Published on: September 15, 2023
ನನ್ನ ಬಿಲ್ಲು ನನ್ನ ಅಧಿಕಾರ ಯೋಜನೆ
ನನ್ನ ಬಿಲ್ಲು ನನ್ನ ಅಧಿಕಾರ ಯೋಜನೆ
ಸುದ್ದಿಯಲ್ಲಿ ಏಕಿದೆ? ಜಿಎಸ್ಟಿ ಇನ್ವಾಯ್ಸ್ ಅಪ್ಲೋಡ್ ಮಾಡಿದವರಿಗೆ ಬಹುಮಾನ ನೀಡುವ ‘ನನ್ನ ಬಿಲ್ಲು ನನ್ನ ಅಧಿಕಾರ (ಮೇರಾ ಬಿಲ್ ಮೇರಾ ಅಧಿಕಾರ್)’ ಯೋಜನೆಗೆ ಕೇಂದ್ರ ಸರ್ಕಾರವು ಚಾಲನೆ ನೀಡಿದೆ.
ಮುಖ್ಯಾಂಶಗಳು
- ಆರಂಭಿಕ ಹಂತದಲ್ಲಿ ಇದು ಮೂರು ರಾಜ್ಯಗಳಲ್ಲಿ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ.
- ಅಸ್ಸಾಂ , ಗುಜರಾತ್, ಹರಿಯಾಣ ರಾಜ್ಯದಲ್ಲಿ ಹಾಗೂ ಪುದುಚೇರಿ, ದಮನ್ ಮತ್ತು ದೀಯು, ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಇದು ಈಗ ಜಾರಿಗೆ ಬರಲಿದೆ ಎಂದು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಟಿ) ಹೇಳಿದೆ.
ಬಹುಮಾನ:
- GST ಬಿಲ್ ಅನ್ನು ಅಪ್‌ಲೋಡ್ ಮಾಡುವ ನಾಗರಿಕರಿಗೆ 1 ಕೋಟಿ ರೂ.ವರೆಗಿನ ಆಕರ್ಷಕ ಬಹುಮಾನವನ್ನು ಗೆಲ್ಲಲು ಸರ್ಕಾರವು ಅವಕಾಶವನ್ನು ನೀಡಿದೆ.
- ಈ ಯೋಜನೆಯಲ್ಲಿ ಪ್ರತಿ ತಿಂಗಳು ಸರ್ಕಾರ 800 ಜನರನ್ನು ಆಯ್ಕೆ ಮಾಡುತ್ತದೆ. ಈ 800 ಜನರು ತಮ್ಮ ಜಿಎಸ್‌ಟಿ ಬಿಲ್ ಅನ್ನು ಪ್ರತಿ ತಿಂಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.
- ಈ 800 ಜನರಿಗೆ 10,000 ರೂಪಾಯಿ ಬಹುಮಾನ ನೀಡಲಾಗುವುದು. ಅದೇ ಸಮಯದಲ್ಲಿ, ಅಂತಹ 10 ಜನರನ್ನು ಆಯ್ಕೆ ಮಾಡಲಾಗುವುದು, ಅವರಿಗೆ ಸರ್ಕಾರವು 10 ಲಕ್ಷದವರೆಗೆ ಮೊತ್ತವನ್ನು ನೀಡುತ್ತದೆ.
- ಯೋಜನೆಯಡಿಯಲ್ಲಿ, ತ್ರೈಮಾಸಿಕ ಆಧಾರದ ಮೇಲೆ 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನವನ್ನು ಡ್ರಾ ಮಾಡಲಾಗುವುದು.
- ಈ ಬಹುಮಾನವನ್ನು ಇಬ್ಬರಿಗೆ ನೀಡಲಾಗುವುದು.
ಉದ್ದೇಶ : ಗ್ರಾಹಕರು ವರ್ತಕರಲ್ಲಿ ಜಿಎಸ್ಟಿ ಇನ್ವಾಯ್ಸ್ ಕೇಳಿ ಪಡೆಯುವುದನ್ನು ಉತ್ತೇಜಿಸುವುದು. ಹೆಚ್ಚೆಚ್ಚು ಜಿಎಸ್‌ಟಿ ಬಿಲ್‌ಗಳು ಸೃಷ್ಟಿಯಾದರೆ ತೆರಿಗೆ ವಂಚನೆ ಕಡಿಮೆ ಆಗಲಿದೆ. ಇದರೊಂದಿಗೆ ಸರ್ಕಾರದ ಆದಾಯವು ಹೆಚ್ಚಲಿದೆ.
GST (ಸರಕು ಮತ್ತು ಸೇವಾ ತೆರಿಗೆ)
- GSTಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಧಿಸುವ ಬಹು ಪರೋಕ್ಷ ತೆರಿಗೆಗಳನ್ನು ಬದಲಿಸುವ ಏಕೀಕೃತ ತೆರಿಗೆ ವ್ಯವಸ್ಥೆಯಾಗಿದೆ.
- GST ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸರಕು ಮತ್ತು ಸೇವೆಗಳ ಮೇಲೆ ತೆರಿಗೆಗಳನ್ನು ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಹಂಚಿಕೊಳ್ಳುತ್ತವೆ.
- ಭಾರತದ ಸಂವಿಧಾನದ 101 ನೇ ತಿದ್ದುಪಡಿಯ ಮೂಲಕ ಜುಲೈ 1, 2017 ರಿಂದ ಜಾರಿಗೆ ಬಂದಿತು.