Published on: December 19, 2022

ಧಾರ್ಮಿಕ ಸ್ವಾತಂತ್ರ್ಯದ ಕಪ್ಪು ಪಟ್ಟಿ

ಧಾರ್ಮಿಕ ಸ್ವಾತಂತ್ರ್ಯದ ಕಪ್ಪು ಪಟ್ಟಿ

ಸುದ್ದಿಯಲ್ಲಿ ಏಕಿದೆ? ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಅಮೆರಿಕಾವು ಭಾರತವನ್ನು ಹೊರಗಿಟ್ಟಿದೆ.

ಮುಖ್ಯಾಂಶಗಳು

  • ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿರುವ ಅಮೇರಿಕಾದ ನಿರ್ಧಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ.
  • ಅಮೇರಿಕ ಪಾಕಿಸ್ತಾನ, ಚೀನಾ, ಕ್ಯೂಬಾ, ನಿಕರಾಗುವಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಪರಿಸ್ಥಿತಿಯಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಿತ್ತು. ಅಮೇರಿಕಾದ ಈ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಏಕಪಕ್ಷೀಯ ನಿರ್ಧಾರ ಎಂದು ಹೇಳಿದೆ.
  • ವರದಿ ನೀಡುವವರು: ಯು.ಎಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (ಯುಎಸ್ ಸಿಐಆರ್ ಎಫ್)
  • ಮಾನದಂಡ : ಆಯಾ ದೇಶದಲ್ಲಿ ಜನತೆ ಅನುಭವಿಸುತ್ತಿರುವ ಧಾರ್ಮಿಕ ಶೋಷಣೆಯ ಪ್ರಮಾಣವನ್ನು  ಮಾನದಂಡವಾಗಿಸಿಕೊಂಡು ಮಾಡಲಾಗಿರುವಂತಹ ಸರ್ವೆಯಿಂದ ಬಂದ ಫಲಿತಾಂಶ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯುಎಸ್ ಸಿಐಆರ್ ಎಫ್

  • ಸ್ವತಂತ್ರ, ದ್ವಿಪಕ್ಷೀಯ US ಫೆಡರಲ್ ಸರ್ಕಾರದ ಆಯೋಗವಾಗಿದ್ದು, ವಿದೇಶದಲ್ಲಿ ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಸಾರ್ವತ್ರಿಕ ಹಕ್ಕನ್ನು 1998 ರಲ್ಲಿ ರಕ್ಷಿಸಲು ಸ್ಥಾಪಿಸಲಾಗಿದೆ.
  • ಇದು US ಕಾಂಗ್ರೆಸ್‌ಗೆ ಸಲಹಾ ಸಂಸ್ಥೆಯಾಗಿದೆ.
  • ಇದರ ಪ್ರಧಾನ ಕಛೇರಿ ವಾಷಿಂಗ್ಟನ್ DC ಯಲ್ಲಿದೆ.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿ

  • ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಭಾರತದ ಸಂವಿಧಾನದ 25-28 ನೇ ವಿಧಿಯಿಂದ ಖಾತರಿಪಡಿಸಿದ ಮೂಲಭೂತ ಹಕ್ಕು.
  • ವಿಧಿ 25 (ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮದ ಪ್ರಚಾರ).
  • ವಿಧಿ 26 (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ).
  • ವಿಧಿ 27 (ಯಾವುದೇ ನಿರ್ಧಿಷ್ಟ ಧರ್ಮದ ಉನ್ನತಿಗಾಗಿ ತೆರಿಗೆಗಳ ಸಂದಾಯದ ಬಗ್ಗೆ ಸ್ವಾತಂತ್ರ್ಯ).
  • ವಿಧಿ 28 (ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಅಥವಾ ಧಾರ್ಮಿಕ ಉಪಾಸನೆಯಲ್ಲಿ  ಹಾಜರಾಗುವ ಸ್ವಾತಂತ್ರ್ಯ).
  • ಇದಲ್ಲದೆ, ಸಂವಿಧಾನದ 29 ಮತ್ತು 30 ನೇ ವಿಧಿಯು ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆಗೆ ಸಂಬಂಧಿಸಿದೆ.