Published on: March 6, 2023

ನ್ಯಾನೊ ಲಿಕ್ವಿಡ್‌ ಡಿಎಪಿ ಗೊಬ್ಬರ

ನ್ಯಾನೊ ಲಿಕ್ವಿಡ್‌ ಡಿಎಪಿ ಗೊಬ್ಬರ


ಸುದ್ದಿಯಲ್ಲಿ ಏಕಿದೆ? ಇಫ್ಕೋ ತಯಾರಿಸಲಿರುವ ಲಿಕ್ವಿಡ್‌ ನ್ಯಾನೊ ಡಿಎಪಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.  ನ್ಯಾನೊ ಯೂರಿಯಾವನ್ನು ಪರಿಚಯಿಸಿದ್ದ ಕೇಂದ್ರ ಸರಕಾರ, ಈಗ ನ್ಯಾನೊ ಲಿಕ್ವಿಡ್‌ ಡಿಎಪಿ (ಡೈ-ಅಮೋನಿಯಂ ಫಾಸ್ಪೇಟ್‌) ರಸಗೊಬ್ಬರವನ್ನು ರೈತರಿಗೆ ನೀಡಲು ಮುಂದಾಗಿದೆ.


ಮುಖ್ಯಾಂಶಗಳು

  • ನ್ಯಾನೊ ಯೂರಿಯಾವನ್ನು 2021ರಲ್ಲಿ ಸಹಕಾರ ಸಂಸ್ಥೆ ಇಫ್ಕೋ ಬಿಡುಗಡೆ ಮಾಡಿತ್ತು. ”ಕಳೆದ ವರ್ಷ ಬಿಡುಗಡೆಯಾಗಿದ್ದ ನ್ಯಾನೊ ಯೂರಿಯಾಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ”

ಉದ್ದೇಶ

  • ರಸಗೊಬ್ಬರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರೈತರಿಗೆ ತ್ವರಿತವಾಗಿ ಗೊಬ್ಬರ ಪೂರೈಸಲು, ಸರಕಾರಕ್ಕೆ ಸಬ್ಸಿಡಿ ಹೊರೆ ತಗ್ಗಿಸಲು ಇದು ನೆರವಾಗಲಿದೆ.
  • ಕೇಂದ್ರ ಸರಕಾರದ ಕ್ರಮದಿಂದ ರೈತರಿಗೆ ಅನುಕೂಲವಾಗಲಿದೆ. ದೇಶವನ್ನು ಸ್ವಾವಲಂಬನೆಯ ಆತ್ಮನಿರ್ಭರವಾಗಿ ರೂಪಿಸಲು ಸಹಾಯಕವಾಗಲಿದೆ”.

ಪ್ರಯೋಜನಗಳು

  • ದೇಶದಲ್ಲಿ ಯೂರಿಯಾ ನಂತರ ಹೆಚ್ಚು ಬಳಕೆಯಾಗುವ ರಸಗೊಬ್ಬರ ಎಂದರೆ ಡಿಎಪಿ. ನ್ಯಾನೊ ರಸಗೊಬ್ಬರಗಳಿಂದಾಗಿ ಭಾರತಕ್ಕೆ ವಿದೇಶಿ ವಿನಿಮಯವನ್ನು ಉಳಿಸಲು ಅನುಕೂಲವಾಗುತ್ತದೆ. ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸರಕಾರಕ್ಕೆ ಸಹಾಯ ಮಾಡಲಿದೆ.
  • ಶೇ.4ರಷ್ಟು ಸಾರಜನಕ: ಯೂರಿಯಾ ಗೊಬ್ಬರವು ಶೇ. 46 ಸಾರಜನಕವನ್ನು ಒಳಗೊಂಡಿರುತ್ತದೆ. ಆದರೆ ಬೆಳೆಯು ಕೇವಲ ಶೇ. 30-50 ಮಾತ್ರ ಬಳಸಿಕೊಳ್ಳುತ್ತದೆ. ಉಳಿದ ಯೂರಿಯಾ ಅಮೋನಿಯಾ ಅಥವಾ ನೈಟ್ರಸ್ ಆಕ್ಸೈಡ್ ಅಥವಾ ನೈಟ್ರೇಟ್‌ ರೂಪದಲ್ಲಿ ನಷ್ಟವಾಗುತ್ತದೆ. ನ್ಯಾನೋ ಯೂರಿಯಾ ಒಟ್ಟು ಶೇ.4 ಸಾರಜನಕವನ್ನು ಹೊಂದಿರುತ್ತದೆ. ಇದು ನೀರಿನಲ್ಲಿ ಸಮಾನವಾಗಿ ಹರಡುತ್ತದೆ. ನ್ಯಾನೋ ಯೂರಿಯಾದಲ್ಲಿ ಸಾರಜನಕವು ಸುಲಭವಾಗಿ ಲಭ್ಯವಿರುತ್ತದೆ. ಇದು ಬೆಳೆಯ ಪೋಷಕಾಂಶದ ಅವಶ್ಯಕತೆಯನ್ನು ಪರಿಣಾಮಕಾರಿಯಾಗಿ ಪೂರೈಸಲು ನೆರವಾಗುತ್ತದೆ.

ಇಫ್ಕೋ ಸಂಸ್ಥೆ ಆವಿಷ್ಕಾರ

  • ಗುಜರಾತಿನ ಕಲೋಲ್‌ನಲ್ಲಿರುವ ಇಫ್ಕೋ ಸಂಸ್ಥೆ ನ್ಯಾನೋ ಯೂರಿಯಾವನ್ನು ಆವಿಷ್ಕಾರ ಮಾಡಿದೆ. ಇದು ಸಾರಾಜನಕದ ಮೂಲವಾಗಿದ್ದು ಜೈವಿಕ ತಂತ್ರಜ್ಞಾನ ಸಂಶೋಧನ ಕೇಂದ್ರದಲ್ಲಿ ದೇಶಿಯ ಸ್ವತಂತ್ರ ಪೇಟೆಂಟ್‌ ಬಳಸಿ ಅಭಿವೃದ್ಧಿಗೊಳಿಸಲಾಗಿದೆ. ಎಫ್‌ಸಿಒ ಅನುಮೋದಿಸಿರುವ ವಿಶ್ವದ ಮೊದಲ ನ್ಯಾನೋ ಗೊಬ್ಬರ ಇದಾಗಿದೆ. ಬೆಳೆಗಳ ಸಮಗ್ರ ಬೆಳವಣಿಗೆಗೆ ಬೇಕಾದ ಸಾರಾಜನಕ ಪೋಷಕಾಂಶವನ್ನು ಇದು ಒದಗಿಸುತ್ತದೆ.

ಏನಿದು ನ್ಯಾನೋ ಯೂರಿಯಾ?

  • ನ್ಯಾನೋ ಯೂರಿಯಾ ದ್ರಾವಣ ರೂಪದ ಯೂರಿಯಾವಾಗಿದೆ. ಕೃಷಿಯಲ್ಲಿ ಸಸಿಗಳ ಪೋಷಣೆಗೆ ಅವಶ್ಯಕವಾದ ಪೋಷಕಾಂಶ ತಲುಪಿಸಲು ಈ ಮಾದರಿ ಯೂರಿಯಾ ಪರಿಚಯಿಸಿದೆ.

ಪರಿಸರ ಸ್ನೇಹಿ

  • ನ್ಯಾನೋ ಯೂರಿಯಾ ಪರಿಸರದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇದರ ಬಳಕೆಯು ಆರೋಗ್ಯಕರ ಪರಿಸರ, ಜಾಗತಿಕ ತಾಪಮಾನ, ಉತ್ತಮ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟದ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಯೂರಿಯದಂತೆ ಇದು ಮಣ್ಣಿನಲ್ಲಿ ಉಳಿಯದೆ ಸಂಪೂರ್ಣವಾಗಿ ಬಳಕೆಯಾಗುತ್ತದೆ.

ಕೀಟಾನಾಶಕಗಳ ಜತೆಗೂ ಬಳಕೆ

  • ನ್ಯಾನೋ ಯೂರಿಯಾ ಕೀಟನಾಶಕಗಳು ಮತ್ತು ಶಿಲೀಂದ್ರನಾಶಕಗಳ ಜತೆಗೆ ಸುಲಭವಾಗಿ ಮಿಶ್ರಣ ಮಾಡಿ ಸಿಂಪಡನೆ ಮಾಡಬಹುದು.