Published on: January 15, 2022
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
ಸುದ್ಧಿಯಲ್ಲಿ ಏಕಿದೆ ? ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 642.26 ಕೋಟಿ ಮಂಜೂರಾಗಿರುವುದಾಗಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಮಾಹಿತಿ ನೀಡಿದರು.
ಏನಿದು ಯೋಜನೆ ?
- ಈ ಯೋಜನೆಯಡಿ ಕೇಂದ್ರದಿಂದ ಶೇ.60 ರಾಜ್ಯದಿಂದ ಶೇ.40 ರ ಅನುಪಾತದಲ್ಲಿ ಯೋಜನೆಯ ವೆಚ್ಚವನ್ನು ಭರಿಸಲಾಗುತ್ತಿದ್ದು, ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ್ ಜಲಾನಯನಗಳ ಉಪಚಾರಕ್ಕೆ 22 ಸಾವಿರ ರೂ., ಗುಡ್ಡಗಾಡು ಪ್ರದೇಶದ ಉಪಚಾರಕ್ಕೆ 28 ಸಾವಿರ ರೂ.ವರೆಗೆ ಅನುದಾನ ಲಭ್ಯವಾಗಲಿದೆ. ಈ ಯೋಜನೆಯನ್ನು ರಾಜ್ಯದ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವನ್ನು ಉಪಚರಿಸಲು ಅನುಮೋದನೆ ನೀಡಲಾಗಿದೆ
- 2021-22 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ ಸುಜಲ-iii ಯೋಜನೆ ಮಾದರಿಯಲ್ಲಿ ವಿಶ್ವ ಬ್ಯಾಂಕ್ ಅನುದಾನದ ನೆರವಿನಲ್ಲಿ ಹೊಸ ರಿವಾರ್ಡ್ (ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿಯ ಮೂಲಕ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ ಯೋಜನೆ) ಜಾರಿಗೊಳಿಸಿ ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ವಿಶ್ವ ಬ್ಯಾಂಕಿನ ಶೇ.70 ರಾಜ್ಯದ ಶೇ.30 ಪಾಲಿನಂತೆ ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ ಅನುಷ್ಠಾನಗೊಳಿಸಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ
- ಮಳೆ ನೀರು ಕೊಯ್ಲ ಮೂಲಕ ಮಣ್ಣಿನ ತೇವಾಂಶ ಸಂರಕ್ಷಿಸುವುದು, ಪರ್ಯಾಯ ಬೆಳೆ ವ್ಯವಸ್ಥೆಗಳು, ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯಗಳನ್ನು ಎದುರಿಸುವುದು, ಅಂತರ್ಜಲ ಹೆಚ್ಚಿಸಲು ಅನುಕೂಲವಾಗುತ್ತದೆ.
- ಆಸ್ತಿ ರಹಿತರಿಗೆ ಸ್ವಸಹಾಯ ಗುಂಪುಗಳನ್ನು ರಚಿಸಿ (SHGs) ಉತ್ತೇಜಿಸುವುದು, ವಿಕಲ ಚೇತನರು ಮತ್ತು ಮಹಿಳೆಯರಿಗೆ ಅಭಿವೃದ್ಧಿಪಡಿಸಿದ ಭೂಮಿ, ನೀರು ಮತ್ತು ಜೀವರಾಶಿ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನ ಪ್ರವೇಶ ಮತ್ತು ಅವಕಾಶ ಹಾಗೂ ಎಫ್. ಪಿ. ಒ ಬಳಕೆದಾರರ ಗುಂಪುಗಳು ಮುಂತಾದ ವಿವಿಧ ಸಮುದಾಯ ಸಂಸ್ಥೆಗಳಲ್ಲಿ ಈ ವರ್ಗಗಳ ಜನರಿಗೆ ಸದಸ್ಯತ್ವ ನೀಡಲು ಉತ್ತೇಜಿಸುವುದಾಗಿದೆ
‘ಲೈಟ್ ಹೌಸ್’
- ದೇಶದಲ್ಲಿಯೇ ಕರ್ನಾಟಕ ಕೃಷಿ ಇಲಾಖೆಯ ಜಲಾನಯನ ಇಲಾಖೆಯು ಇತರೆ ರಾಜ್ಯಗಳಿಗೆ ತಾಂತ್ರಿಕ ಸಲಹೆ ನೀಡಲು ಮಾದರಿಯಾಗಿದ್ದು, ಕರ್ನಾಟಕ ರಾಜ್ಯವನ್ನು ಕೇಂದ್ರ ಸರ್ಕಾರ ‘ಲೈಟ್ ಹೌಸ್’ ಎಂದು ಗುರುತಿಸಿರುವುದು ಕರ್ನಾಟಕದ ಹೆಮ್ಮೆ
ರಿವಾರ್ಡ್ ಯೋಜನೆಯಡಿ ಕೈಗೊಳ್ಳುವ ಪ್ರಮುಖ ಚಟುವಟಿಕೆಗಳು:
- ಈಗಾಗಲೇ ರಾಜ್ಯದ 14 ಲಕ್ಷ ಹೇಕ್ಟೇರ್ ಪ್ರದೇಶದ 11 ಜಿಲ್ಲೆಗಳಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ಗಳನ್ನು ವಿತರಿಸಲಾಗಿದೆ. ಪ್ರಸ್ತುತ ಹೊಸದಾಗಿ 9 ಜಿಲ್ಲೆಗಳು ಸೇರಿದಂತೆ 19.41 ಲಕ್ಷ ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕೈಗೊಳ್ಳಲಾಗುವುದು.
- ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ ಬಳಸುವುದರಿಂದ ರೈತರಿಗೆ ಹಿಡುವಳಿವಾರು ಮಣ್ಣಿನ ಪೋಷಾಕಾಂಶಗಳ ಅನ್ವಯ ನಿರ್ದಿಷ್ಟ್ಟ ತಾಂತ್ರಿಕತೆಗಳ ಶಿಪಾರಸ್ಸುನ್ನು ಕೊಡಲು ಸಹಕಾರಿಯಾಗುತ್ತದೆ.
- 1 ಲಕ್ಷ ಹೆ. ಜಲಾನಯನ ಪ್ರದೇಶದಲ್ಲಿ (20 ಉಪಜಲಾನಯನಗಳು) ಭೂ-ಸಂಪನ್ಮೂಲ (LRI) ಮತ್ತು ಜಲವಿಜ್ಞಾನ ಅಧ್ಯಯನದ (Hydrology) ಶಿಫಾರಸ್ಸುಗಳನ್ನು ಆದರಿಸಿ ವೈಜ್ಞಾನಿಕವಾಗಿ ಸಂಪೂರ್ಣ ಜಲಾನಯನದ ಉಪಚಾರ ಕೈಗೊಳ್ಳುವುದು.
- ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿ
- ರೈತರಿಗೆ ಸುಧಾರಿತ ಕೃಷಿ – ಹವಾಮಾನ ಸಲಹಾ ಸೇವೆ ಒದಗಿಸುವುದು ಭಾರತ ದೇಶದಲ್ಲಿಯೇ ಪ್ರಥಮವಾಗಿದೆ
- ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು ಸಂಸ್ಥೆಯಲ್ಲಿ ಜಲಾನಯನ ನಿರ್ವಹಣೆ ಕುರಿತು ಅತ್ಯುನ್ನತ ಮಟ್ಟದ ಅಧ್ಯಯನ ಮತ್ತು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ