Published on: June 18, 2024
ನಾಗಾಸ್ತ್ರ ಡ್ರೋನ್
ನಾಗಾಸ್ತ್ರ ಡ್ರೋನ್
ಸುದ್ದಿಯಲ್ಲಿ ಏಕಿದೆ? ಮಹಾರಾಷ್ಟ್ರದ ನಾಗ್ಪುರ ಮೂಲದ ಸೋಲಾರ್ ಪರಿಕರಗಳ ಕಂಪನಿಯೊಂದು ತಯಾರಿಸಿರುವ ಸ್ವದೇಶಿ ನಿರ್ಮಿತ 120 ನಾಗಾಸ್ತ್ರ –1 ಕಾಮಿಕಾಜೆ ಡ್ರೋನಗಳನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.
ಮುಖ್ಯಾಂಶಗಳು
- ಸ್ವದೇಶಿ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆಯು 480 ಲೋಯಿಟರ್ ಮುನಿಷನ್ಗಳನ್ನು(ಕಾಮಿಕಾಜೆ ಅಥವಾ ಆತ್ಮಹತ್ಯಾ ಡ್ರೋನ್) ಒದಗಿಸಲು ನಾಗ್ಪುರದ ಎಕನಾಮಿಕ್ಸ್ ಎಕ್ಷಪ್ಲೋಸಿವ್ ಲಿಮಿಟೇಡ್ಗೆ(ಇಇಸಿ) ಆರ್ಡರ್ ನೀಡಿತ್ತು.
- ಎಕನಾಮಿಕ್ಸ್ ಎಕ್ಷಪ್ಲೋಸಿವ್ ಲಿಮಿಟೆಡ್ (ಇಇಎಲ್) ಸಂಸ್ಥೆಯು ಬೆಂಗಳೂರಿನ ಝೆಡ್-ಮೋಷನ್ ಅಟಾನಮಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಶೇಕಡಾ 75ಕ್ಕಿಂತ ಹೆಚ್ಚು ದೇಶೀಯ ಪರಿಕರಗಳನ್ನು ಬಳಸಲಾಗಿದೆ.
- ಡ್ರೋನಗಳನ್ನು ಸೇನೆಯ ಪುಲ್ಗಾಂವನ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ತಲುಪಿಸಿದೆ.
ವಿಶೇಷತೆಗಳು
- ಡ್ರೋನ್ ಕಾಮಿಕಾಜೆ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತದೆ.
- ಜಿಪಿಎಸ್ ಮೂಲಕ ನಿಖರವಾಗಿ ಗುರಿಗಳನ್ನು ಮುಟ್ಟುವ ಮೂಲಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
- 9 ಕೆ.ಜಿಗಳಷ್ಟು ತೂಕವಿದೆ.
- ಹಗಲು– ರಾತ್ರಿಯ ಕಣ್ಗಾವಲು ಕ್ಯಾಮೆರಾ, 1ಕೆ.ಜಿಯಷ್ಟು ಸ್ಫೋಟಕ ಸಾಮರ್ಥ್ಯದ ಸಿಡಿತಲೆ ಹೊಂದಿದೆ.
- ಇದು 4,500 ಮೀಟರ್ ಎತ್ತರದಲ್ಲಿ ಹಾರುತ್ತದೆ.