Published on: October 17, 2022

ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (ಎನ್‌ಜಿಎಲ್‌ವಿ)

ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (ಎನ್‌ಜಿಎಲ್‌ವಿ)

ಸುದ್ದಿಯಲ್ಲಿ ಏಕಿದೆ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1980 ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಗೆ ಪರ್ಯಾಯವಾಗಿ ಹೊಸ ರಾಕೆಟ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಮುಖ್ಯಾಂಶಗಳು

  • ಇಸ್ರೋದ ಹಾಲಿ ವರ್ಕ್‌ಹಾರ್ಸ್ ಉಡಾವಣಾ ನೌಕೆ PSLV ಬದಲಿಗೆ ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (ಎನ್‌ಜಿಎಲ್‌ವಿ) ಹೆಸರಿನ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾತ್ತಿದೆ.
  • ಕೇರಳದ ವಲಿಯಮಲದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನಲ್ಲಿ (ಎಲ್‌ಪಿಎಸ್‌ಸಿ) ಎಂಜಿನಿಯರ್ಸ್ ಕಾನ್‌ಕ್ಲೇವ್ ರ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದು, PSLVಗೆ ಪರ್ಯಾಯವಾದ ಹೊಸ ರಾಕೆಟ್ ಅಭಿವೃದ್ಧಿಯತ್ತ ಇಸ್ರೋ ಸಂಶೋಧನೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.

ಉದ್ದೇಶ

  • ಪಿಎಸ್‌ಎಲ್‌ವಿಯನ್ನು 1980 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ಇದು 2020 ರ ಅಗತ್ಯಗಳನ್ನು ಪೂರೈಸುವುದಿಲ್ಲ. ಹೊಸ ರಾಕೆಟ್ ವಿಕಸನದ ಅಗತ್ಯವಿದೆ. ಅಂತೆಯೇ ಪಿಎಸ್‌ಎಲ್‌ವಿಯನ್ನು ನಿವೃತ್ತಿಗೊಳಿಸಲು ನಿಖರವಾದ ಸಮಯದ ಚೌಕಟ್ಟನ್ನು ನೀಡಿಲ್ಲ, ಸರ್ಕಾರವು ಅನುಮೋದಿಸಿದ ಉಳಿದ ಉಡಾವಣೆಗಳನ್ನು ಪೂರ್ಣಗೊಳಿಸಿದ ನಂತರ ಇಸ್ರೋ ಈ ಪಿಎಸ್ ಎಲ್ ವಿ ರಾಕೆಟ್ ಬಳಕೆಯನ್ನು ನಿಲ್ಲಿಸುತ್ತದೆ.