Published on: September 29, 2021

ಪಿಎಲ್ಐ ಸೌಲಭ್ಯ

ಪಿಎಲ್ಐ ಸೌಲಭ್ಯ

ಸುದ್ಧಿಯಲ್ಲಿ ಏಕಿದೆ?  ಜವಳಿ ಉದ್ಯಮಕ್ಕೆ ಈಚೆಗೆ ಘೋಷಿಸಲಾಗಿರುವ ₹10,683 ಕೋಟಿ ಮೊತ್ತದ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಲ್ಲಿ ಭಾರತದಲ್ಲಿ ನೋಂದಣಿ ಆಗಿರುವ ತಯಾರಿಕಾ ಕಂಪನಿಗಳು ಮಾತ್ರ ಪಾಲ್ಗೊಳ್ಳಬಹುದು ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿದೆ.

  • ಯೋಜನೆಯ ವಿವರಗಳನ್ನು ಸಚಿವಾಲಯವು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡ ಕಂಪನಿ ತಯಾರಿಸಿದ ಉತ್ಪನ್ನಗಳು ಮಾತ್ರ ಉತ್ತೇಜನಕ್ಕೆ ಅರ್ಹತೆ ಪಡೆಯುತ್ತವೆ. ಯೋಜನೆಯ ಅಡಿ 2025–26ರಿಂದ 2029–30ರವರೆಗೆ ಉತ್ತೇಜನ ನೀಡಲಾಗುತ್ತದೆ.

ಅಧಿಸೂಚನೆಯಲ್ಲಿ ಏನಿದೆ?

  • ಉದ್ಯಮ ಸಮೂಹವೊಂದಕ್ಕೆ ಸೇರಿದ ಒಂದು ಕಂಪನಿಗೆ ಮಾತ್ರ ‍ಪಿಎಲ್‌ಐ ಅಡಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅದೇ ಸಮೂಹದ ಬೇರೆ ಕಂಪನಿಗಳಿಗೆ ಯೋಜನೆಯ ಫಲಾನುಭವಿ ಆಗಲು ಅವಕಾಶವಿಲ್ಲ.
  • ಉದ್ಯಮ ಸಮೂಹಗಳು ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಸಮೂಹವು ಸಲ್ಲಿಸಿದ ಒಂದಕ್ಕಿಂತ ಹೆಚ್ಚು ಅರ್ಜಿಗಳು ಅಂತಿಮ ಹಂತಕ್ಕೆ ಆಯ್ಕೆಯಾದಲ್ಲಿ, ಯಾವ ಕಂಪನಿಗೆ ಸೌಲಭ್ಯ ಸಿಗಬೇಕು ಎಂಬುದನ್ನು ಉದ್ಯಮ ಸಮೂಹವು ಆಗ ತೀರ್ಮಾನಿಸಬೇಕು.