Published on: April 28, 2023

ದೇಶದ ಮೊದಲ ವಾಟರ್ ಮೆಟ್ರೋ

ದೇಶದ ಮೊದಲ ವಾಟರ್ ಮೆಟ್ರೋ

ಸುದ್ದಿಯಲ್ಲಿ  ಏಕಿದೆ? ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇರಳ ರಾಜ್ಯದಲ್ಲಿ ತಿರುವನಂತಪುರಂ ಹಾಗೂ ಕಾಸರಗೋಡು ನಡುವೆ ಸಂಚರಿಸುವ ಮೊದಲ ವಂದೇ ಭಾರತ್ ರೈಲಿಗೆ ಮತ್ತು ದೇಶದ ಮೊದಲ ವಾಟರ್ ಮೆಟ್ರೋಗೆ ಚಾಲನೆ ನೀಡಿದರು.

ವಾಟರ್ ಮೆಟ್ರೋ

  • ವಾಟರ್ ಮೆಟ್ರೋ ಒಂದು ವಿಶಿಷ್ಟವಾದ ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿದ್ದು, ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತಹ ಅನುಭವ ಮತ್ತು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಕೊಚ್ಚಿಯಂತಹ ನಗರಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.
  • ಕೊಚ್ಚಿ ನಗರದೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ದೋಣಿಗಳ ಮೂಲಕ ಕೊಚ್ಚಿಯ ಸುತ್ತಮುತ್ತಲಿನ 10 ದ್ವೀಪಗಳನ್ನು ಇದು ಸಂಪರ್ಕಿಸಲಿದೆ. ಇದು ಕೊಚ್ಚಿ ಮತ್ತು ಸುತ್ತಮುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುವ ಕೇರಳದ ಕನಸಿನ ಯೋಜನೆಯಾಗಿದೆ.
  • ಕೊಚ್ಚಿ ವಾಟರ್ ಮೆಟ್ರೋ 8 ಎಲೆಕ್ಟ್ರಿಕ್ ಬೋಟ್‌ಗಳು 78 ಕಿಮೀ ಹಾಗೂ 38 ಟರ್ಮಿನಲ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸುತ್ತದೆ. ಈ ವಾಟರ್ ಮೆಟ್ರೋ ರಬ್ಬರ್ ಟೈರ್ಡ್ ಎಲೆಕ್ಟ್ರಿಕ್ ಬೋಗಿಗಳನ್ನು ಹೊಂದಿದ್ದು, ಇದನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತಯಾರು ಮಾಡಲಾಗಿದೆ.
  • ವೆಚ್ಚ:1,137 ಕೋಟಿ ರೂಪಾಯಿ
  • ಪ್ರಯೋಜನಗಳು:ಮೆಟ್ರೋ ಮುಂಬರುವ ದಿನಗಳು ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜಕವಾಗಲಿದೆ. ಕೊಚ್ಚಿ ಕೇರಳದ ಅತ್ಯಂತ ಜನನಿಬಿಡ ಜಿಲ್ಲೆಗಳಲ್ಲಿ ಒಂದಾಗಿದೆ. ಹೊಸ ನೀರಿನ ಮೆಟ್ರೋ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೊಚ್ಚಿ ಲೇಕ್‌ಶೋರ್‌ಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಕೊಚ್ಚಿ ವಾಟರ್ ಮೆಟ್ರೋದಿಂದ ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
  • ಅನುದಾನ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
  • ಯೋಜನೆಯ ಮೊದಲ ಹಂತವಾಗಿ, ಹೈಕೋರ್ಟ್-ವೈಪಿನ್ ನಿಲ್ದಾಣದಿಂದ ವೈಟ್ಟಿಲ-ಕಾಕ್ಕನಾಡ್ ನಿಲ್ದಾಣದವರೆಗೂ ಶೀಘ್ರದಲ್ಲೇ ಸೇವೆ  ಪ್ರಾರಂಭವಾಗಲಿದೆ.