Published on: September 27, 2022
‘ದಿ ಮ್ಯಾನ್ ಆಫ್ ಹೋಲ್’
‘ದಿ ಮ್ಯಾನ್ ಆಫ್ ಹೋಲ್’
ಸುದ್ದಿಯಲ್ಲಿ ಏಕಿದೆ?
ದಕ್ಷಿಣ ಅಮೆರಿಕದ ಅಮೆಜಾನ್ ಮಳೆ ಕಾಡುಗಳಲ್ಲಿ ಬದುಕಿದ್ದ ಅಮೆಜಾನ್ ಕಾಡಿನ ಬುಡಕಟ್ಟು ಸಮುದಾಯವೊಂದರ ಕಟ್ಟಕಡೆಯ ವ್ಯಕ್ತಿ ಮರಣ ಹೊಂದಿದ್ದಾನೆ. ಈ ವ್ಯಕ್ತಿ ರೋಂಡೊನಿಯಾದ ತಾನಾರು ವ್ಯಾಪ್ತಿಯ ಕಾಡಿನಲ್ಲಿ ಮರಣವಾಗಿದ್ದಾನೆ ಎಂದು ಬ್ರೆಜಿಲ್‌ನ ಬುಡಕಟ್ಟು ಇಲಾಖೆ (Funai) ತಿಳಿಸಿದೆ.
ಮುಖ್ಯಾಂಶಗಳು
- ಮರಣ ಹೊಂದಿದ ವ್ಯಕ್ತಿ 26 ವರ್ಷಗಳಿಂದ ಏಕಾಂಗಿಯಾಗಿ ಬದುಕಿದ್ದ. ಈ ವ್ಯಕ್ತಿಯ ಭಾಷೆ, ಹೆಸರು, ಅವನ ಬುಡಕಟ್ಟು ಸಮುದಾಯದವರ ಪೂರ್ವಜರ ಬಗ್ಗೆ ಇದುವರೆಗೆ ಯಾರಿಗೂ ತಿಳಿದು ಬಂದಿಲ್ಲ. ranchers ಎನ್ನುವರು (ಪಶುಸಾಕಾಣೆದಾರರು) 1970 ರಲ್ಲಿ ಹೊರಜಗತ್ತನ್ನೇ ನೋಡದಿದ್ದ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಈ ಬುಡಕಟ್ಟು ಸಮುದಾಯವೊಂದರ ಮೇಲೆ ಹತ್ಯಾಕಾಂಡ ನಡೆಸಿ ಬಹುತೇಕ ಜನರನ್ನು ಕೊಂದು ಹಾಕಿದ್ದರು.
- ದಾಳಿಯಿಂದ ಪಾರಾಗಿ ಉಳಿದುಕೊಂಡಿದ್ದ 7 ಜನರಲ್ಲಿ ಆರು ಜನರನ್ನು 1995 ರಲ್ಲಿ ಅಕ್ರಮ ಗಣಿ ನಡೆಸುವವರು ಗುಂಡಿಕ್ಕಿ ಸಾಯಿಸಿದ್ದರು. ಆಗಲೂ ಉಳಿದುಕೊಂಡಿದ್ದ ಒಬ್ಬನೇ ಒಬ್ಬ ವ್ಯಕ್ತಿ ಈಗ ಸಹಜವಾಗಿ ಕಾಡಿನಲ್ಲಿ ತನ್ನ ಗುಡಿಸಲು ಎದುರು ಮೃತಪಟ್ಟಿದ್ದಾನೆ
- ಬುಡಕಟ್ಟು ಇಲಾಖೆ ಈತನ ಇರುವಿಕೆಯನ್ನು ತಿಳಿದು ಅಧ್ಯಯನ ಕೈಗೊಂಡಾಗ ಈತನಿಗೆ ಸಂಬಂಧಿಸಿದಂತೆ ಹಿಂದೆ ಏನೆಲ್ಲಾ ಆಗಿತ್ತು ಎಂದು ವಿಧಿವಿಜ್ಞಾನ ಸಹಾಯದ ಮೂಲಕ ಪತ್ತೆ ಹಚ್ಚಿದ್ದರು. ಡಾಕ್ಯುಮೆಂಟರಿ ಕೂಡ ಮಾಡಿದ್ದರು.
- ಹೊರಜಗತ್ತಿಗೆ ಕರೆದುಕೊಂಡು ಬರಲು ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಆತನನ್ನು ಅವನ ಪಾಡಿಗೆ ಬಿಟ್ಟಿದ್ದರು.
-
ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಗಾಗ ವಾಸಸ್ಥಳ ಬದಲಿಸುತ್ತಿದ್ದ ಆವ್ಯಕ್ತಿಯು ತಾನು ತಂಗಿದ್ದ ಜಾಗದಲ್ಲಿ ರಂದ್ರಗಳನ್ನು ಕೊರೆದು ಬಿಟ್ಟು ಹೋಗುತ್ತಿದ್ದ ಕಾರಣದಿಂದ ಮತ್ತು ಈ ವ್ಯಕ್ತಿ ಪ್ರಾಣಿಗಳನ್ನು ಬಲೆಗೆ ಕೆಡವಲು ತನ್ನ ಪ್ರದೇಶದಲ್ಲಿ ವಿಶಿಷ್ಠ ರಂದ್ರಗಳನ್ನು ಮಾಡುತ್ತಿದ್ದ ಎನ್ನುವುದು ತಿಳಿದು ಬಂದಿತ್ತು. ಹೀಗಾಗಿ ಆತನಿಗೆ ‘ದಿ ಮ್ಯಾನ್ ಆಫ್ ಹೋಲ್’ ಎಂದು ಹೆಸರು ಬಂದಿತ್ತು.