Published on: September 16, 2021

‘ನಿರ್ಭಯಾ ದಳ’

‘ನಿರ್ಭಯಾ ದಳ’

ಸುದ್ಧಿಯಲ್ಲಿ ಏಕಿದೆ? ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಾರೆ.

ಏನಿದು ನಿರ್ಭಯಾ ದಳ?

  • ಪೊಲೀಸರು ಮಾಡಿಕೊಂಡಿರುವ ತಂಡಕ್ಕೆ ನಿರ್ಭಯಾ ದಳ ಎಂದು ಹೆಸರಿಡಲಾಗಿದೆ. ಈ ತಂಡದಲ್ಲಿ ಪಿಎಸ್‌ಐ ಅಥವಾ ಎಎಸ್‌ಐ ರ‍್ಯಾಂಕ್‌ನ ಮಹಿಳಾ ಪೊಲೀಸ್ ಅಧಿಕಾರಿ, ಒಬ್ಬ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ, ಒಬ್ಬ ಡ್ರೈವರ್ ಇರಲಿದ್ದಾರೆ.
  • ನಿರ್ಭಯಾ ಪ್ರಕರಣವನ್ನು ಹೋಲುವಂತ ಭೀಕರ ಅತ್ಯಾಚಾರ ಕೊಲೆ ಪ್ರಕರಣ ನಡೆದ ನಂತರ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಮುಂಬೈ ಮಹಿಳೆಯರಿಗೆ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಈ ನಗರದಲ್ಲೇ ಅತ್ಯಾಚಾರ ನಡೆದಿರುವುದು ಕ್ರೂರ ಘಟನೆಯಾಗಿದ್ದು, ಮಹಿಳೆಯರ ಸಹಾಯಕ್ಕೆ ಪೊಲೀಸ್ ನಿರ್ಭಯಾ ದಳವನ್ನು ರಚಿಸಿದೆ.
  • ನಿರ್ಭಯಾ ದಳ ತಂಡ ಪ್ರತಿ ಪೊಲಿಸ್ ಠಾಣೆಯಲ್ಲೂ ಇರಲಿದೆ. ಈ ತಂಡಕ್ಕೆ ಮೊಬೈಲ್-5 ವಾಹನವನ್ನು ನೀಡಲಾಗುವುದು. ನಿರ್ಭಯಾ ದಳದ ತಂಡದವರಿಗೆ ಎರಡು ದಿನಗಳ ತರಬೇತಿ ನೀಡಲಾಗುವುದು. ಈ ದಳವು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ ಮಹಿಳಾ ರಕ್ಷಣೆ ಬಗ್ಗೆ ತಿಳಿಸಿಕೊಡುತ್ತದೆ.