Published on: December 31, 2022

ಪೀಲೆ: ಫುಟ್ಬಾಲ್ ಆಟಗಾರ

ಪೀಲೆ: ಫುಟ್ಬಾಲ್ ಆಟಗಾರ

ಸುದ್ದಿಯಲ್ಲಿ ಏಕಿದೆ? ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿಶ್ವ ಫುಟ್ಬಾಲ್ ರಂಗದಲ್ಲಿ ಕಪ್ಪು ಮುತ್ತು (Black Pearl) ಎಂದೇ ಖ್ಯಾತಿ ಗಳಿಸಿದ್ದ ಬ್ರೆಜಿಲ್ ಫುಟ್ ಬಾಲ್ ಆಟಗಾರ ಪೀಲೆ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಮುಖ್ಯಾಂಶಗಳು

  • ಪೀಲೆಯವರ ನಿಧನದ ಹಿನ್ನೆಲೆಯಲ್ಲಿ ಬ್ರೆಜಿಲ್ ಸರ್ಕಾರ, ರಾಷ್ಟ್ರಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.
  • ತಮ್ಮ ವೃತ್ತಿಜೀವನದಲ್ಲಿ ಬ್ರೆಜಿಲ್ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದ ಅತ್ಯಂತ ಯಶಸ್ವಿ ನಾಯಕ ಎಂದೆನಿಸಿದ್ದರು. ಅವರ ನೇತೃತ್ವದಲ್ಲಿ ಬ್ರೆಜಿಲ್ ಫುಟ್ಬಾಲ್ ತಂಡ ಮೂರು ಬಾರಿ ವಿಶ್ವಕಪ್ ಗೆದ್ದಿತ್ತು.
  • ಮೂರು ವಿಶ್ವಕಪ್‌ಗಳು, ಎರಡು ವಿಶ್ವ ಕ್ಲಬ್ ಚಾಂಪಿಯನ್‌ಶಿಪ್‌ಗಳು ಮತ್ತು ಒಂಬತ್ತು ಸಾವೊ ಪಾಲೊ ರಾಜ್ಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು. ಮೂರು ವಿಶ್ವಕಪ್ ಗೆದ್ದ ಏಕೈಕ ಆಟಗಾರರಾಗಿದ್ದಾರೆ

ಪೀಲೆಯ ಪರಿಚಯ ಮತ್ತು ಸಾಧನೆಗಳು

  • ಪೀಲೆಯವರ ನಿಜವಾದ ಹೆಸರು ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೋ.
  • ಜನನ : ಬ್ರೆಜಿಲ್ ನ ಪುಟ್ಟ ನಗರವಾದ ಮಿನಾಸ್ ಗೆರಾಯಿಸ್ ನಲ್ಲಿ 1940ರ ಅ. 23ರಂದು ಜನಿಸಿದರು
  • ಟೈಮ್ ಮ್ಯಾಗಜೀನ್ ಮಾಡಿದ 20 ನೇ ಶತಮಾನದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಅವರನ್ನು ಹೆಸರಿಸಲಾಗಿದೆ.
  • ಅವರು 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ಫಿಫಾ ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು.
  • ಚೊಚ್ಚಲ ಪಂದ್ಯ : ಪೀಲೆ ಅವರು 15 ವರ್ಷದವರಾಗಿದ್ದಾಗ ಸ್ಯಾಂಟೋಸ್ ಸಹಿ ಹಾಕಿದರು. ಸೆಪ್ಟೆಂಬರ್ 7, 1956 ರಂದು FC ಕೊರಿಂಥಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಲೀಗ್ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದರು.
  • ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ: 1957ರಲ್ಲಿ ಮ್ಯಾರಕಾನಾದಲ್ಲಿ ನಡೆದಿದ್ದ ಅರ್ಜೆಂಟೈನಾ ಹಾಗೂ ಬ್ರೆಜಿಲ್ ನಡುವಿನ ಪಂದ್ಯ ಪೀಲೆ ಅವರ ಚೊಚ್ಚಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ
  • ಬ್ರೆಜಿಲ್ ಸರ್ಕಾರವು ಪಿಲೆಯನ್ನು ದೇಶದಿಂದ ಹೊರಗೆ ವರ್ಗಾಯಿಸುವುದನ್ನು ತಡೆದು 1961 ರಲ್ಲಿ ಅಧಿಕೃತ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿತು.
  • 1967 ರಲ್ಲಿ, ನೈಜೀರಿಯಾದಲ್ಲಿ 48 ಗಂಟೆಗಳ ಕದನ ವಿರಾಮವನ್ನು ಘೋಷಿಸಲಾಯಿತು, ಇದರಿಂದಾಗಿ ಫೆಡರಲ್ ಮತ್ತು ರೆಬೆಲ್ ಪಡೆಗಳು ಯುದ್ಧ-ಹಾನಿಗೊಳಗಾದ ರಾಷ್ಟ್ರಕ್ಕೆ ಭೇಟಿ ನೀಡಿದಾಗ ಪಿಲೆ ಆಟವನ್ನು ವೀಕ್ಷಿಸಲು ಸಾಧ್ಯವಾಯಿತು.
  • ನವೆಂಬರ್ 19, 1969 ರಂದು, ಪೀಲೆ ತಮ್ಮ ವೃತ್ತಿಜೀವನದ 1000 ನೇ ಗೋಲು ಗಳಿಸಿದರು
  • 1974ರಲ್ಲಿ ಸ್ಯಾಂಟೋಸ್‌ ತಂಡವನ್ನು ಬಿಟ್ಟು ಅಮೆರಿಕದ ನ್ಯೂಯಾರ್ಕ್‌ ಕಾಸ್ಮೊಸ್‌ ತಂಡವನ್ನು ಸೇರಿದ್ದರು. ತಮ್ಮ ಫುಟ್ಬಾಲ್ ವೃತ್ತಿ ಜೀವನಕ್ಕೆ ವಿದಾಯ ಹೇಳುವವರೆಗೂ ಅಂದರೆ 1977ರ ವರೆಗೂ ಅವರು ಇದೇ ತಂಡದಲ್ಲಿ ಆಡಿದ್ದರು.
  • ಬ್ರೆಜಿಲ್‌ನ ಸ್ಯಾಂಟೋಸ್‌ನಲ್ಲಿ, ಅವರ 1,000 ನೇ ಗೋಲಿನ ವಾರ್ಷಿಕೋತ್ಸವವನ್ನು ಆಚರಿಸಲು ನವೆಂಬರ್ 19 ನ್ನು ‘ಪೀಲೆ ಡೇ’ ಎಂದು ಕರೆಯಲಾಗುತ್ತದೆ.
  • ಅವರು 1999 ರಲ್ಲಿ ಇಂಟರ್ ನ್ಯಾಷನಲ್ ಕಮಿಟಿ (IOC) ಯಿಂದ ಶತಮಾನದ ಕ್ರೀಡಾಪಟು ಎಂದು ಆಯ್ಕೆಯಾದರು.
  • ಫಿಫಾ ದಾಖಲೆಯ ಪ್ರಕಾರ ಪೀಲೆ ಒಟ್ಟು 1,366 ಪಂದ್ಯಗಳಿಂದ 1,281 ಗೋಲುಗಳನ್ನು ದಾಖಲಿಸಿದ್ದಾರೆ.
  • ಬ್ರೆಜಿಲ್‌ನಲ್ಲಿ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಪೆರೋಲಾ ನೆಗ್ರಾ’ ಎಂದು ಕರೆಯಲಾಗುತ್ತದೆ, ಅಂದರೆ ಕಪ್ಪು ಮುತ್ತು.

ಬ್ಯಾಲನ್ ಡಿ’ಒರ್  ಗೌರವ

  • 2014ರಲ್ಲಿ ಫುಟ್ಬಾಲ್ ವಿಶ್ವದ ಅತ್ಯುನ್ನತ ವೈಯಕ್ತಿಕ ಗೌರವವಾದ ಬ್ಯಾಲನ್ ಡಿ’ಒರ್ ಅನ್ನು ಪೀಲೆಗೆ ನೀಡುವ ಮೂಲಕ ಗೌರವಿಸಲಾಗಿತ್ತು. ಮೂರು ಬಾರಿ ಬ್ರೆಜಿಲ್‌ ಪರ ವಿಶ್ವಕಪ್‌ ಗೆದ್ದಿದ್ದರಿಂದ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಪೀಲೆ ಎಂಬ ಹೆಸರು

  • ಪೀಲೆ ತಂದೆಯೂ ಸ್ಥಳೀಯ ಮಟ್ಟದಲ್ಲಿ ಒಬ್ಬ ಫುಟ್ಬಾಲ್ ಆಟಗಾರರಾಗಿದ್ದರು, ಹಾಗಾಗಿ, ಬಾಲ್ಯದಿಂದಲೇ ಫುಟ್ಬಾಲ್ ಬಗ್ಗೆ ಆಕರ್ಷಿತರಾಗಿದ್ದ ಅವರು, ತಮ್ಮ ತಂದೆಯಿಂದಲೇ ಫುಟ್ಬಾಲ್ ಕಲಿತುಕೊಂಡಿದ್ದರು. ಬ್ರೆಜಿಲ್ ನಲ್ಲಿ ಸ್ಥಳೀಯ ಆಟಗಾರ ‘Bele’ (ಬೇಲೆ) ಎಂಬಾತ ಇದ್ದ. ಬಾಲಕ ಎಡ್ಸನ್ ಅವರ ಆಟ Bele ಅವರ ಆಟಕ್ಕೆ ಹೋಲುತ್ತಿತ್ತು. ಹಾಗಾಗಿ, ಈತನ ಆಟವನ್ನು ಕಂಡ ಗೆಳೆಯರು ಹಾಗೂ ಸಹಚರರು ಎಡ್ಸನ್ ಅವರಿಗೆ ‘ಬೇಲೆ’ ಎಂದೇ ಕರೆಯುತ್ತಿದ್ದರು. ಕಾಲಕ್ರಮೇಣ ಅದು ಪೀಲೆ ಎಂದು ಬದಲಾಯಿತು.