Published on: March 18, 2023

ಪಿಎಂ ಮಿತ್ರ

ಪಿಎಂ ಮಿತ್ರ

ಸುದ್ದಿಯಲ್ಲಿ ಏಕಿದೆ? ಜವಳಿ ಕ್ಷೇತ್ರದ ಬೆಳವಣಿಗೆಗೆ ಇರುವ ಅವಕಾಶ ಬಳಸಿಕೊಳ್ಳುವ ಉದ್ದೇಶದಿಂದ ದೇಶದ ಏಳು ಕಡೆಗಳಲ್ಲಿ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಆಂಡ್ ಅಪೇರಲ್ (ಪಿಎಂ ಮಿತ್ರ) ಸ್ಥಾಪಿಸಲು ಉದ್ದೇಶಿಸಿದ್ದು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಯೋಜನೆಯನ್ನು ಅನುಷ್ಠಾನ ಮಾಡಲಿದೆ.

ಮುಖ್ಯಾಂಶಗಳು

  • ಕಲಬುರಗಿಯಲ್ಲಿಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಕಲಬುರಗಿಯಲ್ಲಿಈ ಪಾರ್ಕ್ ಸ್ಥಾಪನೆಗೆ ಉದ್ದೇಶಿಸಲಾಗಿದೆ.
  • ಈ ಯೋಜನೆ ಬಳಸಿಕೊಳ್ಳಲು 13 ರಾಜ್ಯಗಳಿಂದ 18 ಪ್ರಸ್ತಾವನೆಗಳು ಕೇಂದ್ರಕ್ಕೆ ಸಲ್ಲಿಕೆಯಾಗಿದ್ದವು. ಈ ಪೈಕಿ 7 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.

ಯಾವ ರಾಜ್ಯಗಳು:

  • ಕರ್ನಾಟಕ, ತಮಿಳುನಾಡು, ತೆಲಂಗಾಣ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರವನ್ನು ಈ ಯೋಜನೆಗೆ ಗುರುತಿಸಲಾಗಿದೆ.

ಯೋಜನೆಯಲ್ಲಿರುವ ಅಂಶಗಳು

  • ಈ ಪಾರ್ಕ್ಗಳು ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಹೊಂದಿರುತ್ತವೆ ಮತ್ತು ವಿದೇಶಿ ನೇರ ಹೂಡಿಕೆ ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವಂತೆಯೇ ರೂಪುಗೊ ಳ್ಳುತ್ತವೆ.
  • ಈ ವಲಯ ನಾವೀನ್ಯತೆ ಮತ್ತುಉದ್ಯೋಗ ಸೃಷ್ಟಿಯನ್ನು ಕೂಡ ಉತ್ತೇಜಿಸುವಂತಿರಲಿದೆ.
  • ಮೆಗಾ ಜವಳಿ ಪಾರ್ಕ್ ಅತ್ಯುತ್ತಮ ಮೂಲಸೌಕರ್ಯ, ಪ್ಲಗ್ ಅಂಡ್ ಪ್ಲೇ ಸೌಲಭ್ಯ ಮತ್ತುಉದ್ಯಮಕ್ಕೆ ಪೂರಕ ತರಬೇತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ನೀಡುತ್ತವೆ. ಈ ಮೂಲಕ ಒಂದು ಅನನ್ಯ ಮಾದರಿಯನ್ನು ಕಟ್ಟಿಕೊಡಲಿದೆ.
  • ಶೀಘ್ರವಾಗಿ ಘಟಕ ಅನುಷ್ಠಾನಕ್ಕೆ ಪ್ರೋತ್ಸಾಹಕಗಳನ್ನೂ ನೀಡಲಾಗುತ್ತದೆ. ಇತರೆ ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶ ಇರಲಿದೆ.
  • 20 ಲಕ್ಷ ಉದ್ಯೋಗಾವಕಾಶ
  • ವಿಶ್ವದರ್ಜೆಯ ಮೂಲ ಸೌಕರ್ಯ
  • ಐದು ವರ್ಷ ಕಡಿಮೆ ದರದಲ್ಲಿವಿದ್ಯುತ್
  • ಕೇಂದ್ರದಿಂದ 500 ಕೋಟಿ ರೂ. ಘಟಕಗಳಿಗೆ 300 ಕೋಟಿ ರೂ.
  • ಇನ್ಸೆಂಟೀವ್ ತೊಂದರೆ ನಿವಾರಿಸಲು ಪ್ರತಿ ಜವಳಿ ಪಾರ್ಕ್ ಅಭಿವೃದ್ಧಿಪಡಿಸಲು 500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿದೆ.
  • ಅಲ್ಲದೆ ಪಾರ್ಕ್ನಲ್ಲಿಹೂಡಿಕೆ ಮಾಡುವ ಪ್ರತಿ ಘಟಕಗಳಿಗೆ ಪ್ರೋತ್ಸಾಹ ನೀಡಲು 300 ಕೋಟಿ ರೂ. ಒದಗಿಸಲಿದೆ.
  • ಬಂಡವಾಳ : 70 ಸಾವಿರ ಕೋಟಿ ಬಂಡವಾಳ ಹೂಡಿಕೆ
  • ಮೇಲ್ವಿಚಾರಣೆ: ಜವಳಿ ಸಚಿವಾಲಯ ಈ ಯೋಜನೆಯ ಕಾರ್ಯಗತಗೊಳಿಸುವ ಮೇಲ್ವಿಚಾರಣೆ ಮಾಡಲಿದೆ. ಪ್ರತಿ ಜವಳಿ ಪಾರ್ಕ್ಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ವಾಹಕವನ್ನು (ಎಸ್ಪಿವಿ) ರಚಿಸಲಾಗುವುದು. ಅದು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲಿದೆ.

ಪರಿಕಲ್ಪನೆ :  ‘5ಎಫ್’ ಕಲ್ಪನೆಯಲ್ಲಿಇವು ಅನುಷ್ಠಾನಗೊ ಳ್ಳುತ್ತಿದೆ (ಫಾಮ್ರ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಷನ್ ಟು ಫಾರಿನ್) ಅಂದರೆ, ಕೃಷಿ ಭೂಮಿಯಿಂದ ನೂಲಿಗೆ ರೂಪಾಂತರ, ಬಳಿಕ ಕಾರ್ಖಾನೆಯಲ್ಲಿಉಡುಪು ತಯಾರಾಗಿ ಫ್ಯಾಷನ್ ಮೂಲಕ ಜನಮನ್ನಣೆಗೆ ಪಾತ್ರವಾಗಿ ವಿದೇಶಕ್ಕೂ ರಫ್ತಾಗಬೇಕೆಂಬ ದೂರದೃಷ್ಟಿ ಈ ಯೋಜನೆಯದ್ದಾಗಿದೆ.

 ಉದ್ದೇಶ

  • ಈ ಮೂಲಕ ಜವಳಿ ಉತ್ಪಾದನೆ ಹಾಗೂ ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿಯನ್ನು ಸಾಕಾರಗೊಳಿಸುವಲ್ಲಿಈ ಪಾರ್ಕ್ಗಳು ಪ್ರಮುಖ ಹೆಜ್ಜೆಯಾಗಿವೆ. ಈ ಪಾರ್ಕ್ಗಳು ಜವಳಿ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯನ್ನು ಸಾಧಿಸಲು ಕೂಡ ಸಹಾಯಕವಾಗಲಿವೆ. ಅಲ್ಲದೆ, ಭಾರತದಲ್ಲಿ ಉತ್ಪಾದನೆಗೆ ಜಾಗತಿಕ ಉತ್ಪಾದಕರನ್ನೂ ಸಹ ಆಕರ್ಷಿಸಬಹುದು.

ರಾಜ್ಯಗಳ ಆಯ್ಕೆಗೆ ಪರಿಗಣಿಸಿರುವ ಮಾನದಂಡಗಳು 

  • ಸಾರಿಗೆ ಸಂಪರ್ಕ, ಜವಳಿ ಉದ್ಯಮಕ್ಕೆ ಪ್ರಸ್ತುತ ಅಲ್ಲಿರುವ ಪೂರಕ ಪರಿಸರ, ಜವಳಿ/ಉದ್ಯಮ ನೀತಿ, ಮೂಲಸೌಕರ್ಯ, ಅತ್ಯಗತ್ಯ ಉಪಯುಕ್ತಸೇವೆಗಳು ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಸ್ತುನಿಷ್ಠಮಾನದಂಡಗಳ ಆಧಾರದ ಮೇಲೆ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಬಹುಮಾದರಿ ಸಂಪರ್ಕ ಜಾಲವೂ ಆದ್ಯತೆ ಪಡೆದಿದೆ.

ಪ್ರಯೋಜನಗಳು

  • ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಜವಳಿ ವಲಯವನ್ನು ಉತ್ತೇಜಿಸುತ್ತದೆ. ಹೂಡಿಕೆ ಆಕರ್ಷಿಸಿ 20 ಲಕ್ಷ ಉದ್ಯೋ ಗಾವಕಾಶಗಳು ಸೃಷ್ಟಿಸುವ ನಿರೀಕ್ಷೆ ಇದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ಗೆ ಉತ್ತಮ ಉದಾಹರಣೆ. ಇದು ಸ್ಥಳೀಯ ಪೂರಕ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ.
  • ರಾಜ್ಯ ಸರ್ಕಾರದ ಜವಾಬ್ದಾರಿ: ರಾಜ್ಯ ಸರ್ಕಾರಗಳು ಈ ಪಾರ್ಕ್ ಸ್ಥಾಪನೆಗೆ ಒಂದು ಸಾವಿರ ಎಕರೆ ಭೂಮಿಯನ್ನು ನೀಡಬೇಕಾಗುತ್ತದೆ. ಜತೆಗೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ, ನೀರಿನ ಲಭ್ಯತೆ ಮತ್ತುತ್ಯಾಜ್ಯ ನೀರು ವಿಲೇವಾರಿ ವ್ಯವಸ್ಥೆ, ಪರಿಣಾಮಕಾರಿ ಏಕ ಗವಾಕ್ಷಿ ಅನುಮತಿ ಸೇವೆ ಮತ್ತು ಅನುಕೂಲಕರವಾದ ಕೈಗಾರಿಕಾ, ಜವಳಿ ನೀತಿ ರೂಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.