Published on: October 26, 2021

ದೇವಾಲಯ ಸಂರಕ್ಷಣಾ ಮಸೂದೆ

ದೇವಾಲಯ ಸಂರಕ್ಷಣಾ ಮಸೂದೆ

ಸುದ್ಧಿಯಲ್ಲಿ ಏಕಿದೆ?  ಧಾರ್ಮಿಕ ಸ್ಥಳಗಳ ದೇವಾಲಯ ಸ್ವರೂಪ ಸಂರಕ್ಷಣಾ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ ದೇವಾಲಯಗಳನ್ನು ಹಠಾತ್ತನೆ ನೆಲಸಮ ಮಾಡುವ ಅಧಿಕಾರಿಗಳ ಸ್ವಯಂ ಪ್ರಕ್ರಿಯೆಗೆ ತಡೆ ಬಿದ್ದಿದೆ.

ಹಿನ್ನಲೆ

  • ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೈಸೂರಿನ ನಂಜನಗೂಡು ಬಳಿ ದೇವಾಲಯವನ್ನು ಹಠಾತ್ತನೆ ನೆಲಸಮ ಮಾಡಿದ್ದ ವಿಚಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಾರಿ ಕೋಲಾಹಲದ ಚರ್ಚೆಗೆ ಗ್ರಾಸವಾಗಿತ್ತು. ಅಂತರ ನಂತರ ನೆಲಸಮಗೊಂಡ ಜಾಗದಲ್ಲಿ ದೇವಾಲಯ ನಿರ್ಮಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅಧಿಕಾರಿಗಳ ಉದ್ಧಟತನದಿಂದ ಇಂತಹ ದ ಘಟನೆಗಳು ಮುಂದೆ ನಡೆಯದಂತೆ ಧಾರ್ಮಿಕ ಸ್ಥಳಗಳ ಸ್ವರೂಪ ಸಂರಕ್ಷಣೆ ಮಾಡುವ ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರ ಮಂಡನೆ ಮಾಡಿತ್ತು ನಂತರ ಅಂಗೀಕರಿಸಿತ್ತು

ಮಸೂದೆಯಲ್ಲಿ ಏನಿದೆ ?

  • ರಾಜ್ಯದಲ್ಲಿನ ಎಲ್ಲ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲಾಗುವುದು. ಆದರೆ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ಇನ್ನು ಮುಂದೆ ನಿರ್ಮಿಸುವಂತಿಲ್ಲ ಎಂದು ‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ 2021′ ಹೇಳಿದೆ. ಕೋರ್ಟ್‌ ತೀರ್ಪು ಬಳಿಕ ಈಗ ಸರ್ಕಾರವು “ಸರ್ಕಾರದ ನಿಯಮಗಳಿಗೆ ಅನುಸಾರ ಇರುವ ಧಾರ್ಮಿಕ ಕಟ್ಟಡಗಳಿದ್ದರೆ ಅವುಗಳನ್ನು ತೆರವುಗೊಳಿಸಬಾರದು. ಸರ್ಕಾರದ ನಿಯಮಗಳಿಗೆ ಒಳಪಡದ ಧಾರ್ಮಿಕ ಕಟ್ಟಡಗಳನ್ನು ತೆರೆವು ಮಾಡಬಹುದು” ಎಂದು ಹೊಸ ಮಸೂದೆಯಲ್ಲಿ ಹೇಳಿದೆ.
  • ಯಾವುದೇ ದೇವಾಲಯಗಳನ್ನು ನೆಲಸಮ ಮಾಡುವ ಮುಂಚೆ ಸರ್ಕಾರಕ್ಕೆ ತಿಳಿಸಿ ಅನುಮತಿ ಪಡೆಯುವ ಉದ್ದೇಶದಿಂದ ಈ ಮಸೂದೆ ಜಾರಿಗೆ ತರಲಾಗಿದೆ.