Published on: November 15, 2021

ನೋರೋವೈರಸ್

ನೋರೋವೈರಸ್

ಸುದ್ಧಿಯಲ್ಲಿ ಏಕಿದೆ ? ಕಲುಷಿತ ನೀರು ಹಾಗೂ ಆಹಾರದಿಂದ ಮನುಷ್ಯರಿಗೆ ಹರಡುವ ಮಾರಕ ನೋರೋವೈರಸ್‌ನ ಪ್ರಕರಣಗಳು ಕೇರಳದ ವಯನಾಡು ಜಿಲ್ಲೆಯಲ್ಲಿ ದೃಢಪಟ್ಟಿವೆ.

ನೊರೊವೈರಸ್ ಎಂದರೇನು?

  • ನೋರೋವೈರಸ್ ಎನ್ನುವುದು ಜಠರಕರುಳಿನ ಕಾಯಿಲೆಗೆ ಕಾರಣವಾಗುವ ವೈರಸ್‌ಗಳ ಗುಂಪು.

ನೋರೋವೈರಸ್ ಲಕ್ಷಣಗಳೇನು?

  • ಈ ವೈರಸ್ ಹೊಟ್ಟೆಯ ಭಾಗದಲ್ಲಿ ಮತ್ತು ಕರುಳಿನಲ್ಲಿ ಉರಿಗೆ ಕಾರಣವಾಗುತ್ತದೆ. ಜತೆಗೆ ವಿಪರೀತ ವಾಂತಿ ಮತ್ತು ಅತಿಸಾರ ಉಂಟಾಗುತ್ತದೆ.
  • ನೋರೋವೈರಸ್ ಆರೋಗ್ಯವಂತ ಜನರಿಗೆ ಹೆಚ್ಚು ಅಪಾಯ ಉಂಟುಮಾಡುವುದಿಲ್ಲ. ಆದರೆ ಚಿಕ್ಕ ಮಕ್ಕಳು, ವೃದ್ಧರಲ್ಲಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಗಂಭೀರ ಸ್ವರೂಪದ ಸಮಸ್ಯೆ ಉಂಟುಮಾಡಬಲ್ಲದು.
  • ಈ ಪ್ರಾಣಿಜನ್ಯ ಕಾಯಿಲೆಯು ಸೋಂಕು ತಗುಲಿದ ವ್ಯಕ್ತಿಯಿಂದ ನೇರವಾಗಿ ಮತ್ತೊಬ್ಬರಿಗೆ ಹರಡಬಲ್ಲದು. ಸೋಂಕಿತ ವ್ಯಕ್ತಿ ಮಲ ಹಾಗೂ ವಾಂತಿಯಿಂದ ವೈರಸ್ ಹರಡುವುದು ಸಾಧ್ಯ. ಹೀಗಾಗಿ ರೋಗವು ಬಹಳ ವೇಗವಾಗಿ ಹಬ್ಬುವುದರಿಂದ ಅದರ ಬಗ್ಗೆ ಬಹಳ ಎಚ್ಚರಿಕೆ ಹೊಂದುವುದು ಅಗತ್ಯ. ಕಾಯಿಲೆ ಆರಂಭವಾದ ಎರಡು ದಿನಗಳ ಬಳಿಕ ವೈರಸ್ ಇನ್ನೊಬ್ಬರಿಗೆ ಹರಡಬಲ್ಲದು.
  • ಭೇದಿ, ಹೊಟ್ಟೆ ನೋವು, ವಾಂತಿ, ವಾಕರಿಕೆ, ಜ್ವರ, ತಲೆ ನೋವು ಮತ್ತು ಮೈ ಕೈ ನೋವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ನಿರಂತರ ವಾಂತಿ ಮತ್ತು ಭೇದಿ ನಿರ್ಜಲೀಕರಣಕ್ಕೆ ಹಾಗೂ ಇತರೆ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ.