Published on: April 18, 2022

ದೈತ್ಯ ಧೂಮಕೇತು

ದೈತ್ಯ ಧೂಮಕೇತು

ಸುದ್ಧಿಯಲ್ಲಿ ಏಕಿದೆ? ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ, ಇದುವರೆಗಿನ ಅತ್ಯಂತ ಬೃಹತ್ ಧೂಮಕೇತುವೊಂದನ್ನು ಪತ್ತೆಹಚ್ಚಿದೆ. ಬರೋಬ್ಬರಿ 80 ಮೈಲುಗಳ ಸುತ್ತಳತೆ ಹೊಂದಿರುವ ಈ ಧೂಮಕೇತು, ಮಾನವ ಜನಾಂಗ ಬಲ್ಲ ಅತ್ಯಂತ ದೈತ್ಯ ಧೂಮಕೇತುವಾಗಿದೆ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಬರ್ನಾರ್ಡಿನೆಲ್ಲಿ-ಬರ್ನ್‌ಸ್ಟೈನ್ ಧೂಮಕೇತು

  • C/2014 UN271 ಅಥವಾ ಬರ್ನಾರ್ಡಿನೆಲ್ಲಿ-ಬರ್ನ್‌ಸ್ಟೈನ್ ಎಂದು ಹೆಸರಿಸಲಾಗಿರುವ ಈ ಧೂಮಕೇತು, ಗಾತ್ರದಲ್ಲಿ ರೋಡ್ ಐಲೆಂಡ್ ರಾಜ್ಯಕ್ಕಿಂತ ದೊಡ್ಡದು ಎಂದು ನಾಸಾದ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
  • ಅಲ್ಲದೇ ಧೂಮಕೇತುವಿನ ಕೇಂದ್ರಬಿಂದು ಸಾಮಾನ್ಯ ಧೂಮಕೇತುಗಳ ಕೇಂದ್ರಬಿಂದುವಿಗಿಂತ ಶೇ.50 ಪಟ್ಟು ದೊಡ್ಡದಾಗಿದೆ ಎಂದು ಹೇಳಲಾಗಿದೆ.
  • ‘ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್‌ನಲ್ಲಿ ‘ ಈ ಧೂಮಕೇತುವಿನ ಬಗ್ಗೆ ಸಂಶೋಧನಾ ವರದಿ ಪ್ರಕಟಿಸಲಾಗಿದ್ದು, ಮುಂದಿನ ಒಂದು ದಶಕದ ಅವಧಿಯಲ್ಲಿ ಈ ಧೂಮಕೇತು ಸೂರ್ಯನನ್ನು ಒಂದು ಸುತ್ತು ಸುತ್ತುವರೆಯಲಿದೆ
  • ಪ್ರತಿ ಗಂಟೆಗೆ 22,000 ಮೈಲು ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತಿರುವ ಬರ್ನಾರ್ಡಿನೆಲ್ಲಿ-ಬರ್ನ್‌ಸ್ಟೈನ್ ಧೂಮಕೇತು, 2031ರಲ್ಲಿ ಸೂರ್ಯನನ್ನು ಒಂದು ಬಿಲಿಯನ್ ಮೈಲು ದೂರದಿಂದ ಹಾದು ಹೋಗಲಿದೆ
  • ಖಗೋಳಶಾಸ್ತ್ರಜ್ಞರಾದ ಪೆಡ್ರೊ ಬರ್ನಾರ್ಡಿನೆಲ್ಲಿ ಮತ್ತು ಗ್ಯಾರಿ ಬರ್ನ್‌ಸ್ಟೈನ್ ಅವರು ಚಿಲಿಯ ಟೊಲೊಲೊ ಇಂಟರ್-ಅಮೆರಿಕನ್ ವೀಕ್ಷಣಾಲಯದಲ್ಲಿ ಈ ಧೂಮಕೇತುವಿನ ಇರುವಿಕೆಯನ್ನು ಪತ್ತೆಹಚ್ಚಿದ್ದಾರೆ. ಹೀಗಾಗಿ ಈ ಧೂಮಕೇತುವಿಗೆ ಬರ್ನಾರ್ಡಿನೆಲ್ಲಿ-ಬರ್ನ್‌ಸ್ಟೈನ್ ಎಂದು ಹೆಸರಿಡಲಾಗಿದೆ.
  • 2010ರಲ್ಲಿ ಆಕಸ್ಮಿಕವಾಗಿ ಈ ಧೂಮಕೇತುವನ್ನು ಪತ್ತೆಹಚ್ಚಲಾಗಿತ್ತು. ಆಗ ಈ ಧೂಮಕೇತು ಸೂರ್ಯನಿಂದ 3 ಬಿಲಿಯನ್ ಮೈಲುಗಳಷ್ಟು ದೂರದಲ್ಲಿತ್ತು
  • ಸದ್ಯ ಸೂರ್ಯನಿಂದ 2 ಬಿಲಿಯನ್ ಮೈಲು ದೂರದಲ್ಲಿರುವ ಈ ಧೂಮಕೇತುವಿನ ಮೇಲ್ಮೈ ಉಷ್ಣಾಂಶ -348 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.