Published on: January 17, 2022

ಪೈಪ್ಲೈನ್ ಅನಿಲ ಸಂಪರ್ಕ

ಪೈಪ್ಲೈನ್ ಅನಿಲ ಸಂಪರ್ಕ

ಸುದ್ಧಿಯಲ್ಲಿ ಏಕಿದೆ?  ಮನೆ ಮನೆಗೆ ಅನಿಲ ಸಂಪರ್ಕ ಒದಗಿಸುವ ಮೂಲಕ ಸಿಲಿಂಡರ್ ಗೊಡವೆ ತಪ್ಪಿಸುವ ಕೇಂದ್ರ ಸರ್ಕಾರದ ಅನಿಲ ಕೊಳವೆ ಸಂಪರ್ಕ ಯೋಜನೆಯಡಿ ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಆಯ್ಕೆಯಾಗಿದೆ.

  • ರಾಜ್ಯದ ಐದು ನಗರಗಳ ನಂತರ ರಾಜ್ಯದ ಮತ್ತೆರಡು ನಗರವನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ
  • ರಾಜಧಾನಿ ಬೆಂಗಳೂರು, ಬಂದರು ನಗರಿ ಮಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಕಲ್ಪತರು ನಗರಿ ತುಮಕೂರು, ಕುಂದಾ ನಗರಿ ಬೆಳಗಾವಿಯ ಆಯ್ದ ಭೌಗೋಳಿಕ ಪ್ರದೇಶಗಳ ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದೆ.

ಮುಖ್ಯಾಂಶಗಳು

  • ಹೈದರಾಬಾದ್ ಮೂಲದ ಬಹು ಕ್ಷೇತ್ರದ ಜಾಗತಿಕ ಸಂಸ್ಥೆ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಪಾಸ್ಟ್ರಕ್ಚರ್ ಯೋಜನೆ ಜಾರಿ ಅವಕಾಶವನ್ನು ತನ್ನದಾಗಿಸಿಕೊಂಡಿದೆ.
  • ಈಗಾಗಲೇ ರಾಜ್ಯದ ತುಮಕೂರು ಮತ್ತು ಬೆಳಗಾವಿಯಲ್ಲಿ ನೈಸರ್ಗಿಕ ಅನಿಲ ಸಂಪರ್ಕವನ್ನು ಸಾಧ್ಯವಾಗಿಸಿದ ಅನುಭವ ಹೊಂದಿರುವ ಎಂಇಐಎಲ್ ‘ನಗರ ಅಥವಾ ತಾಯಿ ಕೇಂದ್ರ (ಸಿಟಿ ಅಥವಾ ಮದರ್ ಕೇಂದ್ರ)ಗಳನ್ನು, ಮನೆ ಮನೆ ಸಂಪರ್ಕಕ್ಕೆ ಮುಖ್ಯ ಪೈಪ್‌ಲೈನ್‌ಗಳ ಅವಳಡಿಕೆ ಜತೆಗೆ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲಿದೆ.
  • ಈಗಾಗಲೇ ದೇಶದ ಮೂರು ರಾಜ್ಯಗಳಲ್ಲಿ ಎಂಇಐಎಲ್ ‘ಮೆಘಾ ಗ್ಯಾಸ್’ ಹೆಸರಿನಡಿ 32 ಸಿಎನ್‌ಜಿ ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.

ಯೋಜನೆಯ ಉದ್ದೇಶ

  • ಹಸಿರು ಅನಿಲ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಪೈಪ್‌ಗಳ ಮೂಲಕ ಗೃಹೋಪಯೋಗಿ ಮತ್ತು ಕೈಗಾರಿಕಾ ಉದ್ದೇಶಕ್ಕಾಗಿ ಅನಿಲ ಸಂಪರ್ಕ (ಪಿಎನ್‌ಜಿ), ವಾಹನ ಮತ್ತು ಆಟೋಮೋಬೈಲ್ ಕ್ಷೇತ್ರದ ಬಳಕೆಗಾಗಿ ಪಿಎನ್‌ಜಿ ಅನಿಲವನ್ನು ಒದಗಿಸುತ್ತಿದೆ.