Published on: September 16, 2021
ನೈಸರ್ಗಿಕ ಅನಿಲ
ನೈಸರ್ಗಿಕ ಅನಿಲ
ಸುದ್ಧಿಯಲ್ಲಿ ಏಕಿದೆ? ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿನ ವಾಹನಗಳಿಗೆ ಹಂತ ಹಂತವಾಗಿ ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) ಬಳಕೆ ಮಾಡಲು ಉತ್ತೇಜಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಹೊಸ ಯೋಜನೆ ಪ್ರಾರಂಭಿಸಿದೆ.
- ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಸರ್ಕಾರ ವಾಹನಗಳಿಗೆ ಹಂತ ಹಂತವಾಗಿ ನೈಸರ್ಗಿಕ ಅನಿಲ ಅಳವಡಿಸಲು ಪ್ರಯತ್ನಿಸುತ್ತದೆ. ಬಸ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೈಸರ್ಗಿಕ ಅನಿಲ ಅಳವಡಿಸಲಾಗುವುದು
- ಈ ಯೋಜನೆಯ ಅಡಿಯಲ್ಲಿ, ಗೇಲ್ ಗ್ಯಾಸ್ ಕಂಪನಿ ಬೆಂಗಳೂರಿನಲ್ಲಿ 49 ಸಿಎನ್ಜಿ ಕೇಂದ್ರಗಳನ್ನು ಹೊಂದಿದ್ದು, ಸದ್ಯ 37 ಕೇಂದ್ರಗಳು ಕಾರ್ಯಾ ನಿರ್ವಹಿಸುತ್ತಿದೆ. ಇನ್ನುಳಿದ 12 ಕೇಂದ್ರಗಳು ಅಕ್ಟೋಬರ್ ಅಂತ್ಯದೊಳಗೆ ಬಳಕೆಗೆ ಲಭ್ಯವಾಗಲಿವೆ. ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 50 ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ