Published on: August 15, 2022
ದೇಶದ 49ನೇ ಮುಖ್ಯ ನ್ಯಾಯಮೂರ್ತಿ
ದೇಶದ 49ನೇ ಮುಖ್ಯ ನ್ಯಾಯಮೂರ್ತಿ
ಸುದ್ದಿಯಲ್ಲಿ ಏಕಿದೆ?
ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ.
ಮುಖ್ಯಾಂಶಗಳು
- ಎನ್.ವಿ.ರಮಣ ಸೇವಾವಧಿ ಅಂತ್ಯ ಬಳಿಕ ಸಿಜೆಐ ಆಗಿ ಪದಗ್ರಹಣ ಮಾಡಲಿದ್ದಾರೆ. ಸಿಜೆಐ ರಮಣ ಅವರ ಸೇವಾವಧಿ ಆಗಸ್ಟ್ 26, 2022 ರಂದು ಕೊನೆಗೊಳ್ಳಲಿದ್ದು, ಅಂದೇ ನ್ಯಾ.ಉದಯ್ ಉಮೇಶ್ ಲಲಿತ್ ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
- 16 ತಿಂಗಳ ಅವಧಿಗೆ ಜವಾಬ್ದಾರಿ ನಿಭಾಯಿಸಿದ್ದ ಸಿಜೆಐ ಎನ್ ವಿ ರಮಣ
2021 ರ ಏಪ್ರಿಲ್ 24 ರಂದು ಎಸ್ ಎ ಬೋಬ್ಡೆ ಅವರಿಂದ ಭಾರತೀಯ ನ್ಯಾಯಾಂಗದ ಮುಖ್ಯಸ್ಥರಾಗಿ ಭಾರತದ 48 ನೇ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ರಮಣ ಅವರು ಅಧಿಕಾರ ವಹಿಸಿಕೊಂಡಿದ್ದರು. ಒಟ್ಟು 16 ತಿಂಗಳ ಅವಧಿಗೆ ನ್ಯಾಯಮೂರ್ತಿ ಎನ್ ವಿ ರಮಣ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. - 1971 ರ ಜನವರಿಯಲ್ಲಿ 13 ನೇ ಸಿಜೆಐ ಆದ ನ್ಯಾಯಮೂರ್ತಿ ಎಸ್ ಎಂ ಸಿಕ್ರಿ ಅವರ ನಂತರ ನ್ಯಾಯಮೂರ್ತಿ ಲಲಿತ್ ಅವರು ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಏರಿಸಲ್ಪಟ್ಟ ಎರಡನೇ ಸಿಜೆಐ ಆಗಲಿದ್ದಾರೆ.
ನ್ಯಾಯಮೂರ್ತಿ ಯು ಯು ಲಲಿತ್ ಎಲ್ಲಿಯವರು?
- ಮಹಾರಾಷ್ಟ್ರ ಮೂಲದ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅಥವಾ ಯು. ಯು. ಲಲಿತ್ ಅವರು ಮೂರು ತಿಂಗಳಿಗಿಂತ ಸ್ವಲ್ಪ ಕಡಿಮೆ ಅವಧಿಗೆ ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.
-
74 ದಿನಗಳ ಕಾಲ ಸೇವೆ: ಅವರು 74 ದಿನಗಳ ಸೇವೆಗಳ ಅಲ್ಪಾವಧಿಯನ್ನು ಹೊಂದಿರುತ್ತಾರೆ. ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ರಂದು ನಿವೃತ್ತರಾಗಲಿದ್ದು, ಆ ನಂತರ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲಿದ್ದಾರೆ.