Published on: December 21, 2021

‘ನೋರಾ ಹೆಲ್ತ್ ಕೇರ್’ ಯೋಜನೆ

‘ನೋರಾ ಹೆಲ್ತ್ ಕೇರ್’ ಯೋಜನೆ

ಸುದ್ಧಿಯಲ್ಲಿ ಏಕಿದೆ? ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಾಡಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ಬಾಲ್ಯದಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗೆ ತಾಯಿಯ ಎದೆ ಹಾಲು ರಾಮಬಾಣ. ಇದರ ಮಹತ್ವ ಅರಿತಿರುವ ರಾಜ್ಯ ಸರಕಾರವು ‘ನೋರಾ ಹೆಲ್ತ್‌ ಕೇರ್‌’ ಯೋಜನೆ ಮೂಲಕ ಕೇರ್‌ ಕಂಪ್ಯಾನಿಯನ್‌ ಪ್ರೋಗ್ರಾಮ್‌ ಅನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ.

ಏಕೆ ಈ ಯೋಜನೆ ?

  • ತಾಯಂದಿರು ಸಕಾಲಿಕ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ತಮ್ಮ ಮಕ್ಕಳಿಗೆ ಎದೆಹಾಲು ಕೊಡುವಲ್ಲಿ ವಿಫಲರಾಗಿ ನವಜಾತ ಶಿಶುಗಳ ಸಾವಿಗೆ ಕಾರಣವಾಗುತ್ತಿದ್ದಾರೆ. ಎದೆಹಾಲು ಮತ್ತು ಎದೆಹಾಲು ಕೊಡುವ ಬಗ್ಗೆ ತಾಯಂದಿರಲ್ಲಿರುವ ಗೊಂದಲ ಹೋಗಲಾಡಿಸಿ, ಎದೆಹಾಲು ಕುಡಿಸಲು ನಿರಂತರ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

ಯೋಜನೆ ಬಗ್ಗೆ

  • ರಾಜ್ಯದ ಪ್ರತಿಯೊಂದು ಜಿಲ್ಲಾಸ್ಪತ್ರೆ, ದೊಡ್ಡ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎದೆಹಾಲಿನ ಮಹತ್ವವನ್ನು ಬಾಣಂತಿಯರಿಗೆ ತಿಳಿಸಲಾಗುತ್ತಿದೆ.

ಎದೆಹಾಲಿನ ಮಹತ್ವ

  • ಮಗುವು ಹುಟ್ಟಿದ ಒಂದು ತಾಸಿನೊಳಗೆ ತಾಯಿಯ ಎದೆಹಾಲು ಕುಡಿಸಿದರೆ ನವ ಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಡೆಯಬಹುದು. ಪ್ರಸೂತಿಯಾದ ಮೂರು ದಿನಗಳವರೆಗೆ ತಾಯಿಯ ಎದೆಹಾಲಿನಲ್ಲಿ ಕೊಲೆಸ್ಟಮ್‌ ಎನ್ನುವ ಅಂಶವು ಮಗುವಿಗೆ ಒಂದು ರೀತಿಯ ನೈಸರ್ಗಿಕ ಲಸಿಕೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಮಗು ಹುಟ್ಟಿದ ಒಂದು ತಾಸಿನೊಳಗೆ ತಾಯಿಯು ಎದೆಹಾಲು ನೀಡಬೇಕೆಂಬುದು ಮಕ್ಕಳ ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಓ) ಅಭಿಪ್ರಾಯ.
  • 6 ತಿಂಗಳ ಮೇಲಿನ ಮಗುವಿಗೆ ಮೃದು ಆಹಾರ ಸೇರಿದಂತೆ ಎದೆಹಾಲನ್ನು ನಿಯಮಾನುಸಾರ ಕುಡಿಸುವುದರಿಂದ ಶೇ.19ರಷ್ಟು 5 ವರ್ಷ ಒಳಗಿನ ಮಕ್ಕಳ ಸಾವು ತಡೆಗಟ್ಟಬಹುದು.