Published on: November 2, 2022

ಫ್ರೆಂಚ್ ಓಪನ್ (ಬ್ಯಾಡ್ಮಿಂಟನ್)

ಫ್ರೆಂಚ್ ಓಪನ್ (ಬ್ಯಾಡ್ಮಿಂಟನ್)

ಸುದ್ದಿಯಲ್ಲಿ ಏಕಿದೆ?

ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಚೈನೀಸ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವುದರೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ.

ಮುಖ್ಯಾಂಶಗಳು

  • ಇದರೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ ತಮ್ಮ ಮೊದಲ ಸೂಪರ್ 750 ಮತ್ತು ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದರು.
  • ಇದು ಅವರ ನಾಲ್ಕನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಹೈದರಾಬಾದ್ ಓಪನ್ 2018, ಥೈಲ್ಯಾಂಡ್ ಓಪನ್ 2019 ಮತ್ತು ಇಂಡಿಯಾ ಓಪನ್ 2022 ಗಳಲ್ಲಿ ಈ ಜೋಡಿ ಗೆಲುವು ಸಾಧಿಸಿತ್ತು.
  • 1983 ರಲ್ಲಿ ಪಾರ್ಥೋ ಗಂಗೂಲಿ ಮತ್ತು ವಿಕ್ರಮ್ ಸಿಂಗ್ ಅವರ ವಿಜಯದ ನಂತರ ಭಾರತೀಯ ಪುರುಷರ ಡಬಲ್ಸ್ ಜೋಡಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಇದೇ ಮೊದಲು.