Published on: May 23, 2023

ದ್ವಾರಕಾ ಎಕ್ಸಪ್ರೆಸ್ ವೆ

ದ್ವಾರಕಾ ಎಕ್ಸಪ್ರೆಸ್ ವೆ

ಸುದ್ದಿಯಲ್ಲಿ ಏಕಿದೆ? ದೆಹಲಿ ದಟ್ಟಣೆಯ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ 8 ಲೇನ್ ಎಲಿವೇಟೆಡ್ ಅರ್ಬನ್ ಎಕ್ಸ್‌ಪ್ರೆಸ್‌ವೇ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮುಂದಿನ 3-4 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ  ಘೋಷಿಸಿದ್ದಾರೆ.

ಮುಖ್ಯಾಂಶಗಳು

  • ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನು 9,000 ಕೋಟಿ ರೂಪಾಯಿ ವೆಚ್ಚದಲ್ಲಿ29.6 ಕಿಮೀ ಉದ್ದ (ಹರಿಯಾಣದಲ್ಲಿ 18.9 ಕಿ.ಮೀ ಮತ್ತು ದೆಹಲಿಯಲ್ಲಿ 10.1 ಕಿಮೀ) ದ ಎಕ್ಸ್ಪ್ರೆಸ್ವೇ ನಿರ್ಮಿಸಲಾಗುತ್ತಿದೆ ಮತ್ತು ಇದು ದೇಶದ ಮೊದಲ 8-ಲೇನ್ ಎಲಿವೇಟೆಡ್ ಪ್ರವೇಶ ನಿಯಂತ್ರಿತ ಕಾರಿಡಾರ್ ಆಗಿರುತ್ತದೆ.
  • ದ್ವಾರಕಾ ಎಕ್ಸ್‌ಪ್ರೆಸ್‌ವೇ NH-48 ನಲ್ಲಿ ಶಿವ ಮೂರ್ತಿ ಬಳಿ ಪ್ರಾರಂಭವಾಗುತ್ತದೆ ಮತ್ತು ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇನಲ್ಲಿ ಖೇರ್ಕಿ ದೌಲಾ ಟೋಲ್ ಪ್ಲಾಜಾ ಬಳಿ ಕೊನೆಗೊಳ್ಳುತ್ತದೆ.
  • ಇದು ದ್ವಾರಕಾ ಎಕ್ಸ್‌ಪ್ರೆಸ್‌ವೇ ಮೂಲಕ ದ್ವಾರಕಾ ಕಡೆಯಿಂದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಒದಗಿಸುತ್ತದೆ.

ವಿಶೇಷತೆಗಳು

  • ಈ ಎಕ್ಸ್ಪ್ರೆಸ್ವೇಯ ರಸ್ತೆ ಸಂಪರ್ಕವು ನಾಲ್ಕು ಹಂತಗಳನ್ನು ಹೊಂದಿದೆ. ಸುರಂಗ, ಕೆಳಸೇತುವೆ , ಗ್ರೇಡ್ ರಸ್ತೆ , ಎಲಿವೇಟೆಡ್ ರಸ್ತೆ ಮತ್ತು ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ .
  • ಎಕ್ಸ್ಪ್ರೆಸ್ವೇಯ ಎರಡೂ ಬದಿಯಲ್ಲಿ ಮೂರು ಲೇನ್ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ.
  • ದೆಹಲಿಯ ಈ ಎಕ್ಸ್ಪ್ರೆಸ್ ವೇಯಲ್ಲಿ ದೇಶದ ಅತ್ಯಂತ ಅಗಲವಾದ 3.6 ಕಿಲೋಮೀಟರ್ ಉದ್ದದ 8 ಲೇನ್ ಸುರಂಗವನ್ನು ನಿರ್ಮಿಸಲಾಗುತ್ತಿದೆ.
  • ಈ ಸಂಪೂರ್ಣ ಎಕ್ಸ್ಪ್ರೆಸ್ವೇ ಸ್ವಯಂಚಾಲಿತ ಟೋಲ್ ವ್ಯವಸ್ಥೆಯನ್ನು ಹೊಂದಿರುತ್ತದೆ ಮತ್ತು ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ( ಐಟಿಎಸ್ ) ಸೌಲಭ್ಯವನ್ನು ಹೊಂದಿರುತ್ತದೆ.