Published on: December 30, 2022

ಪಿಂಚಣಿ ವ್ಯಾಪ್ತಿಗೆ ‘ಗಿಗ್‌ ಕೆಲಸಗಾರರು’

ಪಿಂಚಣಿ ವ್ಯಾಪ್ತಿಗೆ ‘ಗಿಗ್‌ ಕೆಲಸಗಾರರು’

ಸುದ್ದಿಯಲ್ಲಿ ಏಕಿದೆ? ಗಿಗ್‌ ಕೆಲಸಗಾರರ ವ್ಯಾಪ್ತಿಗೆ ಬರುವ ಡೆಲಿವರಿ ಬಾಯ್‌ಗಳು, ಕ್ಯಾಬ್‌ ಓಡಿಸುವ ಚಾಲಕರು, ಗುತ್ತಿಗೆ ಆಧಾರದ ಮೇಲೆ ಅಥವಾ ಬೇಡಿಕೆ ಆಧಾರದ ಮೇಲೆ ಕೆಲಸಕ್ಕೆ ಸೇರಿದವರನ್ನು ಪಿಂಚಣಿ ವ್ಯಾಪ್ತಿಗೆ ತರಲು ಭಾರತೀಯ ಪಿಂಚಣಿ ನಿಧಿ ನಿರ್ವಾಹಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

ಮುಖ್ಯಾಂಶಗಳು

  • ಫುಡ್‌ ಮತ್ತು ಕ್ಯಾಬ್‌ ಅಗ್ರಿಗೇಟರ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ವ್ಯಾಪ್ತಿಗೆ ತರಬೇಕು ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರತೀಮ್‌ ಬಂದ್ಯೋಪಾಧ್ಯಾಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
  • ಬ್ರಿಟನ್‌ ಮಾದರಿ: ಬ್ರಿಟನ್‌ನಲ್ಲಿರುವಂಥ ಪಿಂಚಣಿ ಯೋಜನೆಯನ್ನು ಸರಕಾರ ಜಾರಿ ಮಾಡಬೇಕು. ಬ್ರಿಟನ್‌ನಲ್ಲಿ ಯಾವುದಾದರೂ ಕಂಪನಿಗೆ ಒಬ್ಬನೇ ಉದ್ಯೋಗಿಯಿದ್ದರೂ ಅವನಿಗೆ ಪಿಂಚಣಿ ಯೋಜನೆ ಸಿಗುತ್ತದೆ.
  • ಪ್ರಾಧಿಕಾರದ ಅಭಿಪ್ರಾಯ : ಭಾರತದಲ್ಲಿ ಇಂಥ ಪದ್ಧತಿ ಜಾರಿಗೆ ಬಂದರೆ, ದೇಶದ ಶೇ. 90ರಷ್ಟು ದುಡಿಮೆಯ ವರ್ಗಕ್ಕೆ ಪಿಂಚಣಿ ಸುರಕ್ಷೆ ಸಿಗುತ್ತದೆ ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.

ಕಾರಣ

  • ಗಿಗ್‌ ಕೆಲಸಗಾರರತ್ತ ಕಂಪನಿಗಳ ನಿರ್ಲಕ್ಷ್ಯ
  • 12 ಡಿಜಿಟಲ್‌ ವೇದಿಕೆಗಳಲ್ಲಿ ಕೆಲಸದ ವಾತಾವರಣ ಹೇಗಿದೆ ಎನ್ನುವ ಬಗೆಗೆ ಫೇರ್‌ವರ್ಕ್ ಇಂಡಿಯಾ ಸಂಸ್ಥೆಯು ಆಕ್ಸ್‌ಫರ್ಡ್‌ ವಿವಿ ಸಹಯೋಗದಲ್ಲಿ ಸಮೀಕ್ಷೆ ನಡೆಸಿದೆ.
  • ನ್ಯಾಯವಾದ ವೇತನ, ಕೆಲಸದ ವಾತಾವರಣ ಮತ್ತಿತರ ವಿಷಯಗಳಲ್ಲಿ ಭಾರತದ ಬಹುತೇಕ ಕಂಪನಿಗಳು ಕಡಿಮೆ ಅಂಕ ಗಳಿಸಿವೆ. ಕಾರ್ಮಿಕ ಸ್ನೇಹಿ ನೀತಿಗಳನ್ನು ರೂಪಿಸುವಲ್ಲಿ ಬಹುತೇಕ ಕಂಪನಿಗಳು ಸೋತಿವೆ. ಸಮೀಕ್ಷೆಯಲ್ಲಿದ್ದ 12 ಕಂಪನಿಗಳಲ್ಲಿ ಯಾವ ಕಂಪನಿಯೂ ಹೆಚ್ಚಿನ ಅಂಕವನ್ನು ಪಡೆದಿಲ್ಲ. ಓಲಾ, ಉಬರ್‌, ಡಂಜೊ ಕಂಪನಿಗಳು 10ಕ್ಕೆ ಶೂನ್ಯ ರೇಟಿಂಗ್‌ ಅನ್ನು ಪಡೆದಿವೆ. ಅರ್ಬನ್‌ ಕಂಪನಿಯು ಉತ್ತಮ ರೇಟಿಂಗ್‌ (10ಕ್ಕೆ 7 ಅಂಕ) ಪಡೆದಿದೆ. ಬಿಗ್‌ ಬಾಸ್ಕೆಟ್‌ 6, ಫ್ಲಿಪ್‌ಕಾರ್ಟ್‌ 5, ಸ್ವಿಗ್ಗಿ 5, ಜೊಮ್ಯಾಟೊ 4 ಅಂಕಗಳನ್ನು ಪಡೆದಿದೆ.

ಗಿಗ್‌ ಕೆಲಸಗಾರ

  • ಸ್ವಿಗ್ಗಿ, ಜೊಮ್ಯಾಟೊದಂಥ ಕಂಪನಿಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್‌ಗಳು, ಕ್ಯಾಬ್‌ ಓಡಿಸುವ ಚಾಲಕರು, ಗುತ್ತಿಗೆ ಆಧಾರದ ಮೇಲೆ ಅಥವಾ ಬೇಡಿಕೆ ಆಧಾರದ ಮೇಲೆ ಕೆಲಸಕ್ಕೆ ಸೇರಿದವರು, ತಾತ್ಕಾಲಿಕ ಕೆಲಸಗಾರರು, ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುವ ಜನರನ್ನು ಗಿಗ್‌ ವರ್ಕರ್‌ ಎನ್ನಲಾಗುತ್ತದೆ.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ

  • ಭಾರತದಲ್ಲಿ ಪಿಂಚಣಿಯ ಒಟ್ಟಾರೆ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿರುವ ನಿಯಂತ್ರಕ ಸಂಸ್ಥೆಯಾಗಿದೆ.
  • ಸ್ಥಾಪನೆ: 23 ಆಗಸ್ಟ್ 2003
  • ಪ್ರಧಾನ ಕಛೇರಿ: ನವದೆಹಲಿ