Published on: January 25, 2024

ನಾಮ್ದಫಾ ಹಾರುವ ಅಳಿಲು

ನಾಮ್ದಫಾ ಹಾರುವ ಅಳಿಲು

ಸುದ್ದಿಯಲ್ಲಿ ಏಕಿದೆ? ಕಳೆದ 42 ವರ್ಷಗಳಿಂದ ಪರಿಸರದಲ್ಲಿ ಎಂದೂ ಕಂಡಿರದ ನಾಮ್ದಫಾ ಹಾರುವ ಅಳಿಲು ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ.

ಮುಖ್ಯಾಂಶಗಳು

  • ನಾಮ್ದಫಾ ಹಾರುವ ಅಳಿಲು (ಬಿಸ್ವಾಮೊಯೋ ಪ್ಟೆರಸ್ ಬಿಸ್ವಾಸಿ) ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿದೆ.
  • ಅವುಗಳ ವಾಸಸ್ಥಾನವು ಸಣ್ಣ ವ್ಯಾಪ್ತಿಯಲ್ಲಿ ಇರುವುದೇ ಈ ಪ್ರಬೇಧಗಳ ಅವನತಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ.
  • ಸಮುದ್ರಮಟ್ಟದಿಂದ 100ರಿಂದ 350 ಮೀಟರ್ ಎತ್ತರದಲ್ಲಿರುವ ಪೂರ್ವ ಹಿಮಾಲಯದ ಜೀವವೈವಿಧ್ಯ ವಲಯದಲ್ಲಿರುವ ಅತಿದೊಡ್ಡ ಸಂರಕ್ಷಿತ ಪ್ರದೇಶವಾದ ನಾಮ್ದಫಾ ರಾಷ್ಟ್ರೀಯ ಉದ್ಯಾನದಲ್ಲಿ 1981ರಲ್ಲಿ ಕಂಡ ಏಕೈಕ ಅಳಿಲೇ ಕಟ್ಟಕಡೆಯ ಅಳಿಲಾಗಿತ್ತು.
  • ಇದು ಮುಸ್ಸಂಜೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ
  • ವೃಕ್ಷಾವಲಂಬಿ(ಮರಗಳ ಮೇಲೆ ಜೀವಿಸುವ) ಜೀವಿಯಾಗಿದೆ.
  • ವನ್ಯಜೀವಿ ಸಂರಕ್ಷಣಾ ಕಾಯಿದೆ – 1972ರ ಷೆಡ್ಯೂಲ್ I ರ ಅಡಿಯಲ್ಲಿ ಈ ಪ್ರಭೇದಗಳನ್ನು ಪಟ್ಟಿ ಮಾಡಲಾಗಿದೆ.

ನಾಮ್ದಫಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶ

  • ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶ ಎಂಬ ಎರಡೂ ಮನ್ನಣೆಗಳಿಗೆ ಪಾತ್ರವಾಗಿದೆ
  • ವಿಸ್ತೀರ್ಣ: 1985.23 ಚದರ ಕಿಲೋ ಮೀಟರ್
  • ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯೊಳಗೆ ಭಾರತ ಮತ್ತು ಮ್ಯಾನ್ಮಾರ್ (ಬರ್ಮಾ) ನಡುವಿನ ಅಂತರರಾಷ್ಟ್ರೀಯ ಗಡಿಯಲ್ಲಿ ನೆಲೆಗೊಂಡಿದೆ
  • ನೋವಾ-ಡಿ ಹಿಂಗ್ ನದಿಯ ಉದ್ದಕ್ಕೂ ಹಬ್ಬಿರುವ ಹಿಮಾಚ್ಛಾದಿತ ನೀಲಿ ಬೆಟ್ಟಗಳ ನಡುವೆ ನೆಲೆಸಿದೆ.
  • ತನ್ನ ವಿಸ್ತಾರವಾದ ಉಷ್ಣವಲಯದ ಮಳೆಕಾಡಿಗೆ ಹೆಸರುವಾಸಿಯಾಗಿರುವ ಈ ಅರಣ್ಯವನ್ನು 1983ರಲ್ಲಿ ಸರ್ಕಾರವು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿತು.
  • ಈ ಪ್ರದೇಶವು ಭಾರತದಲ್ಲಿ ಬೇರೆಲ್ಲಿಯೂ ಕಂಡುಬರದ ಪೈನಸ್ ಮೆರ್ಕುಸಿ ಮತ್ತು ಅಬೀಸ್ ಡೆಲವಾವಿ ಸೇರಿದಂತೆ 150ಕ್ಕೂ ಹೆಚ್ಚು ಜಾತಿಯ ಮರಗಳನ್ನು ಹೊಂದಿದೆ.
  • ಉದ್ಯಾನದಲ್ಲಿ ಮಿಶಿಮಿ ಟೀಟಾ (ಕೋಪ್ಟಿ ಟೀಟಾ) ಸಸ್ಯಗಳು ಬೆಳೆಯುತ್ತಿದ್ದು ಇದು ಸ್ಥಳೀಯವಾಗಿ ಪ್ರಸಿದ್ಧ ಔಷಧೀಯ ಸಸ್ಯವಾಗಿದೆ.
  • ಇದು ಜಗತ್ತಿನಲ್ಲಿಯೇ ಎಲ್ಲಾ ನಾಲ್ಕು ಬೆಕ್ಕಿನ ಪ್ರಭೇದಕ್ಕೆ ಸೇರುವ ದೊಡ್ಡ ಬೆಕ್ಕುಗಳನ್ನು ಒಂದೇ ಕಡೆ ಪೊರೆಯುವ ಏಕೈಕ ಉದ್ಯಾನವಾಗಿದೆ. ಹುಲಿ( ಪ್ಯಾಂಥೆರಾ ಟೈ ಗ್ರಿಸ್), ಚಿರತೆ (ಪ್ಯಾಂಥೆರಾ ಪಾರ್ಡಸ್), ಹಿಮಚಿರತೆ (ಪ್ಯಾಂಥೆರಾ ಅನ್ಸಿಯಾ), ಮತ್ತು ಕ್ಲೌಡೆಡ್ ಲೆಪರ್ಡ್ (ನಿಯೋಫೆಲಿಸ್ ನೆಬುಲೋಸಾ)