Published on: December 16, 2022

ನೇಕಾರ ಸಮ್ಮಾನ್ ಯೋಜನೆ

ನೇಕಾರ ಸಮ್ಮಾನ್ ಯೋಜನೆ

ಸುದ್ದಿಯಲ್ಲಿ ಏಕಿದೆ? ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಮುಖ್ಯಾಂಶಗಳು

  • ಕೈಮಗ್ಗ ನೇಕಾರರ ಚಟುವಟಿಕೆಗಳ ಪಾರಂಪರಿಕ ಕಲೆ ಮತ್ತು ಅವರ ಶ್ರಮವನ್ನು ಪರಿಗಣಿಸಿ ಹಾಗೂ ಕೋವಿಡ್-19 ಮಹಾಮಾರಿ ಮತ್ತು ಆರ್ಥಿಕ ಹಿನ್ನೆಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21 ನೇ ಸಾಲಿನಿಂದ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • 2021-22 ನೇ ಸಾಲಿನಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ 49,544 ನೇಕಾರರಿಗೆ ರೂ.990.88 ಲಕ್ಷಗಳನ್ನು ಡಿ.ಬಿ.ಟಿ ಮೂಲಕ ಬಿಡುಗಡೆ ಮಾಡಲಾಗಿದೆ.
  • ಪ್ರತಿ ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ರೂ.5,000/- ಗಳಂತೆ ನೇಕಾರರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಗೆ ಮಾಡಲಾಗುತ್ತದೆ.
  • 2022-23 ನೇ ಸಾಲಿನ ಆಯವ್ಯಯದನ್ವಯ ನೋಂದಾಯಿತ ಕೈಮಗ್ಗ ನೇಕಾರರಿಗೆ “ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು 2,000 ರೂಪಾಯಿಯಿಂದ 5,000 ರೂಪಾಯಿಗಳಿಗೆ ಹೆಚ್ಚಿಸಿದೆ.
  • ಈ ಯೋಜನೆಯನ್ನು ಜುಲೈ 2020 ರಂದು ಪ್ರಾರಂಭಿಸಲಾಗಿದೆ.

ಅರ್ಹತೆಗಳು

  • ಅರ್ಜಿದಾರರು ವೃತ್ತಿಯಲ್ಲಿ ಕೈಮಗ್ಗ ನೇಕಾರರಾಗಿರಬೇಕು.
  • ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  • ರೇಷ್ಮೆ, ಹತ್ತಿ ಮತ್ತು ಉಣ್ಣೆಯ ಕೈಮಗ್ಗ ನೇಕಾರರು ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಇತರ ಕೈಮಗ್ಗ ನೇಕಾರರು ಸಹ ಅರ್ಹರಾಗಿರುತ್ತಾರೆ.

ೇಕಾರರ ಸಮಸ್ಯೆಗಳು

  • ಬಟ್ಟೆಗಳನ್ನು ನೇಯಲು ನೂಲು, ಪಾಲಿಸ್ಟರ್‌, ರೇಶ್ಮೆ, ಚಮಕ, ಝರಿ ಇತ್ಯಾದಿ ಕಚ್ಛಾ ವಸ್ತು ಬಳಸಲಾಗುತ್ತದೆ. ಒಂದು ವರ್ಷದಿಂದೀಚೆಗೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಅಲ್ಲದೇ ಡೀಸೆಲ್‌ ದರ ಏರಿಕೆಯ ಪರಿಣಾಮ ಸರಕು ಸಾಗಣೆಯ ವೆಚ್ಚವೂ ಹೆಚ್ಚಾಗಿದ್ದು ನೇಕಾರರಿಗೆ ಹೊರೆಯಾಗುತ್ತಿದೆ.
  • ಇನ್ನು ಕೋವಿಡ್‌ ನಂತರದ ದಿನಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತದಿಂದ ಖರೀದಿ ಪ್ರಮಾಣ ಕಡಿಮೆಯಾಗಿದ್ದು ಬಟ್ಟೆಗಳ ಬೆಲೆ ಏರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೇಯ್ದ ಸೀರೆಗಳನ್ನು ಕಡಿಮೆ ಲಾಭಕ್ಕೆ ಮಾರಾಟ ಮಾಡಬೇಕಾದ ಸ್ಥಿತಿ ನೇಕಾರರದ್ದಾಗಿದೆ.