Published on: January 31, 2023

ಪಕ್ಷಿ ಸಮೀಕ್ಷೆ

ಪಕ್ಷಿ ಸಮೀಕ್ಷೆ


ಸುದ್ದಿಯಲ್ಲಿ ಏಕಿದೆ? ಅರಣ್ಯ ಇಲಾಖೆಯು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕು ದಿನಗಳ ಪಕ್ಷಿ ಸಮೀಕ್ಷೆ ನಡೆಯಿತು.


ಮುಖ್ಯಾಂಶಗಳು

  • ಜೀವ ವೈವಿಧ್ಯತೆಯಲ್ಲಿ ಅಮೆಜಾನ್ ಅರಣ್ಯ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವುದು ಪಶ್ಚಿಮ ಘಟ್ಟ. ಬಿಆರ್ಟಿ ಅರಣ್ಯವು ಪಶ್ಚಿಮ ಘಟ್ಟದ ವಿಸ್ತರಿತ ಪ್ರದೇಶ.
  • 2012 ರಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು. ಈ ಬಾರಿ ಸ್ವಯಂ ಸೇವಕರು 274 ಪಕ್ಷಿಗಳನ್ನು ಗುರುತಿಸಿದ್ದಾರೆ’
  • ‘1939ರಲ್ಲಿ ಹಕ್ಕಿಗಳ ತಜ್ಞ ಸಲೀಂ ಅಲಿ ಅವರು ಬಿಆರ್ಟಿ ಅರಣ್ಯದಲ್ಲಿ ಸಮೀಕ್ಷೆ ನಡೆಸಿ 139 ಪಕ್ಷಿಗಳನ್ನು ಗುರುತಿಸಿದ್ದರು.
  • 2012ರಲ್ಲಿ ವೈಜ್ಞಾನಿಕ ಪಕ್ಷಿ ಸಮೀಕ್ಷೆ ನಡೆದಿತ್ತು. ಹಕ್ಕಿ ಸಮೀಕ್ಷೆ ನಡೆದಿತ್ತು. 2021ರಲ್ಲಿ ಹಕ್ಕಿ ಹಬ್ಬವನ್ನೂ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಹಕ್ಕಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು’.
  • ಈ ಕಾಡಿನಲ್ಲಿ ದಿ ಗ್ರೇ ಟ್ ಇಂಡಿಯನ್ ಹಾರ್ನ್‌ಬಿಲ್ ಕಂಡು ಬಂದಿತ್ತು. ಇದಲ್ಲದೆ ಬಹಳ ಅಪರೂಪದ ಕಪ್ಪು ಹದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಪಟ್ಟೆ ತಲೆ ಹೆಬ್ಬಾತು ಕೂಡ ಕಂಡು ಬಂದಿದೆ

ಸಮೀಕ್ಷೆಗೆ ಸಹಯೋಗ :ಇಕೊ ವಾಲ್ಯುಂಟಿಯರ್ಸ್‌ ಗ್ರೂಪ್ ಆಫ್ ಇಂಡಿಯಾದ ಸಹಕಾರದೊಂದಿಗೆ ಈ ಸಮೀಕ್ಷೆ ನಡೆಸಲಾಗಿದೆ.