Published on: June 9, 2022

ಪರಿಸರ ಕಾರ್ಯದಕ್ಷತೆ ಸೂಚ್ಯಂಕ

ಪರಿಸರ ಕಾರ್ಯದಕ್ಷತೆ ಸೂಚ್ಯಂಕ

ಸುದ್ಧಿಯಲ್ಲಿಏಕಿದೆ?

ಈ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ (ಇಪಿಐ) ಭಾರತವು ಅತ್ಯಂತ ಕಡಿಮೆ ಅಂಕಗಳನ್ನು ಪಡೆದು, ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನ ಸಂಸ್ಥೆಗಳು ಹೇಳಿದೆ. ಅತಿಹೆಚ್ಚು ಅಂಕ ಪಡೆದಿರುವ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.

ಮುಖ್ಯಾಂಶಗಳು

  • ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರವು ನಡೆಸಿದ ಅಧ್ಯಯನದ ಆಧಾರದಲ್ಲಿ ಈ ಸೂಚ್ಯಂಕ ನೀಡಲಾಗಿದೆ.
  • ಒಟ್ಟು 180 ದೇಶಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಪ್ರತಿ ದೇಶಗಳ ಸುಸ್ಥಿರ ಅಭಿವೃದ್ಧಿ ಮಾದರಿಗಳು ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ
  • “ಒಟ್ಟು ಅಂಕಗಳಲ್ಲಿ 18.9 ಅಂಕಗಳನ್ನು ಪಡೆದ ಭಾರತವು 180ನೇ ಸ್ಥಾನದಲ್ಲಿದೆ. ‘ಭಾರತವು ಮಾಲಿನ್ಯ ನಿಯಂತ್ರಣಕ್ಕಿಂತ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹೀಗಾಗಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ” ಎಂದು ಸೂಚ್ಯಂಕ ವರದಿಯಲ್ಲಿ ವಿವರಿಸಲಾಗಿದೆ.
  • 1 ಅಂಕ ಪಡೆದಿರುವ ವಿಯೆಟ್ನಾಂ, 23.1 ಅಂಕ ಪಡೆದಿರುವ ಬಾಂಗ್ಲಾದೇಶ ಮತ್ತು 24.6 ಅಂಕ ಪಡೆದಿರುವ ಪಾಕಿಸ್ತಾನವು ಕ್ರಮವಾಗಿ 179, 178 ಮತ್ತು 177ನೇ ಸ್ಥಾನ ಪಡೆದಿವೆ. 28.4 ಅಂಕ ಪಡೆದಿರುವ ಚೀನಾ 161ನೇ ಸ್ಥಾನದಲ್ಲಿದೆ. ರಷ್ಯಾ 112ನೇ ಸ್ಥಾನದಲ್ಲಿದ್ದರೆ, ಅಮೆರಿಕ 20ನೇ ಸ್ಥಾನದಲ್ಲಿದೆ.
  • ಕೊಲಂಬಿಯಾ ವಿವಿಯ ಅಂತಾರಾಷ್ಟ್ರೀಯ ಭೂ ವಿಜ್ಞಾನ ಮಾಹಿತಿ ಜಾಲದ ಕೇಂದ್ರ ಹಾಗೂ ಯೇಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಲಾ ಮತ್ತು ಪಾಲಿಸಿ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಕೆಳ ಶ್ರೇಣಿಯನ್ನು ನೀಡಿತ್ತು.
  • 11 ವಿಭಾಗಗಳಲ್ಲಿ 40 ಕಾರ್ಯಕ್ಷಮತೆ ಸೂಚಕಗಳನ್ನು ಬಳಕೆ ಮಾಡಲಾಗಿದ್ದು, ಹವಾಮಾನ ಬದಲಾವಣೆ ಕಾರ್ಯಕ್ಷಮತೆ, ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶಗಳಿಗೆ ಶ್ರೇಣಿಯನ್ನು ನೀಡಲಾಗಿದೆ.

ಹವಾಮಾನ ನೀತಿ ಉದ್ದೇಶದಲ್ಲಿ 2050 ರಲ್ಲಿ GHG ಹೊರಸೂಸುವಿಕೆಯ ಮಟ್ಟವನ್ನು ಪ್ರಕ್ಷೇಪಿಸಲಾಗಿರುವುದು ಹೊಸ ಸೂಚಕವಾಗಿದೆ. ಆ ನಿರ್ದಿಷ್ಟ ರಾಷ್ಟ್ರಗಳ ದೀರ್ಘಾವಧಿ ಸಮಯ, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಬಳಕೆಯ ಪ್ರಮಾಣ, ಹೆಚ್ಚುವರಿ ಇಂಗಾಲದ ಸಿಂಕ್‌, ಶಕ್ತಿ ದಕ್ಷತೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುವುದನ್ನು ಬಿಟ್ಟು ಕಳೆದ 10 ವರ್ಷಗಳ ಹೊರಸೂಸುವಿಕೆಯಲ್ಲಿನ ಬದಲಾವಣೆಯ ಸರಾಸರಿ ದರವನ್ನು ಆಧರಿಸಿ ಗಣಿಸಲಾಗಿದೆ.