Published on: January 31, 2023
ಪುರುಷರ ಹಾಕಿ ವಿಶ್ವಕಪ್ 2023
ಪುರುಷರ ಹಾಕಿ ವಿಶ್ವಕಪ್ 2023
ಸುದ್ದಿಯಲ್ಲಿ ಏಕಿದೆ? 2023 ಜನವರಿ 13 ರಿಂದ 29ರ ವರೆಗೆ ಭಾರತದಲ್ಲಿ FIH ಪುರುಷರ ಹಾಕಿ ವಿಶ್ವಕಪ್ ನಡೆಯಿತು.
ಮುಖ್ಯಾಂಶಗಳು
- ಭುವನೇಶ್ವರದ ಅತ್ಯಾಧುನಿಕ ಕಳಿಂಗ ಹಾಕಿ ಕ್ರೀಡಾಂಗಣ ಮತ್ತು ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ 4 ಹೊಸ ಪಿಚ್‌ಗಳಲ್ಲಿ ಪಂದ್ಯಗಳು ನಡೆಯಿತು.
- ಆತಿಥೇಯ ಭಾರತ ಸೇರಿದಂತೆ ವಿಶ್ವದ ಅಗ್ರ 16 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
- ಈ 16 ತಂಡಗಳನ್ನು 4 ತಂಡಗಳಾಗಿ ವಿಂಗಡಿಸಲಾಗಿತ್ತು .
- ಭಾರತೀಯ ಪುರುಷರ ಹಾಕಿ ತಂಡದ ವಿಶ್ವಕಪ್ ವೈಫಲ್ಯಕ್ಕೆ ಭಾರತದ ಮುಖ್ಯ ಕೋಚ್ ಸ್ಥಾನಕ್ಕೆ ಗ್ರಹಂ ರೀಡ್ ರಾಜೀನಾಮೆ ನೀಡಿದ್ದಾರೆ.
o ವಿಜೇತ ತಂಡ : ಜರ್ಮನಿ
o 2 ನೇ ಸ್ಥಾನ : ಬೆಲ್ಜಿಯಂ
o 3 ನೇ ಸ್ಥಾನ: ನೆದರ್ಲ್ಯಾಂಡ್ಸ್
o 4 ನೇ ಸ್ಥಾನ: ಆಸ್ಟ್ರೇಲಿಯಾ
ನಿಮಗಿದು ತಿಳಿದಿರಲಿ
- ಭಾರತ ತಂಡದ ನಾಯಕ : ಹರ್ಮನ್‌ಪ್ರೀತ್ ಸಿಂಗ್
- ಹಾಕಿ ಅಂತಾರಾಷ್ಟ್ರೀಯ ಒಕ್ಕೂಟವು ಕಳೆದ ಸಭೆಯಲ್ಲಿ 2022ರ ಹಾಕಿ ಮಹಿಳೆಯರ ವಿಶ್ವಕಪ್ ಟೂರ್ನಿಯ ಜಂಟಿ ಆತಿಥ್ಯವನ್ನು ನೇದರ್‌ಲೆಂಡ್ ಹಾಗೂ ಸ್ಪೇನ್‍ಗೆ ನೀಡಿತ್ತು. ನಾಲ್ಕು ಬಾರಿ ಪುರುಷರ ವಿಶ್ವಕಪ್ ಆಯೋಜನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ. 1982 (ಮುಂಬೈ), 2010 (ದೆಹಲಿ) ಹಾಗೂ 2018(ಭುವನೇಶ್ವರ) ರಲ್ಲಿ ನಡೆದಿದ್ದ ಹಾಕಿ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಭಾರತ ವಹಿಸಿಕೊಂಡಿತ್ತು.
- ಭಾರತ ಇದುವರೆಗೆ ಒಮ್ಮೆ ಮಾತ್ರ ಹಾಕಿ ವಿಶ್ವಕಪ್ ಗೆದ್ದಿದೆ. 1975 ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿತ್ತು.
- ಇಲ್ಲಿಯವರೆಗೆ ನಡೆದ ಹಾಕಿ ವಿಶ್ವಕಪ್ ಆವೃತ್ತಿಗಳ ಪ್ರಕಾರ, ಹಾಕಿಯಲ್ಲಿ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಆರು ಬಾರಿ ಫೈನಲ್ ಪ್ರವೇಶಿಸಿರುವ ಪಾಕ್, ಒಟ್ಟು ನಾಲ್ಕು ಬಾರಿ ಕಪ್ ಗೆದ್ದಿದೆ.
- 2018ರಲ್ಲಿ ಕೊನೆಯ ಹಾಕಿ ವಿಶ್ವಕಪ್ ಆವೃತ್ತಿ ನಡೆದಿತ್ತು. ಭುವನೇಶ್ವರದಲ್ಲಿಯೇ ನಡೆದ ಪಂದ್ಯಾವಳಿಯಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಬೆಲ್ಜಿಯಂ 3-2ರ ಅಂತರದಿಂದ ಪೆನಾಲ್ಟಿ ಶೂಟೌಟ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
- 2010ರಲ್ಲಿ ಫೈನಲ್ ಪ್ರವೇಶಿಸದ್ದ ಜರ್ಮನಿಯು, ಹಿಂದಿನ ಎರಡ ಆವೃತ್ತಿ(2002, 2006)ಗಳಲ್ಲಿ ಜರ್ಮನಿ ಚಾಂಪಿಯನ್ ಆಗಿತ್ತು.