Published on: November 3, 2022
ದೇಶದ ಮೊದಲ ಕಾಡುಕೋಣ (GOUR) ಸಫಾರಿ:
ದೇಶದ ಮೊದಲ ಕಾಡುಕೋಣ (GOUR) ಸಫಾರಿ:
ಸುದ್ದಿಯಲ್ಲಿ ಏಕಿದೆ?
ದೇಶದ ಮೊದಲ ಕಾಡುಕೋಣ (Gour) ಸಫಾರಿಗೆ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ–ಸಿಂಹ ಧಾಮ ಸಿದ್ಧವಾಗಿದೆ. ನ. 1 ರಂದು ಕರ್ನಾಟಕ ರಾಜ್ಯೋ ತ್ಸವದ ದಿನ ಪ್ರವಾಸಿಗರಿಗೆ ಪ್ರಾಯೋಗಿಕವಾಗಿ ಕಾಡುಕೋಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
ಮುಖ್ಯಾಂಶಗಳು
- ಕಾಡುಕೋಣಗಳನ್ನು ಸಂರಕ್ಷಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಇಲ್ಲಿ ಯೋಜನೆ ರೂಪಿಸಲಾಗಿದೆ.
- 23 ಹೆಕ್ಟೇ ರ್ ಪ್ರದೇಶದಲ್ಲಿ ಕಾಡಿನ ಸಹಜ ಪರಿಸ್ಥಿತಿಯಲ್ಲಿ ಸಫಾರಿ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ 20 ಕಾಡುಕೋಣಗಳನ್ನು ಬಿಡಲಾಗುತ್ತಿದೆ. ಅದರಲ್ಲಿ 13 ಕಾಡುಕೋಣ, ಏಳು ಕಾಡೆಮ್ಮೆ ಸೇರಿವೆ.
- ಮೂರ್ನಾಲ್ಕು ತಿಂಗಳುಗಳಿಂದ ಮೈಸೂರಿನ ಮೃಗಾಲಯದಿಂದ ಇಲ್ಲಿಗೆ ಕಾಡುಕೋಣಗಳನ್ನು ಹಂತ ಹಂತವಾಗಿ ತರಲಾಗಿದೆ’.
- ಡ್ರೈಮೋಟ್ ತಾಂತ್ರಿಕತೆ ಅಳವಡಿಕೆ: ತ್ಯಾವರೆಕೊಪ್ಪ ಸಫಾರಿಯಲ್ಲಿ ಇವುಗಳ ರಕ್ಷಣೆಗೆ ಬೇಲಿ ಇರುವುದಿಲ್ಲ. ಬದಲಿಗೆ, ಡ್ರೈಮೋಟ್ ತಾಂತ್ರಿಕತೆಯಲ್ಲಿ 2.5 ಕಿ.ಮೀ ದೂರ, ನೆಲದೊಳಗೆ ಕಂದಕ ನಿರ್ಮಿಸಲಾಗಿದೆ. ಮೂರು ಮೀಟರ್ ಆಳ ಹಾಗೂ ಅಷ್ಟೇ ಅಗಲದ ಕಂದಕಗಳಿಗೆ ಮಣ್ಣು ಜರುಗದಂತೆ ಸಿಮೆಂಟ್ ಕಾಂಕ್ರೀ ಟ್ನ ರಕ್ಷಣೆ ಒದಗಿಸಲಾಗಿದೆ. ನೈಜ ವಾತಾವರಣದಲ್ಲಿ ಕಾಟಿಗಳನ್ನು ನೋಡಿದ ಅನುಭವ ಪ್ರವಾಸಿಗರಿಗೆ ಬರಬೇಕು ಎಂಬ ಕಾರಣಕ್ಕೆ ಈ ಪ್ರಯತ್ನ. ಹೊರಗಿನಿಂದ ನೋಡುವ ಪ್ರವಾಸಿಗರಿಗೆ ಯಾವುದೇ ಬೇಲಿ ಕಾಣಿಸುವುದಿಲ್ಲ. ಆದರೆ ಅವು ಒಳಗೆ ದ್ವೀ ಪದಲ್ಲಿ ಇರಲಿವೆ. ‘ಈ ಕಂದಕ ಕಾಡಿನ ಕಡೆ ಇಳಿಜಾರು ರೂಪದಲ್ಲಿ ಇರಲಿದೆ, ಇದರಿಂದ ಇವುಗಳು ಸುಲಭವಾಗಿ ಕಂದಕಕ್ಕೆ ಇಳಿದು ಮತ್ತೆ ಮೇಲಕ್ಕೆ ಹತ್ತಲಿವೆ’.
ಉದ್ದೇಶ
- ‘ಕಾಡುಕೋಣ ಮೂಲತಃ ಪಶ್ಚಿಮಘಟ್ಟದ ತಳಿ. ಅವುಗಳನ್ನು ನೋಡಲು ಆಸಕ್ತರು ಕಾಡಿಗೆ ಹೋಗಬೇಕು. ಅಲ್ಲಿ ಕಾಯಬೇಕು. ಸಿಕ್ಕರೆ ಸಿಗುತ್ತವೆ, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿ ಇದೆ. ಹೀಗಾಗಿ ಸಫಾರಿ ಆರಂಭಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.