Published on: April 23, 2022
ನಾಮನಿರ್ದೇಶಿತ ಕೌನ್ಸಿಲರ್
ನಾಮನಿರ್ದೇಶಿತ ಕೌನ್ಸಿಲರ್
ಸುದ್ಧಿಯಲ್ಲಿ ಏಕಿದೆ? ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಸೆಕ್ಷನ್ 42(2) ರ ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಕೌನ್ಸಿಲರ್‌ಗಳು ಪೌರಾಡಳಿತ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಹಿನ್ನಲೆ
- ನಾಮನಿರ್ದೇಶಿತ ಕೌನ್ಸಿಲರ್‌ಗಳು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರು ಎಂದು ಘೋಷಿಸುವಂತೆ ಕೋರಿ ಕೋಲಾರದ ಮಾಲೂರು ಪುರಸಭೆಯ ನಾಮನಿರ್ದೇಶಿತ ಕೌನ್ಸಿಲರ್‌ಗಳಾದ ಕೆ.ಲಕ್ಷ್ಮೀಕಾಂತ ಮತ್ತು ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಲಯದ ಅಭಿಪ್ರಾಯವೇನು ?
- ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ ಮತ್ತು ನಾಮನಿರ್ದೇಶಿತ ಸದಸ್ಯರಿಗೆ ಕೌನ್ಸಿಲ್‌ನ ಸಭೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರುವುದಿಲ್ಲ. ಈ ಕುರಿತು ಸಂವಿಧಾನದ ಕಲಂ 243 ಆರ್(2) (ಎ) ನಲ್ಲಿ ಮತ್ತು ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ 1964ರ ಸೆಕ್ಷನ್ 11(1)(ಬಿ)ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ ನಾಮನಿರ್ದೇಶಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದ ಹಕ್ಕು ಕೇಳುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.