Published on: November 26, 2022

ನ್ಯಾನೊ ಉಪಗ್ರಹ

ನ್ಯಾನೊ ಉಪಗ್ರಹ

ಸುದ್ಧಿಯಲ್ಲಿ ಏಕಿದೆ?

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಮುಖ್ಯಾಂಶಗಳು

  • ಓಷನ್ ಸ್ಯಾಟ್-3 (Oceansat-3) ಎಂದೂ ಕರೆಯಲ್ಪಡುವ EOS-06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.
  • ಇಸ್ರೋ ಕೈಗೊಂಡ ಈ ವರ್ಷದ ಕೊನೆಯ ಉಡಾವಣೆ ಇದಾಗಿದೆ.
  • PSLV-C54 ಭೂಮಿಯ ವೀಕ್ಷಣಾ ಉಪಗ್ರಹ (EOS-06) ಅಥವಾ ಓಷನ್‌ಸ್ಯಾಟ್ ನ್ನು ಅದರ ಪ್ರಾಥಮಿಕ ಪೇಲೋಡ್ ಆಗಿ ಒಯ್ಯುತ್ತದೆ.
  • ಎಂಟು ಸಹ-ಪ್ರಯಾಣಿಕ ಉಪಗ್ರಹಗಳನ್ನು ಎರಡು ಗಂಟೆಗಳ ಕಾಲಾವಧಿಯಲ್ಲಿ ಸೂರ್ಯನ ಸಿಂಕ್ರೊನಸ್ ಕಕ್ಷೆಗಳಲ್ಲಿ ಇರಿಸಲಿದೆ
  • ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿರುವ ಪ್ರಾಥಮಿಕ ಉಪಗ್ರಹ EOS-06 ನ್ನು 742 ಕಿಮೀ ಎತ್ತರದಲ್ಲಿ ಲಿಫ್ಟ್-ಆಫ್‌ನಿಂದ 17 ನಿಮಿಷಗಳ ನಂತರ ಕಕ್ಷೆ-1 ರಲ್ಲಿ ಇರಿಸಲಾಯಿತು. ತರುವಾಯ, PSLV-C54 ವಾಹನದ ಪ್ರೊಪಲ್ಷನ್ ಬೇ ರಿಂಗ್‌ನಲ್ಲಿ ಎರಡು ಆರ್ಬಿಟ್ ಚೇಂಜ್ ಥ್ರಸ್ಟರ್‌ಗಳನ್ನು (OCTs) ಬಳಸಿಕೊಂಡು ಕಕ್ಷೆಯ ಬದಲಾವಣೆಯನ್ನು ಮಾಡಲಾಯಿತು.