Published on: December 12, 2022

‘ದೀವಟಿಗೆ ಸಲಾಂ’

‘ದೀವಟಿಗೆ ಸಲಾಂ’

ಸುದ್ದಿಯಲ್ಲಿ ಏಕಿದೆ? ಮೈಸೂರು ಮಹಾರಾಜ ಟಿಪ್ಪು ಸುಲ್ತಾನ್ ಆಡಳಿತಾವಧಿಯಿಂದಲೂ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪ್ರತಿದಿನ ಸಂಜೆ ಹೊತ್ತಿನಲ್ಲಿ ನಡೆಯುವ ‘ದೀವಟಿಗೆ ಸಲಾಂ’ ಪೂಜಾ ವಿಧಾನವನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ‘ದೀವಟಿಗೆ ಸಲಾಂ’ ನಡೆಯುತ್ತಿದ್ದ ಸಮಯದಲ್ಲಿ ಇನ್ನು ಮುಂದೆ ‘ದೀಪ ನಮಸ್ಕಾರ’ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ “ದೀವಟಿಗೆ ಸಲಾಂ” “ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಎಂಬ ಪೂಜಾಕಾರ್ಯಗಳ ಹೆಸರನ್ನು ಬದಲಾವಣೆ ನಿರ್ಧಾರಿಸಲಾಗಿದೆ.
  • “ದೀವಟಿಗೆ ಸಲಾಂ” ಎಂಬ ಪದದ ಬದಲಾಗಿ “ದೀವಟಿಗೆ ನಮಸ್ಕಾರ” ಎಂದು, “ಸಲಾಂ ಆರತಿ” ಎಂಬ ಪದದ ಬದಲಾಗಿ “ಆರತಿ ನಮಸ್ಕಾರ” ಎಂದು ಹಾಗೂ ʼಸಲಾಂ ಮಂಗಳಾರತಿ” ಎಂಬ ಪದದ ಬದಲಾಗಿ “ಮಂಗಳಾರತಿ ನಮಸ್ಕಾರ” ಎಂದು ಹೆಸರನ್ನು ಬದಲಾಯಿಸಿಕೊಂಡು ಸೇವೆಗಳನ್ನು ಮತ್ತು ಸೇವಾಕಾರ್ಯಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ.
  • ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಮಹಾಲಿಂಗೇಶ್ವರ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಸಲಾಂ ದೀವಟಿಗೆ ಪದ್ಥತಿ ಈಗಲೂ ಜಾರಿಯಲ್ಲಿತ್ತು.
  • ದೇವರಿಗೆ ಸಲ್ಲಿಸಲಾಗುವ ಈ ವಿಶೇಷ ಪೂಜೆಯಲ್ಲಿ ರಾಜ್ಯಕ್ಕೆ, ಪ್ರಜೆಗಳಿಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. (ಮೊದಲು ಈ ಪದ್ಧತಿಯ ಮೂಲಕ ರಾಜ, ಮಂತ್ರಿ ವರ್ಗ ಹಾಗೂ ಜನರ ಒಳಿತಾಗಿ ಅದನ್ನು ನಡೆಸಲಾಗುತ್ತಿತ್ತು).
  • ಈ ಕ್ರಮಕ್ಕೆ ಸ್ಪಷ್ಟನೆಯನ್ನೂ ನೀಡಿರುವ ರಾಜ್ಯ ಸರ್ಕಾರ, ದೇಗುಲದಲ್ಲಿ ಪ್ರಾಚೀನ ಕಾಲದಿಂದಲೂ ಸಂಜೆಯ ವೇಳೆಗೆ ಸಂಧ್ಯಾ ಸಮಯದಲ್ಲಿ ‘ದೀಪ ನಮಸ್ಕಾರ’ ನಡೆಸಲಾಗುತ್ತಿತ್ತು. ಆದರೆ, ಟಿಪ್ಪು ಅದನ್ನು ‘ದೀವಟಿಗೆ ಸಲಾಂ’ ಎಂದು ಬದಲಾಯಿಸಲಾಗಿತ್ತು. ಈಗ ಅದನ್ನು ಮರುಜಾರಿಗೊಳಿಸಲಾಗಿದೆ.

ಸಲಾಂ ಆರತಿ ಪೂಜೆ ರದ್ದುಪಡಿಸಲಾಗಿಲ್ಲ

ಕೇವಲ ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮತ್ತು ಪೂಜೆಗಳನ್ನು ಮುಂದುವರೆಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಲಾಗುವುದಿಲ್ಲ