Published on: February 3, 2023

ಪಿಎಂ ಪ್ರಣಾಮ್’

ಪಿಎಂ ಪ್ರಣಾಮ್’


ಸುದ್ದಿಯಲ್ಲಿ ಏಕಿದೆ? ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು ಪಿಎಂ ಪ್ರಣಾಮ್ ಯೋಜನೆಯನ್ನು ಪ್ರಕಟಿಸಲಾಗಿದೆ.


 ಮುಖ್ಯಾಂಶಗಳು

  • ಇದರಡಿ ಭೂಮಿಯ ಪುನಃಶ್ಚೇತನ ಜಾಗೃತಿ ಪೋಷಣೆ ಮತ್ತು ಸುಧಾರಣೆ ಬಗ್ಗೆ ಗಮನ ಹರಿಸಲಾಗುವುದು.
  • ಈ ಯೋಜನೆಯ ಹೆಸರೇ ‘ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಅಲ್ಟರ್ನೇಟ್ ನ್ಯೂಟ್ರಿಯೆಂಟ್ಸ್ ಫಾರ್ ಅಗ್ರಿಕಲ್ಚರ್ ಮ್ಯಾನೇಜ್ಮೆಂಟ್ ಅಥವಾ ಪಿಎಂ ಪ್ರಣಾಮ್’ (ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ).

ಏನಿದು ಯೋಜನೆ?

  • ನಿರ್ದಿಷ್ಟ ವರ್ಷದಲ್ಲಿ ಕಡಿಮೆ ಪ್ರಮಾಣದ ರಾಸಾಯನಿಕ ರಸಗೊಬ್ಬರವನ್ನು ಬಳಸುವ ರಾಜ್ಯಗಳನ್ನು ಪ್ರೋತ್ಸಾಹಿಸುವ ಯೋಜನೆ.

ಉದ್ದೇಶ

  • ಇದನ್ನು ರಾಜ್ಯವು ಕಳೆದ ಮೂರು ವರ್ಷಗಳಲ್ಲಿ ಬಳಸಿದ ರಸಗೊಬ್ಬರಗಳ ಸರಾಸರಿ ಲೆಕ್ಕಾಚಾರದ ಮೂಲಕ ಅಳೆಯಲಾಗುತ್ತದೆ ಹೀಗೆ ಮಾಡುವ ಮೂಲಕ ರಾಸಾಯನಿಕ ರಸಗೊಬ್ಬರಗಳ ಸಬ್ಸಿಡಿ ಹೊರೆಯನ್ನು ತಗ್ಗಿಸುವುದೂ ಯೋಜನೆಯ ಉದ್ದೇ ಶವಾಗಿದೆ.
  • 2022– 2023ನೇ ಸಾಲಿನಲ್ಲಿ ರಾಸಾಯನಿಕ ರಸಗೊಬ್ಬರಗಳ ಸಬ್ಸಿಡಿ ರೂ. 2.25 ಲಕ್ಷ ಕೋಟಿಗೆ ಹೆಚ್ಚಾಗಲಿದೆ. ಇದು ಕಳೆದ ಸಾಲಿನ ರೂ. 1.62 ಲಕ್ಷ ಕೋಟಿಗಿಂತ ಶೇ 39ರಷ್ಟು ಹೆಚ್ಚು ಎಂದು ವರದಿ ಉಲ್ಲೇ ಖಿಸಿದೆ.

ಯೋಜನೆಯ ಅವಶ್ಯಕತೆ

  • ದೇಶದ ಪ್ರಮುಖ ನಾಲ್ಕು ರಸಗೊಬ್ಬರಗಳಾದ ಯೂರಿಯ, ಡಿಎಪಿ (ಡಿ ಅಮೋನಿಯಂ ಪಾಸ್ಫೇ ಟ್), ಎಂಒಪಿ (ಮ್ಯೂರಿಯೇಟ್ ಆಫ್ ಪೊಟ್ಯಾಷ್) ಎನ್ಪಿಕೆಎಸ್ (ನೈಟ್ರೋ ಜನ್, ಪಾಸ್ಫರಸ್, ಪೊಟೇಶಿಯಂ ಮತ್ತು ಸಲ್ಫರ್) ಒಟ್ಟು ಅವಶ್ಯಕತೆ 2017–18 ಮತ್ತು 2021–22ರ ನಡುವಣ ಅವಧಿಯಲ್ಲಿ ಶೇ 21ರಷ್ಟು ಹೆಚ್ಚಾಗಿದೆ. ಇದು ರಾಸಾಯನಿಕ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವಂತೆ ಮಾಡಿದೆ.
  • 2021–22ರ ಕೇಂದ್ರ ಬಜೆಟ್ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ ರೂ. 79,530 ಕೋಟಿ ನಿಗದಿಪಡಿಸಲಾಗಿತ್ತು. ಕೊನೆಯಲ್ಲಿ ಸಬ್ಸಿಡಿ ಮೊತ್ತ ರೂ. 1.62 ಲಕ್ಷ ಕೋಟಿ ತಲುಪಿತ್ತು. ಈ ಮೂಲಕ ಬೊಕ್ಕಸಕ್ಕೆ ಆಗುವ ಹೊರೆಯನ್ನು ತಪ್ಪಿಸುವುದು ಸರ್ಕಾರದ ಉದ್ದೇ ಶ.