Published on: April 3, 2023
ಪಿಎಂ ಸ್ವನಿಧಿ ಯೋಜನೆ ಯಲ್ಲಿ ಕರ್ನಾಟಕ
ಪಿಎಂ ಸ್ವನಿಧಿ ಯೋಜನೆ ಯಲ್ಲಿ ಕರ್ನಾಟಕ
ಸುದ್ದಿಯಲ್ಲಿ ಏಕಿದೆ? ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ, ಆತ್ಮನಿರ್ಭರ ಬದುಕಿನ ನಿಟ್ಟಿನಲ್ಲಿ ಯಾವುದೇ ಭದ್ರತೆ ಪಡೆಯದೆ ನೀಡುವ ಪಿಎಂ ಸ್ವನಿಧಿ ಸಣ್ಣ ಸಾಲ ಯೋಜನೆ ಜಾರಿಯಲ್ಲಿ ಉಡುಪಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.
ಮುಖ್ಯಾಂಶಗಳು
- ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ 3,491 ಸಾಲ ನೀಡುವ ಗುರಿಗೆ 3,409 ಸಾಲ ನೀಡಿ, ಶೇ. 97ರಷ್ಟು ಸಾಧನೆ ಮಾಡಿದೆ. ರಾಯಚೂರು ಜಿಲ್ಲೆ 7,752 ಗುರಿಗೆ 6,709 ಸಾಧನೆ (ಶೇ. 86.55) ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದೆ.
- ಚಾಮರಾಜನಗರ ಜಿಲ್ಲೆ 2,441 ಸಾಲದ ಗುರಿಗೆ ಪ್ರತಿಯಾಗಿ 1,954 ಸಾಲ ನೀಡಿ ಶೇ. 80.05 ಪ್ರಗತಿಯೊಂದಿಗೆ ನಾಲ್ಕನೇ ಸ್ಥಾನ ಹಾಗೂ ವಿಜಯನಗರ ಜಿಲ್ಲೆ 5,790 ಸಾಲದ ಗುರಿಗೆ 3,932 ಸಾಲ ವಿತರಣೆ (ಶೇ. 67.91) ಸಾಧನೆ ಮೂಲಕ ಐದನೇ ಸ್ಥಾನ ಗಳಿಸಿದೆ.
- ಕೇಂದ್ರ ಸರಕಾರ ಶೇ. 7ರಷ್ಟು ಬಡ್ಡಿ ಸಹಾಯಧನ ನೀಡುತ್ತಿದೆ. ಸಾಲದ ಬಡ್ಡಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿದ್ದು, ಹೀಗಾಗಿ ಶೇ. 7ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸಾಲಗಾರ ಬ್ಯಾಂಕ್‌ಗೆ ತುಂಬಬೇಕಾಗುತ್ತದೆ.
ಪಿಎಂ ಸ್ವನಿಧಿ ಯೋಜನೆ
- ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ಬಂಡವಾಳದ ರೂಪದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆಯನ್ನು 2020 ಜೂನ್ 1 ರಂದು ಪರಿಚಯಿಸಿದೆ.
ಉದ್ದೇಶ
- ಬೀದಿ ಬದಿ ವ್ಯಾಪಾರಿಗಳು ಮೀಟರ್ ಬಡ್ಡಿ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸುವುದೂ ಪಿಎಂ ಸ್ವನಿಧಿ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಸಾಲಗಾರ ಬೀದಿ ವ್ಯಾಪಾರಿಗಳು ಸಿಬಿಲ್ ಸ್ಕೋರ್ ಇಳಿಕೆಯಾಗದಂತೆ ಪ್ರಾಮಾಣಿಕತೆಯ ವ್ಯವಹಾರದಿಂದ ಭದ್ರ ಭವಿಷ್ಯ ಹೊಂದಬಹುದು. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಜಾರಿಗೆ ತಂದಿದ್ದ ಶೂನ್ಯ ಬಡ್ಡಿದರದ ಸಾಲ ಯೋಜನೆ ‘ಬಡವರ ಬಂಧು’ ಯೋಜನೆಯ ಮಾದರಿಯಲ್ಲೇ ಕೇಂದ್ರವು ಕೂಡ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿದೆ.
ಯೋಜನೆಯ ವಿವರ
ಈ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ ರೂ. 10 ಸಾವಿರ ಸಾಲ ಸಿಗಲಿದ್ದು, ಇದನ್ನು ಒಂದು ವರ್ಷದ ಮಾಸಿಕ ಕಂತುಗಳಲ್ಲಿ ತೀರಿಸಬೇಕಾಗುತ್ತದೆ.
- ಬಂಡವಾಳ ಸಾಲದ ಅವಧಿ 1 ವರ್ಷ
- ಅವಧಿಯೊಳಗೆ ಮರುಪಾವತಿ ಮಾಡುವವರಿಗೆ ಬಡ್ಡಿಯಲ್ಲಿ ಶೇ7ರಷ್ಟು ಸಬ್ಸಿಡಿ
- ತ್ರೈಮಾಸಿಕ ಪಾವತಿಗೂ ಅವಕಾಶ
- ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹ ಕ್ಯಾಶ್ ಬ್ಯಾಕ್
- ಅವಧಿಯೊಳಗೆ ಸಾಲಮರುಪಾವತಿ ಮಾಡಿದವರ ಸಾಲದ ಅರ್ಹತೆ ಏರಿಕೆ
- ದೇಶದಾದ್ಯಂತ ನಗರ ಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆ ಒಳಗೊಳ್ಳುತ್ತದೆ
ಯಾರು ಅರ್ಹರು?
- ಮಾರ್ಚ್ 24, 2020 ಅಥವಾ ಅದಕ್ಕೂ ಮೊದಲಿನಿಂದ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು, ಬೀದಿಬದಿಯ ವ್ಯಾಪಾರಿಗಳು ಅರ್ಹರು. ಈ ಪೈಕಿ ತರಕಾರಿಗಳು, ಹಣ್ಣುಗಳು, ಚಹಾ-ಸ್ನಾಕ್ಸ್, ಬ್ರೆಡ್, ಮೊಟ್ಟೆ, ಬಟ್ಟೆ, ಪುಸ್ತಕಗಳು, ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವವರು ಅರ್ಜಿ ಸಲ್ಲಿಸಬಹುದು.
- ಈ ಮೊದಲು ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರವನ್ನು ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಸಾಲ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಈ ಯೋಜನೆಯಡಿ, ಇತ್ತೀ ಚೆಗೆ ಸರ್ಕಾರ ಸ್ಥಳೀಯ ಸಂಸ್ಥೆಯೊಂದಿಗೆ ಶಿಫಾರಸು ಪತ್ರ (ಎಲ್ಒಆರ್) ವ್ಯವಸ್ಥೆಯನ್ನು ಪರಿಚಯಿಸಿದೆ. ಆದ್ದರಿಂದ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣಪತ್ರವನ್ನು ಹೊಂದಿರದ ಬೀದಿ ಬದಿ ವ್ಯಾಪಾರಿಗಳಿಗೆ ಸಾಲವನ್ನು ಪಡೆಯಬಹುದು.
ಯೋಜನೆಯ ಪ್ರಯೋಜನಗಳು
- ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯು 2022ರ ಮಾರ್ಚ್‌ವರೆಗೆ ಅನ್ವಯವಾಗಲಿದೆ. ಈ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚಿನ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ.
- ಈಯೋಜನೆಯಡಿ ಕೆಲಸ ಪ್ರಾರಂಭಿಸಲು ಕಡಿಮೆ ಬಡ್ಡಿದರದಲ್ಲಿ ₹ 10,000 ವರೆಗೆ ಸಾಲ ನೀಡಲಾಗುತ್ತದೆ.
ಸಮಯಕ್ಕೆ ಸರಿಯಾಗಿ ನೀವುಸಾಲವನ್ನು ಪಾವತಿಸಿದರೆ, ನಂತರ ಬಡ್ಡಿಯನ್ನು ಶೇ 7ರ ದರದಲ್ಲಿ ಸಬ್ಸಿಡಿ ಮಾಡಲಾಗುತ್ತದೆ.