Published on: October 9, 2021

ಪಿಎಂ ಮಿತ್ರಾ ಯೋಜನೆ

ಪಿಎಂ ಮಿತ್ರಾ ಯೋಜನೆ

ಸುದ್ಧಿಯಲ್ಲಿ ಏಕಿದೆ? ಜವಳಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತೊಂದು ಯೋಜನೆಯಲ್ಲಿ, ಕೇಂದ್ರ ಸಚಿವ ಸಂಪುಟ 7 ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪುಗಳ ಒಟ್ಟು 4,445 ಕೋಟಿ ರೂಪಾಯಿ ವೆಚ್ಚದ ಪಿಎಂ ಮಿತ್ರಾ ಟೆಕ್ಸ್ ಟೈಲ್ ಪಾರ್ಕ್ ಯೋಜನೆಗೆ ಅನುಮೋದನೆ ನೀಡಿದೆ.

ಯೋಜನೆ ಬಗ್ಗೆ

  • ಪ್ರಸ್ತಾವಿತ ಮೆಗಾ ಪಾರ್ಕ್‌ಗಳನ್ನು ವಿವಿಧ ರಾಜ್ಯಗಳಲ್ಲಿರುವ ಗ್ರೀನ್‌ಫೀಲ್ಡ್ ಮತ್ತು ಬ್ರೌನ್ ಫೀಲ್ಡ್ ತಾಣಗಳಲ್ಲಿ ಸ್ಥಾಪಿಸಲಾಗುವುದು.
  • ಕರ್ನಾಟಕ, ತಮಿಳುನಾಡು, ಪಂಜಾಬ್, ಒಡಿಶಾ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಅಸ್ಸಾಂ, ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ಹಲವು ರಾಜ್ಯಗಳು ಈ ಯೋಜನೆಗೆ ಆಸಕ್ತಿ ವ್ಯಕ್ತಪಡಿಸಿವೆ.
  • ವಸ್ತುನಿಷ್ಠ ಮಾನದಂಡಗಳ ಆಧಾರದಲ್ಲಿ ಸ್ಥಳದ ಆಯ್ಕೆ ನಡೆಯಲಿದೆ. ಪಿಎಂ ಮಿತ್ರಾ ಒಂದೇ ಸ್ಥಳದಲ್ಲಿ ಜವಳಿ ತಯಾರಿಕೆ, ನೇಯ್ಗೆ, ಸಂಸ್ಕರಣೆ, ಡೈಯಿಂಗ್ ಮತ್ತು ಮುದ್ರಣದಿಂದ ಒಂದು ಜವಳಿ ಮೌಲ್ಯ ಸರಪಳಿಯನ್ನು ರಚಿಸಲು ಒಂದು ಅವಕಾಶವನ್ನು ನೀಡುತ್ತದೆ
  • ಪ್ರಸ್ತಾವಿತ ಯೋಜನೆಯು ಪ್ರತಿ ಉದ್ಯಾನವನಕ್ಕೆ 1 ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜವಳಿ ಕ್ಷೇತ್ರವನ್ನು ಬೆಂಬಲಿಸಲು ಸರ್ಕಾರವು ಈಗಾಗಲೇ ಆರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಪಿಎಂ ಮಿತ್ರಾ ಏಳನೆಯದು, ಇದು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ
  • ಗ್ರೀನ್‌ಫೀಲ್ಡ್ ಸೈಟ್‌ಗಳಲ್ಲಿ ಪಿಎಂ-ಮಿತ್ರ ಸಾಮಾನ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಕೇಂದ್ರ ಸರ್ಕಾರವು ರೂ. 500 ಕೋಟಿಗಳಷ್ಟು ಬಂಡವಾಳದ ಸಹಾಯವನ್ನು ಅಥವಾ ಯೋಜನಾ ವೆಚ್ಚದ ಶೇಕಡಾ 30 ರಷ್ಟನ್ನು ನೀಡುತ್ತದೆ.
  • ಬ್ರೌನ್‌ಫೀಲ್ಡ್ ಸೈಟ್‌ಗಳಿಗೆ ಬೆಂಬಲ ಮೊತ್ತವು ವೆಚ್ಚದ 30 ಪ್ರತಿಶತ ಮತ್ತು ಮೌಲ್ಯಮಾಪನದ ನಂತರ ರೂ 200 ಕೋಟಿಗೆ ಸೀಮಿತವಾಗಿದೆ. ಈ ಯೋಜನೆಯನ್ನು ಖಾಸಗಿ ವಲಯಕ್ಕೆ ಆಕರ್ಷಕವಾಗಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ, ಜವಳಿ ಉತ್ಪಾದನಾ ಘಟಕಗಳ ಆರಂಭಿಕ ಸ್ಥಾಪನೆಗೆ ಸರ್ಕಾರ ಪ್ರತಿ ಉದ್ಯಾನವನಕ್ಕೆ 300 ಕೋಟಿ ರೂ. ಅಥವಾ ಪಿಎಂ-ಮಿತ್ರದಲ್ಲಿ ಹೊಸದಾಗಿ ಸ್ಥಾಪಿಸಲಾದ ಘಟಕದ ವಹಿವಾಟಿನ ಶೇ.3ರ ವರೆಗೆ ಇದನ್ನು ಪಾವತಿಸಲಾಗುವುದು
  • ಕೇವಲ ಉತ್ಪಾದನೆ ಅಷ್ಟೇ ಅಲ್ಲದೆ ಇವುಗಳು ವಿನ್ಯಾಸ ಕೇಂದ್ರಗಳು ಮತ್ತು ಪರೀಕ್ಷಾ ಕೇಂದ್ರಗಳನ್ನು ಸಹ ಹೊಂದಿರುತ್ತವೆ. ಇವುಗಳಲ್ಲಿ ಕಾರ್ಮಿಕರ ಆಸ್ಪತ್ರೆಗಳು ಮತ್ತು ವಸತಿ, ಲಾಜಿಸ್ಟಿಕ್ಸ್ ಪಾರ್ಕ್, ಗೋದಾಮು, ವೈದ್ಯಕೀಯ, ತರಬೇತಿ ಮತ್ತು ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳು ಕೂಡ ಇರುತ್ತವೆ. ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಜವಳಿ ಪಾರ್ಕ್ ನಿವ್ವಳ ಉತ್ಪಾದನಾ ಚಟುವಟಿಕೆಗಾಗಿ ಶೇ .50 ಪ್ರದೇಶ, ಉಪಯುಕ್ತತೆಗಳಿಗೆ ಶೇ .20 ಪ್ರದೇಶ ಮತ್ತು ವಾಣಿಜ್ಯ ಅಭಿವೃದ್ಧಿಗೆ ಶೇ .10 ಪ್ರದೇಶವನ್ನು ಅಭಿವೃದ್ಧಿಪಡಿಸುತ್ತದೆ.