Published on: April 16, 2023

ನಮನ ಮಾನಸಿಕ ಆರೋಗ್ಯ ಕಾರ್ಯಕ್ರಮ

ನಮನ ಮಾನಸಿಕ ಆರೋಗ್ಯ ಕಾರ್ಯಕ್ರಮ

ಸುದ್ದಿಯಲ್ಲಿ ಏಕಿದೆ? ಗ್ರಾಮೀಣ ಜನರಿಗೆ ಮಾನಸಿಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಮನ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ಮುಖ್ಯಾಂಶಗಳು

  • ದೇಶಾದ್ಯಂತ ಈ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದ್ದು, ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕಾಗಿ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ಮತ್ತು ಉತ್ತರಾಖಂಡದ ಫಿಧೋರಗಡ ಜಿಲ್ಲೆಯ ಮುನ್ಸಿಯಾರಿ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
  • ಸಹಯೋಗ : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಎನ್‌ಜಿಒ ಆಶ್ರಯ ಹಸ್ತ ಟ್ರಸ್ಟ್ (ಎಎಚ್‌ಟಿ) ಸಹಯೋಗದಲ್ಲಿ ‘ನಮನ್’ ಮಾನಸಿಕ ಆರೋಗ್ಯ ಕಾರ್ಯಕ್ರಮ ರೂಪಿಸಲಾಗಿದೆ.

ಉದ್ದೇಶ

  • ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಬಹು ಹಂತದ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ, ವಸ್ತುಗಳು ಮತ್ತು ಗ್ಯಾಜೆಟ್‌ಗಳ ಚಟ, ದುಶ್ಚಟಗಳು ಸೇರಿ ಮಾನಸಿಕ ದೌರ್ಬಲ್ಯ ನಿವಾರಿಸುವುದು ಮುಖ್ಯ ಉದ್ದೇಶವಾಗಿದೆ.

 ‘ನಮನ’ ಕಾರ್ಯಕ್ರಮ:

  • ಜನರಿಗೆ ಮಾನಸಿಕ ಆರೋಗ್ಯ ಒದಗಿಸುವ “ನಮನ್’ ಕಾರ್ಯಕ್ರಮವನ್ನು ನಾಲ್ಕು ವಿಭಿನ್ನ ಹಂತಗಳಲ್ಲಿ ಕಾರ್ಯಗತಗೊಳಿಸಲಾಗುವುದು.
  • ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ಹೊಂದಿರುವ ಮಾನವ ಸಂಪನ್ಮೂಲ ನಿರ್ಮಾಣ, ಆಯಾ ತಾಲೂಕುಗಳ ಮಾನಸಿಕ ಆರೋಗ್ಯ ಮೌಲ್ಯಮಾಪನ ಕುರಿತ ವಿಶ್ಲೇಷಣೆ, ಚಿಕಿತ್ಸೆ ಮತ್ತು ಪುನರ್ವಸತಿ ವ್ಯವಸ್ಥೆ, ಕೊನೆಯದಾಗಿ ಅಂತಿಮ ಹಂತದ ಮೌಲ್ಯಮಾಪನ ಮಾಡುವುದಾಗಿದೆ.
  • ಭವಿಷ್ಯದಲ್ಲಿ ಈ ಯೋಜನೆಯ ಯಶಸ್ಸು ದೇಶದ ಇತರ ತಾಲೂಕುಗಳಿಗೂ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ಮಾದರಿಯಾಗಿ ಕಾರ್ಯನಿರ್ವಹಿಸಲಿದೆ.