Published on: May 24, 2024

ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ

ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ

ಸುದ್ದಿಯಲ್ಲಿ ಏಕಿದೆ? 2024ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 39ನೇ ಸ್ಥಾನಕ್ಕೆ ಏರಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳು ಹಾಗೂ ಕೆಳ ಮಧ್ಯಮ ಆದಾಯದ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. 2021ರಲ್ಲಿ ಭಾರತವು 54ನೇ ಸ್ಥಾನದಲ್ಲಿತ್ತು.

ಮುಖ್ಯಾಂಶಗಳು

  • ಡಬ್ಲ್ಯುಇಎಫ್ ಹಾಗೂ ಸರ್ರೆ ವಿಶ್ವವಿದ್ಯಾಲಯವು ಜಂಟಿಯಾಗಿ ಈ ವರದಿ ಸಿದ್ಧಪಡಿಸಿವೆ.
  • ಡಬ್ಲ್ಯುಇಎಫ್ ವರದಿ ಪ್ರಕಾರ ಅಮೆರಿಕವು ಮೊದಲ ಸ್ಥಾನದಲ್ಲಿದೆ.
  • ಪ್ರವಾಸೋದ್ಯಮದ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಬೆಲೆ (18ನೇ ಸ್ಥಾನ), ಸ್ಪರ್ಧಾತ್ಮಕ ವಿಮಾನ ಸಾರಿಗೆ (26ನೇ ಸ್ಥಾನ) ಹಾಗೂ ಬಂದರು ಮೂಲ ಸೌಕರ್ಯದಲ್ಲಿ (25ನೇ ಸ್ಥಾನ) ಭಾರತದ ಸಾಧನೆ ಅತ್ಯುತ್ತಮವಾಗಿದೆ.
  • ಭಾರತವು ನೈಸರ್ಗಿಕ (6ನೇ ಸ್ಥಾನ) ಹಾಗೂ ಸಾಂಸ್ಕೃತಿಕವಾಗಿ (9ನೇ ಸ್ಥಾನ) ಸಂಪದ್ಭರಿತವಾಗಿದೆ.
  • ದೇಶದ ಒಟ್ಟಾರೆ ಸೂಚ್ಯಂಕವು ಶೇ 2.1ರಷ್ಟಿದ್ದು, 2019ಕ್ಕಿಂತಲೂ ಕಡಿಮೆ ಇದೆ. ಯುರೋಪ್ ಹಾಗೂ ಏಷ್ಯಾ–ಪೆಸಿಫಿಕ್ ಪ್ರದೇಶದ ರಾಷ್ಟ್ರಗಳು ಸೂಚ್ಯಂಕದಲ್ಲಿ ಮುಂದಿವೆ.

ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ

  • ವಿಶ್ವದ 119 ದೇಶಗಳಲ್ಲಿರುವ ನೀತಿಗಳ ಅನುಸಾರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವು ವಿಶ್ವ ಆರ್ಥಿಕ ವೇದಿಕೆ (WEF) ಬಿಡುಗಡೆ ಮಾಡಿದ ದ್ವೈವಾರ್ಷಿಕ ವರದಿಯಾಗಿದೆ.
  • ಮೊದಲ ಸೂಚ್ಯಂಕವನ್ನು 2022 ರಲ್ಲಿ ಬಿಡುಗಡೆ ಮಾಡಲಾಗಿತ್ತು

ಹಿಂದೆ, WEF 2007 ರಿಂದ ದ್ವೈವಾರ್ಷಿಕವಾಗಿ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕವನ್ನು (TTCI) ಪ್ರಕಟಿಸುತ್ತಿತ್ತು. TTCI ಅನ್ನು ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ ಎಂದು ಬದಲಾಯಿಸಲಾಯಿತು.